ಹೊಸ ವರ್ಷಕ್ಕೆ ದಾಖಲೆಯ ಓಯೋ ರೂಮ್ ಬುಕ್ಕಿಂಗ್‌, ಪ್ರತಿ ಗಂಟೆಗೆ ಸೇಲ್ ಆದ ಕಾಂಡೋಮ್ ಎಷ್ಟ್‌ ಗೊತ್ತಾ?

By Vinutha Perla  |  First Published Jan 4, 2024, 9:41 AM IST

ಹೊಸ ವರ್ಷ ಆರಂಭವಾಗಿ ಈಗಾಗಲೇ ಎರಡು ದಿನಗಳು ಕಳೆದಿವೆ. ಹಾಗೆಯೇ ನ್ಯೂ ಇಯರ್ ದಿನ ನಡೆದ ಹಲವು ಘಟನೆಗಳು ಬಹಿರಂಗಗೊಂಡು ಅಚ್ಚರಿ ಮೂಡಿಸುತ್ತಿವೆ. ಸದ್ಯ ಹೊಸ ವರ್ಷಕ್ಕೆ ದಾಖಲೆಯ ಓಯೋ ರೂಮ್ ಬುಕ್ಕಿಂಗ್‌ ಆಗಿದೆ ಎಂದು ತಿಳಿದುಬಂದಿದೆ. ಹಾಗೆಯೇ ಗಂಟೆಗೆ ಅತ್ಯಧಿಕ ಕಾಂಡೋಮ್ ಆರ್ಡರ್ ಮಾಡಲಾಗಿದೆ.


ಹೊಸ ವರ್ಷ ಆರಂಭವಾಗಿ ಈಗಾಗಲೇ ಎರಡು ದಿನಗಳು ಕಳೆದಿವೆ. ಆದರೆ ಇನ್ನೂ ಹೊಸ ವರ್ಷದ ಗುಂಗು ಇನ್ನೂ ಇಳಿದಿಲ್ಲ. ಅದೆಷ್ಟೋ ಮಂದಿ ಇನ್ನೂ ರೆಸಾರ್ಟ್‌, ಟ್ರಿಪ್ ಅಂತ ಸುತ್ತಾಡುತ್ತಲೇ ಇದ್ದಾರೆ. ಹೊಸ ವರ್ಷದ ಸಂಭ್ರಮಕ್ಕೆ ಕುಡಿದು ತೂರಾಡುವವರ ಸಂಖ್ಯೆ ಹೆಚ್ಚಾಗಿತ್ತು. ಪಬ್‌, ಹೊಟೇಲ್, ಪಾರ್ಟಿ ಅಂತ ಎಂಜಾಯ್ ಮಾಡಿದ್ರು. ಅದರಲ್ಲಿಯೂ ಹೋಟೆಲ್, ಲಾಡ್ಜ್‌ಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದು ಸಾಮಾನ್ಯವಾಗಿತ್ತು. ಈ ನಡುವೆ,ಬೆಂಗಳೂರಿನಲ್ಲಿ ಓಯೋ ಬುಕ್ಕಿಂಗ್ ನಲ್ಲಿ ಕೂಡಾ ದಾಖಲೆ ಮಟ್ಟದಲ್ಲಿ ಸೇಲ್ ಆಗಿದೆ ಎಂದು ತಿಳಿದುಬಂದಿದೆ.

2023ರ ಹೊಸ ವರ್ಷದ ಮೊದಲ ದಿನ ಓಯೋ ರೂಮ್‌ಗಳ ಬುಕಿಂಗ್‌ ಶೇಕಡಾ 37ರಿಂದ 6.2 ಲಕ್ಷಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಡಿಸೆಂಬರ್ 30 ಮತ್ತು 31ರ ನಡುವೆ ಕೊನೆಯ ನಿಮಿಷದಲ್ಲಿ 2.3 ಲಕ್ಷ ಬುಕ್ಕಿಂಗ್‌ಗಳು ಆಗಿವೆ. ಅದರಲ್ಲೂ ದೇಶದ ಕೆಲವು ಯಾತ್ರಾ ಸ್ಥಳಗಳಲ್ಲಿ ಹೆಚ್ಚು ಹೋಟೆಲ್‌ ರೂಂ ಬುಕ್ಕಿಂಗ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಯೋಧ್ಯೆಯಲ್ಲಿ ಬುಕಿಂಗ್‌ನಲ್ಲಿ ಶೇಕಡಾ 70ರಷ್ಟು ಏರಿಕೆ ಕಂಡಿದೆ.  ಗೋವಾದಲ್ಲಿ ಶೇಕಡಾ 50ರಷ್ಟು ಮತ್ತು ನೈನಿತಾಲ್‌ನಲ್ಲಿ ಶೇಕಡಾ 60ರಷ್ಟು ಹೆಚ್ಚಳವಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಓಯೋ ಬುಕ್ಕಿಂಗ್ ಪ್ರಮಾಣ, ಹಿಂದಿನ ವರ್ಷಕ್ಕೆ ಹೋಲಿಸಿದರೆ 37 ಶೇಕಡಾ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.

Latest Videos

undefined

ಹೊಸ ವರ್ಷದ ಮೊದಲ ದಿನದಿಂದಲೇ 5 ಪ್ರಮುಖ ಬದಲಾವಣೆಗಳು ಜಾರಿ: ವಿವರ ಹೀಗಿದೆ..

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ ಬಂದ ಕಾಂಡೋಮ್ ಆರ್ಡರ್ ಎಷ್ಟು?
ಮಾತ್ರವಲ್ಲ, ಹೊಸ ವರ್ಷದ ಸಂಭ್ರಮಾಚರಣೆಯ ಜೊತೆಗೆ ಕಾಂಡೋಮ್‌ಗಳಿಗಾಗಿ ಆನ್‌ಲೈನ್ ಆರ್ಡರ್‌ಗಳ ಸಂಖ್ಯೆ ಹೆಚ್ಚಿದೆ. swiggy Instamartನಲ್ಲಿ ಪ್ರತಿ ಗಂಟೆಗೆ 1,722 ಯೂನಿಟ್ ಕಾಂಡೋಮ್‌ಗಳನ್ನು ಆರ್ಡರ್ ಮಾಡಲಾಗಿರುವುದು ಬಯಲಾಗಿದೆ. ಮಾತ್ರವಲ್ಲ, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಎರಡು ಲಕ್ಷ ಕಿಲೋ ಈರುಳ್ಳಿ ಮತ್ತು 1.80 ಲಕ್ಷ ಕಿಲೋ ಆಲೂಗಡ್ಡೆ ಆರ್ಡರ್ ಮಾಡಿದ್ದಾರಂತೆ. ಇದನ್ನು ಹೊರತುಪಡಿಸಿ, ಮಿಕ್ಸರ್‌ಗಳು ಮತ್ತು ಗ್ಲಾಸ್‌ಗಳು ಸೇರಿದಂತೆ ಇನ್ನಿತರ ಐಟಂಗಳ ಹುಡುಕಾಟ ಹತ್ತು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. 1.04 ಲಕ್ಷ ಜನರು ಇತರರಿಗೆ ಆಹಾರವನ್ನು ಆರ್ಡರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನ್ಯೂ ಇಯರ್‌ಗೆ ಬಿರಿಯಾನಿ ಆರ್ಡರ್ ಮಾಡಿದವರ ಸಂಖ್ಯೆಯೂ ಹೆಚ್ಚಿದೆ. ಹೈದರಾಬಾದ್ ಒಂದರಲ್ಲೇ, swiggy 4.8 ಲಕ್ಷಕ್ಕೂ ಹೆಚ್ಚು ಬಿರಿಯಾನಿ ಆರ್ಡರ್‌ಗಳನ್ನು ಸ್ವೀಕರಿಸಿದೆ,. ಹೈದರಾಬಾದ್‌ನಲ್ಲಿ ಪ್ರತಿ ನಿಮಿಷಕ್ಕೆ ಸರಾಸರಿ 1244 ಬಿರಿಯಾನಿ ಆರ್ಡರ್‌ಗಳನ್ನು ಪಡೆದುಕೊಂಡಿದೆ. ಒಂದು ಗಂಟೆಯಲ್ಲಿ ಸುಮಾರು 10 ಲಕ್ಷ ಜನರು ಸ್ವಿಗ್ಗಿ ಅಪ್ಲಿಕೇಶನ್ ಅನ್ನು ಬಳಸಿದ್ದಾರೆ ಎಂದು ಸ್ವಿಗ್ಗಿ ಅಧಿಕೃತ ಮೂಲಗಳು ಬಹಿರಂಗಪಡಿಸಿದೆ, 

2024ರಲ್ಲಿ ರಾಜ್ಯದಲ್ಲಿರೋ ಈ ಅತ್ಯದ್ಭುತ ಜಾಗಗಳಿಗೆ ಮಿಸ್ ಮಾಡ್ದೆ ವಿಸಿಟ್ ಮಾಡಿ

ಝೊಮೆಟೋ ಡೆಲಿವರಿ ಬಾಯ್ಸ್‌ಗೆ ಬರೋಬ್ಬರಿ 97 ಲಕ್ಷ ರೂ. ಟಿಪ್ಸ್
ಫುಡ್ ಡೆಲಿವರಿ ಕಂಪನಿ ಝೊಮೆಟೋದಲ್ಲಿ ಡಿಸೆಂಬರ್ 31,2023 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಆರ್ಡರ್‌ಗಳನ್ನು ಮಾಡಲಾಗಿತ್ತು. ಹಾಗೆಯೇ ಝೊಮೆಟೋದಲ್ಲಿ ಜನರು ಹೊಸ ವರ್ಷದ ದಿನದಂದು ಅತಿ ಹೆಚ್ಚು ಟಿಪ್ಸ್ ನೀಡಿ ದಾಖಲೆ ಮಾಡಿದ್ದಾರೆ. ಝೊಮಾಟೊ ಸಿಇಒ ದೀಪಿಂದರ್ ಗೋಯಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಗಮನಾರ್ಹ ಅಂಕಿಅಂಶವನ್ನು ಹಂಚಿಕೊಂಡಿದ್ದರು. 'ಹೊಸ ವರ್ಷದ ಮುನ್ನಾದಿನದಂದು ಭಾರತೀಯರು ಡೆಲಿವರಿ ಬಾಯ್ಸ್‌ಗೆ ಉದಾರವಾಗಿ ಟಿಪ್ಸ್ ನೀಡಿದ್ದಾರೆ. ಒಟ್ಟು 97 ಲಕ್ಷ ರೂ. ಟಿಪ್ಸ್ ಆಗಿ ಸಂಗ್ರಹವಾಗಿದೆ. ಲವ್ ಯು, ಇಂಡಿಯಾ' ಇಂದು ರಾತ್ರಿ ನಿಮಗೆ ಸೇವೆ ಸಲ್ಲಿಸುತ್ತಿರುವ ವಿತರಣಾ ಪಾಲುದಾರರಿಗೆ ನೀವು ಇಲ್ಲಿಯವರೆಗೆ ₹97 ಲಕ್ಷಗಳನ್ನು ಟಿಪ್ ಮಾಡಿದ್ದೀರಿ' ಎಂದು ಅವರು ಸಂತಸ ವ್ಯಕ್ತಪಡಿಸಿದ್ದರು.

click me!