ನೂಹ್ (ಹರ್ಯಾಣ): ಇಲ್ಲಿ ನಡೆದಿದ್ದ ಕೋಮು ಗಲಭೆಯ ವಿರುದ್ಧ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ 3ನೇ ದಿನವೂ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಶನಿವಾರ ಸುಮಾರು 2 ಡಜನ್ ಮೆಡಿಕಲ್ ಸ್ಟೋರ್‌ಗಳನ್ನು ಧ್ವಂಸಗೊಳಿಸಲಾಗಿದೆ. ಇವು ಅಕ್ರಮ ಕಟ್ಟಡಗಳು ಎಂದು ಜಿಲ್ಲಾಡಳಿತ ಹೇಳಿದ್ದರೂ, ಇತ್ತೀಚಿನ ಗಲಭೆಯಲ್ಲಿ ಮೆಡಿಕಲ್ ಸ್ಟೋರ್ ಮಾಲೀಕರು ಕೂಡ ಭಾಗಿ ಆಗಿದ್ದರು. ಹೀಗಾಗಿ ಇವರ ಅಕ್ರಮ ನಿರ್ಮಾಣಗಳನ್ನು ಗುರುತಿಸಿ ಧ್ವಂಸಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಇದಕ್ಕೂ ಮೊದಲು ನೂಹ್‌ನಿಂದ 20 ಕಿ.ಮೀ. ದೂರದಲ್ಲಿನ ತೌರುನಲ್ಲಿದ್ದ ಅಕ್ರಮ ಒತ್ತುವರಿಯನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು.
ಶನಿವಾರ ನಲ್ಹಾರ್‌ನಲ್ಲಿರುವ ಶಹೀದ್ ಹಸನ್ ಖಾನ್ ಮೇವಾತಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು (Govt medical college) ಬುಲ್ಡೋಜರ್ ಬಳಸಿ ಒಡೆದು ಹಾಕಲಾಗಿದೆ. ಈ ವೇಳೆ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ನಿರ್ಮಾಣ ಮಾಡಲಾಗಿದ್ದ 25ಕ್ಕೂ ಹೆಚ್ಚು ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. ಅಲ್ಲದೇ ಹಲವು ಪ್ರದೇಶಗಳಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದ್ದು, ಇಲ್ಲಿಯವರೆಗೆ 50ರಿಂದ 60 ಕಟ್ಟಡಗಳನ್ನು ಒಡೆದು ಹಾಕಲಾಗಿದೆ.
ಹರ್ಯಾಣ ಕೋಮು ಗಲಭೆ: ಪೊಲೀಸರೇ ಉದ್ರಿಕ್ತರ ಮೊದಲ ಟಾರ್ಗೆಟ್?
ಇಲ್ಲಿ ಧ್ವಂಸ (Demolish) ಮಾಡಲಾಗಿರುವ ಎಲ್ಲಾ ಕಟ್ಟಡಗಳೂ ಸಹ ಅಕ್ರಮವಾಗಿ ನಿರ್ಮಾಣ ಆಗಿದ್ದವು. ಹಲವು ವರ್ಷಗಳಿಂದ ಇವುಗಳನ್ನು ಒಡೆಯಲಾಗಿರಲಿಲ್ಲ. ಈಗ ಇವುಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಕ್ರಮಕ್ಕೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿದ್ದು, ಬಡವರ ಮನೆ ಮಾತ್ರವಲ್ಲದೇ ಸಾಮಾನ್ಯ ಜನರ ನಂಬಿಕೆಯನ್ನೇ ಒಡೆಯಲಾಗುತ್ತಿದೆ ಎಂದು ಹೇಳಿದೆ.
ನೂಹ್ ಗಲಭೆಗೆ ಕುಮ್ಮಕ್ಕು- ಪಾಕ್ ಯೂಟ್ಯೂಬ್ ಚಾನೆಲ್ ರದ್ದು:
ನೂಹ್‌ನಲ್ಲಿ ನಡೆದ ಕೋಮು ಗಲಭೆಯ ಹಿಂದೆ ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾಲನ್‌ವೊಂದರ ಕೈವಾಡ ಇರಬಹುದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ‘ಆಶನ್ ಮೇವಾತಿ ಪಾಕಿಸ್ತಾನ್’ ಎಂಬ ಹೆಸರಿನ ಯೂಟ್ಯೂಬ್ ಚಾನಲ್ ಅನ್ನು ತನಿಖೆಗೆ ಒಳಪಡಿಸಲಾಗಿದೆ. ಈ ಚಾನಲ್ ಅನ್ನು ಈಗ ಯೂಟ್ಯೂಬ್‌ನಿಂದ ಗೂಗಲ್ ತೆಗೆದು ಹಾಕಿದೆ. ಇದರಲ್ಲಿ 273 ವಿಡಿಯೋಗಳಿದ್ದು, 80 ಸಾವಿರ ಮಂದಿ ಫಾಲೋ ಮಾಡುತ್ತಿದ್ದರು. ಹರಾರಯಣದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದರಲ್ಲಿ ಪ್ರಚೋದನೆ ನೀಡಿರಬಹುದು ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.
ಹರಿಯಾಣ ಕೋಮುಗಲಭೆಯಲ್ಲಿ ನಾಲ್ವರ ಸಾವು, ನುಹ್ ಜಿಲ್ಲೆಯಲ್ಲಿ ಎರಡು ದಿನ ಕರ್ಫ್ಯೂ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ