ಕಾರಿಗೆ ಅಡ್ಡಬಂದ ನೀಲಗಾಯ್‌ ಜೀವ ಉಳಿಸಲು ಹೋಗಿ ಭೀಕರ ಅಪಘಾತ, ಒಂದೇ ಕುಟುಂಬದ 7 ಮಂದಿ ಸಾವು!

By Gowthami KFirst Published Aug 6, 2023, 10:18 AM IST
Highlights

ಉತ್ತರ ಪ್ರದೇಶದ ಶ್ರಾವಸ್ತಿ ಪ್ರದೇಶದ ಹೆದ್ದಾರಿಯಲ್ಲಿ  ಭೀಕರ ದುರಂತವೊಂದು ನಡೆದಿದ್ದು,   ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ್ದಾರೆ.

ಲಕ್ನೋ (ಆ.6): ಉತ್ತರ ಪ್ರದೇಶದ ಶ್ರಾವಸ್ತಿ ಪ್ರದೇಶದ ಬುದ್ಧ ಸರ್ಕ್ಯೂಟ್ (ಬಹ್ರೈಚ್-ಬಲ್ರಾಮ್‌ಪುರ) ಹೆದ್ದಾರಿಯಲ್ಲಿ  ಭೀಕರ ದುರಂತವೊಂದು ನಡೆದಿದ್ದು, ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ತಡರಾತ್ರಿ ಶ್ರಾವಸ್ತಿ ಪ್ರದೇಶದಲ್ಲಿ 'ನೀಲಗಾಯ್' (ನೀಲಿ ಹಸು) ಉಳಿಸುವ ಸಲುವಾಗಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ.

ಪಂಜಾಬ್‌ನಿಂದ ಸ್ಕಾರ್ಪಿಯೋ ಕಾರನ್ನು ಕಾಯ್ದಿರಿಸಿ ಐಕೋನಾದ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಒಂದೇ ಕುಟುಂಬದ ಏಳು ಜನರು ಸಾವನ್ನಪ್ಪಿದ್ದರು.  ಮೃತರೆಲ್ಲರೂ ನೇಪಾಲ್​ಗಂಜ್​ನ ತ್ರಿಭುವನ್ ಚೌಕದ ನಿವಾಸಿಗಳಾಗಿದ್ದಾರೆ. ನೇಪಾಲ್​ಗಂಜ್​ನ ತ್ರಿಭುವನ್ ಚೌಕದ ನಿವಾಸಿ  ನೀಲಾಂಶ್ ಗುಪ್ತಾ (25) ಹಾಗೂ ಸಹೋದರಿಯರಾದ ನಿತಿ ಗುಪ್ತಾ (18), ವೈಭವ್ (28) ಮತ್ತು ಕುಟುಂಬದ ಸದಸ್ಯರು ಮತ್ತು ಇಬ್ಬರು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.

Latest Videos

Bengaluru: ಜೈಲಿಂದ ಬಿಡುಗಡೆಯಾಗಿ ಮನೆ ಸೇರುವ ಮುನ್ನವೇ ನವ ವಿವಾಹಿತಿ ರೌಡಿ ಶೀಟರ್‌ ಬರ್ಬರ ಹತ್ಯೆ

ಜೀಪ್‌ ಬೌದ್ಧ ಸರ್ಕ್ಯೂಟ್‌ನ ಸೀತಾದ್ವಾರದ ತಿರುವಿನಲ್ಲಿ ಬಂದ ತಕ್ಷಣ, ಅಡ್ಡಬಂದ ನೀಲ್‌ಗಾಯ್‌ ಗಳನ್ನು ಉಳಿಸುವ ಪ್ರಯತ್ನದಲ್ಲಿ  ಜೀಪು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.  ವಿಷಯ ತಿಳಿದ ಐಕೌನಾ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ವಾಹನದ ಬಾಗಿಲು ಕಟ್ ಮಾಡಿ ಮೃತದೇಹವನ್ನು ಹೊರತೆಗೆದರು. ಗಂಭೀರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದುಬಂದಿದೆ.

ಜೈಲಿನಲ್ಲಿರುವ ತಮಿಳುನಾಡು ಸಚಿವನ ಚಾಲಕನ ಮನೆಯಲ್ಲಿ ಸಿಕ್ತು ಬರೋಬ್ಬರಿ 22 ಲಕ್ಷ 

ಈ ಬಗ್ಗೆ ಮಾತನಾಡಿದ ಶ್ರಾವಸ್ತಿ ಪೊಲೀಸ್ ವರಿಷ್ಠಾಧಿಕಾರಿ ಪ್ರಾಚಿ ಸಿಂಗ್,  ಮೃತರೆಲ್ಲರೂ ಬೌದ್ಧ ಸರ್ಕ್ಯೂಟ್‌ನಲ್ಲಿ ಸೀತಾದ್ವಾರವನ್ನು ತಲುಪಿದ ತಕ್ಷಣ, ಮಾರ್ಗದಲ್ಲಿ 'ನೀಲಗಾಯ್' ಅಡ್ಡ ಬಂದಿತು. ಅದನ್ನು ಉಳಿಸಲು ಚಾಲಕನ ನಿಯಂತ್ರಣ ತಪ್ಪಿ ಗಾಡಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಸ್‌ಯುವಿ ಪಲ್ಟಿಯಾಗಿ ಕಂದಕಕ್ಕೆ ಬಿದ್ದು ಈ ದುರಂತ ನಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

click me!