ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಉಗ್ರ ಗುಲ್‌ಗೆ ಕೇರಳ, ಕರ್ನಾಟಕದ ಲಿಂಕ್ 

Published : May 08, 2025, 08:26 AM IST
ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಉಗ್ರ ಗುಲ್‌ಗೆ ಕೇರಳ, ಕರ್ನಾಟಕದ ಲಿಂಕ್ 

ಸಾರಾಂಶ

Sheikh Sajjad Gul: ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಶೇಖ್ ಸಜ್ಜದ್ ಗುಲ್‌ಗೆ ಕರ್ನಾಟಕ ಮತ್ತು ಕೇರಳದ ಲಿಂಕ್ ಇರುವುದು ಬೆಳಕಿಗೆ ಬಂದಿದೆ. ಈ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. 

ನವದೆಹಲಿ: ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಎಂದು ಗುರುತಿಸಲಾಗಿರುವ ಉಗ್ರ ಶೇಖ್ ಸಜ್ಜದ್ ಗುಲ್‌ಗೆ ಉರ್ಫ್ ಸಜ್ಜದ್ ಅಹ್ಮದ್ ಶೇಖ್ ಕರ್ನಾಟಕ ಮತ್ತು ಕೇರಳದ ಲಿಂಕ್ ಇರೋದು ಬೆಳಕಿಗೆ ಬಂದಿದೆ. ಏಪ್ರಿಲ್ 22ರ ನಡೆದ ದಾಳಿಯಲ್ಲಿ ಓರ್ವ ಸ್ಥಳೀಯ ಸೇರಿದಂತೆ 26 ಪ್ರವಾಸಿಗರು ಮೃತರಾಗಿದ್ದಾರೆ. ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ ಹೆಸಿರನಲ್ಲಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಪಹಲ್ಗಾಮ್ ದಾಳಿಯ ಹೊಣೆಯನ್ನು  ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯ ಶಾಖೆಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್  (The Resistance Front-TRF) ತೆಗೆದುಕೊಂಡಿತ್ತಿ. ಉಗ್ರ ಶೇಖ್ ಸಜ್ಜದ್ ಗುಲ್ ಈ ಸಂಘಟನೆಯಲ್ಲಿ ಭಾಗಿಯಾಗುವ ಮೊದಲು ಕರ್ನಾಟಕ ಮತ್ತು ಕೇರಳದಲ್ಲಿ ಅಧ್ಯಯನ ಮಾಡಿದ್ದನು ಎಂದು ವರದಿಯಾಗಿದೆ. 

ಸದ್ಯ ಉಗ್ರ ಗುಲ್ ಪಾಕಿಸ್ತಾನದ ರಾವಲ್ಪಿಂಡಿಯ ಎಲ್‌ಇಟಿ ಸಂಘಟನೆಯ ರಕ್ಷಣೆಯಲ್ಲಿ ಅಡಗಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ಹಿಂದೆ ನಡೆದ ದೇಶದಲ್ಲಿ ನಡೆದ ಹಲವು ಉಗ್ರ ಚಟುವಟಿಕೆಗಳಲ್ಲಿ ಗುಲ್ ಭಾಗಿಯಾಗಿದ್ದನು. 2020 ರಿಂದ 2024ರವರೆಗೆ ಮಧ್ಯ ಮತ್ತು ದಕ್ಷಿಣ ಕಾಶ್ಮೀರದಲ್ಲಿ ನಡೆದ ಹತ್ಯೆಗಳು, 2023ರ ಮಧ್ಯ ಕಾಶ್ಮೀರದಲ್ಲಿ ನಡೆದ ಗ್ರೆನೇಡ್ ದಾಳಿ, ಗಗಂಗೀರ್ ಮತ್ತು ಗಂಡರ್‌ಬಾಲ್‌ನ ಝಡ್-ಮೋರ್ಹ್ ಸುರಂಗದಲ್ಲಿ ಜಮ್ಮು ಕಾಶ್ಮೀರದ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಉಗ್ರ ಗುಲ್ ಹೆಸರು ಕೇಳಿ ಬಂದಿದೆ. ಕಳೆದ ಐದು ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಉಗ್ರ ಶೇಖ್ ಸಜ್ಜದ್ ಗುಲ್‌ ಸಂಬಂಧ ಹೊಂದಿದ್ದಾನೆ. 

ಏಪ್ರಿಲ್ 2022ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಶೇಖ್ ಸಜ್ಜದ್ ಗುಲ್‌ನನ್ನು ಉಗ್ರ ಎಂದು ಘೋಷಿಸಿ, ಈತನ ತಲೆಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಸಹ ಘೋಷಣೆ ಮಾಡಿತ್ತು. ಪಹಲ್ಗಾಮ್ ಪ್ರಕರಣ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಗುಂಡಿನ ದಾಳಿ ನಡೆಸಿದ ಉಗ್ರರೊಂದಿಗೆ ಶೇಖ್ ಸಜ್ಜದ್ ಗುಲ್‌ ಸಂಪರ್ಕದಲ್ಲಿದ್ದನು. ಉಗ್ರ ಶೇಖ್ ಸಜ್ಜದ್ ಗುಲ್‌ ಸೂಚನೆಯೇ ಮೇರೆಗೆ  ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆ ಪಹಲ್ಗಾಮ್ ದಾಳಿಯನ್ನು ಪ್ಲಾನ್ ಮಾಡಿತ್ತು ಮತ್ತು ಆತನ ಆದೇಶ ಮೇರೆಗೆ ಕಾರ್ಯನಿರ್ವಹಿಸಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: Operation Sindoor: ನಮ್ಮವರ ಹಂತಕರಷ್ಟೇ ಹತ್ಯೆ: ಕೆಂದ್ರ ಸಚಿವ ರಾಜನಾಥ್‌ ಸಿಂಗ್‌

ಪಾಕಿಸ್ತಾನ ಗುಪ್ತಚರ ಸಂಸ್ಥೆಯೊಂದಿಗೆ ಗುಲ್ ಸಂಪರ್ಕ 
ವರದಿಗಳ ಪ್ರಕಾರ, ಶೇಖ್ ಸಜ್ಜದ್ ಗುಲ್‌ ಪಾಕಿಸ್ತಾನ ಗುಪ್ತಚರ ಸಂಸ್ಥೆಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದಾನೆ. ಪಂಜಾಬಿ ನೇತೃತ್ವದ ಎಲ್‌ಇಟಿಗೆ ಕಾಶ್ಮೀರಿ ಮುಂಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಶ್ರೀನಗರದಲ್ಲಿ ಶಿಕ್ಷಣ ಪಡೆದಿರುವ ಗುಲ್, ನಂತರ ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದಾನೆ. ಎಂಬಿಎ ಪದವಿ ಪಡೆದ ಬಳಿಕ ಕೇರಳದಲ್ಲಿ ಲ್ಯಾಬ್ ಟೆಕ್ನೀಷಿಯನ್ ಕೋರ್ಸ್ ಪೂರ್ಣಗೊಳಿಸಿ ಕಾಶ್ಮೀರಕ್ಕೆ ಹಿಂದಿರುಗಿದ್ದನು. ಕಾಶ್ಮೀರಕ್ಕೆ ತೆರಳಿದ ಬಳಿಕ ಉಗ್ರ ಗುಲ್, ತನ್ನದೇ ಆದ ಸ್ವಂತ ಲ್ಯಾಬ್ ಆರಂಭಿಸಿದ್ದನು. ಈ ಲ್ಯಾಬ್ ಮೂಲಕ ಭಯೋತ್ಪಾದಕ ಗುಂಪಿಗೆ ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸಲು ಬಳಸುತ್ತಿದ್ದನು. 

ಕಳೆದ ಎರಡು ದಶಕಗಳಿಂದಲೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಗುಲ್, ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ 5 ಕೆಜಿ ಆರ್‌ಡಿಎಕ್ಸ್‌ ಜೊತೆಯಲ್ಲಿ ಗುಲ್‌ನನ್ನು ದೆಹಲಿ ಪೊಲೀಸರ ವಿಶೇಷ ದಳ ಬಂಧಿಸಿತ್ತು. ಈ ಪ್ರಕರಣದಲ್ಲಿ ಗುಲ್ 10 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿ 2017ರಲ್ಲಿ ಬಿಡುಗಡೆಯಾಗಿದ್ದನು. ಜೈಲಿನಿಂದ ಬರುತ್ತಿದ್ದಂತೆ ಗುಲ್ ಪಾಕಿಸ್ತಾನಕ್ಕೆ ತೆರಳಿ, ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದಾನೆ. ಗುಲ್ ಕುಟುಂಬದ ಸದಸ್ಯರು ಸಹ ಭಯೋತ್ಪಾದಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ಗುಲ್ ಸೋದರ ಓರ್ವ ವೈದ್ಯನಾಗಿದ್ದರೂ, ಉಗ್ರಗಾಮಿಯಾಗಿದ್ದನು. ಸದ್ಯ ಗಲ್ಫ್ ರಾಷ್ಟ್ರದಲ್ಲಿರುವ ಈತ  ಭಯೋತ್ಪಾದನೆ ಸಂಘಟನೆಗಳಿಗೆ ಹಣಕಾಸು ಒದಗಿಸುವ ಕಾರ್ಯದಲ್ಲಿ ಭಾಗಿಯಾಗಿದ್ದನು ಎಂದು ವರದಿಯಾಗಿದೆ.

ಇದನ್ನು ಓದಿ: ಆಪರೇಷನ್‌ ಸಿಂದೂರ ಹೆಮ್ಮೆಯ ಕ್ಷಣ: ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಬಣ್ಣನೆ

ಧರ್ಮ ಕೇಳಿ ಗುಂಡಿಟ್ಟರು 
ವರದಿಗಳ ಪ್ರಕಾರ, ಪ್ರವಾಸಿಗರು ವಿಹರಿಸುತ್ತಿದ್ದ ಪಹಲ್ಗಾಮ್‌ಗೆ ಕಣಿವೆ ಪ್ರದೇಶದಿಂದ ಎಂಟ್ರಿ ಕೊಟ್ಟ ಉಗ್ರರು ಧರ್ಮ ಕೇಳಿ ಗುಂಡಿಟ್ಟರು. ಈ ದಾಳಿಯಲ್ಲಿ ಉಗ್ರರನ್ನು ತಡೆಯಲು ಮುಂದಾದ ಓರ್ವ ಸ್ಥಳೀಯ ಪ್ರವಾಸಿಗೈಡ್ ಮೃತರಾಗಿದ್ದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ