
ನವದೆಹಲಿ(ಜು.17): ಕೇಂದ್ರ ಸರ್ಕಾರ ತಂದಿರುವ 3 ಕೃಷಿ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನಗಳು ಇದೀಗ ಮುಂಗಾರು ಅಧಿವೇಶನ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಟ್ರಾಕ್ಟರ್ ರ್ಯಾಲಿ ಆಯೋಜಿಸಿ ಗಲಭೆಗೆ ಕಾರಣವಾಗಿದ್ದ ರೈತ ಸಂಘಟನೆಗಳು ಇದೀಗ ಸಂಸತ್ ಹೊರಭಾಗದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.
ಕೆಂಪುಕೋಟೆ ವಶಪಡಿಸಲು ಸಂಚು ನಡೆದಿತ್ತು;ಟ್ರಾಕ್ಟರ್ ರ‍್ಯಾಲಿ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!
ಜುಲೈ 22 ರಿಂದ ಪ್ರತಿಭಟನೆ ಆರಂಭಿಸಲು ಭಾರತೀಯ ಕಿಸಾನ್ ಯೂನಿಯನ್ ಸಂಘಟದ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ. ಜುಲೈ 19 ರಿಂದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ. ಈ ವೇಳೆ ಕೇಂದ್ರದ ಮೇಲೆ ಒತ್ತಡ ತರಲು ರೈತ ಸಂಘಟನೆಗಳು ಮುಂದಾಗಿದೆ.
ಜುಲೈ 22 ರಿಂದ ಆರಂಭಗೊಳ್ಳಲಿರುವ ಸಂಸತ್ ಹೊರಭಾಗದಲ್ಲಿನ ರೈತ ಪ್ರತಿಭಟನೆ ಮುಂಗಾರು ಅಧಿವೇಶನ ಅಂತ್ಯದವರೆಗೆ ಅಂದರೆ ಆಗಸ್ಟ್ 13ರ ವರೆಗೆ ನಡೆಸಲು ರೈತ ಸಂಘಟನೆ ನಿರ್ಧರಿಸಿದೆ. ರೈತ ಸಂಘಟನೆಗಳ ನಿರ್ಧಾರ ಇದೀಗ ದೆಹಲಿ ಪೊಲೀಸರಿಗೆ ತಲೆನೋವಾಗಿದೆ.
ಟ್ರ್ಯಾಕ್ಟರ್ ರ‍್ಯಾಲಿ ಬಳಿಕ ಸಂಸತ್ ಚಲೋ ರ‍್ಯಾಲಿಗೆ ಸಜ್ಜಾದ ರೈತ ಸಂಘಟನೆ!
ನಾಳೆ(ಜು.18) ದೆಹಲಿ ಹಿರಿಯ ಪೊಲೀಸ್ ಅಧಿಕಾರಿಗಳು ರೈತ ಮುಖಂಡರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಪ್ರತಿಭಟನೆ ಸ್ಥಳ ಬದಲಾಯಿಸಲು ಸೂಚಿಸಲಿದ್ದಾರೆ. ಭದ್ರತೆಯ ಕಾರಣದಿಂದ ಸಂಸತ್ ಹೊರಭಾಗದಲ್ಲಿ ಪ್ರತಿಭಟನೆ ಅಸಾಧ್ಯವಾಗಿದೆ. ಹೀಗಾಗಿ ಸ್ಥಳ ಬದಲಿಸುವಂತೆ ದೆಹಲಿ ಪೊಲೀಸರು ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ