ಪದ್ಮಶ್ರೀ ಪುರಸ್ಕೃತ ಡಾ.ಆರ್‌ಎನ್ ಸಿಂಗ್ ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷರಾಗಿ ಆಯ್ಕೆ!

By Suvarna NewsFirst Published Jul 17, 2021, 7:15 PM IST
Highlights
  • ಕೇಸರಿ ಪಡೆ ವಿಶ್ವ ಹಿಂದೂ ಪರಿಷತ್‌ಗೆ ನೂತನ ಅಧ್ಯಕ್ಷರ ಆಯ್ಕೆ
  • ಪದ್ಮಶ್ರಿ ಪುರಸ್ಕೃತ, ವೈದ್ಯ ಆರ್‌ಎನ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆ

ರಾಂಚಿ(ಜು.17):  ವಿಶ್ವಹಿಂದೂ ಪರಿಷತ್ ನೂತನ ಅಧ್ಯಕ್ಷರಾಗಿ ಪದ್ಮಶ್ರಿ ಪುರಸ್ಕೃತ, ಮೂಳೆ ಶಸ್ತ್ರಚಿಕಿತ್ಸಕ ವೈದ್ಯ ರಬೀಂದ್ರ ನರೈನ್ ಸಿಂಗ್ ಆಯ್ಕೆಯಾಗಿದ್ದಾರೆ. ಇಂದ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಡಾ.ಆರ್‌ಎನ್ ಸಿಂಗ್ ಅವರನ್ನು ಕೇಸರಿ ಪಡೆಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಪಾಕ್ ಮೀತಿ ಮೀರಿದ್ರೆ ಇಸ್ಲಾಮಾಬಾದ್‌ನಲ್ಲೂ ರಾಮಮಂದಿರ!

ಪದ್ಮಶ್ರೀ ರವೀಂದ್ರ ನರೈನ್ ಸಿಂಗ್ ಅವರನ್ನು ವಿಶ್ವಹಿಂದೂ ಪರಿಷತ್ ಟ್ರಸ್ಟಿ ಮಂಡಳಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ ಎಂದು ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಿಹಾರ ಮೂಲದ ಡಾ.ಆರ್‌ಎನ್ ಸಿಂಗ್ ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 

ದಕ್ಷಿಣ ಕನ್ನಡದ ಪ್ರಸಿದ್ಧ ದೇಗುಲದಲ್ಲಿ ಅಶ್ಲೀಲ ಫೊಟೊಶೂಟ್ : ಮಹತ್ವದ ನಿರ್ಣಯ

2018 ರ ಏಪ್ರಿಲ್‌ನಲ್ಲಿ ವಿಎಚ್‌ಪಿ ಅಧ್ಯಕ್ಷರಾಗಿ ಆಯ್ಕೆಯಾಗಿ ಇದುವರೆಗೆ ಸೇವೆ ಸಲ್ಲಿಸುತ್ತಿದ್ದ ವಿಷ್ಣು ಸದಾಶಿವ್ ಕೊಕ್ಜೆ ಅವರ ಸ್ಥಾನವನ್ನು ನೂತನವಾಗಿ ಆಯ್ಕೆಯಾಗಿರುವ ಸಿಂಗ್ ಅಲಂಕರಿಸಲಿದ್ದಾರೆ.  ಡಾ.ಆರ್‌ಎನ್ ಸಿಂಗ್  ವೈದ್ಯಕ್ಷೀಯ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ 2010ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರೀಕ ಗೌರವ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಿದೆ.

click me!