21 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್‌ ಸಿರಪ್‌ ತಯಾರಿಸಿದ ಕಂಪನಿಯ ಮಾಲೀಕನ ಬಂಧನ!

Published : Oct 09, 2025, 09:08 AM IST
Cough Syrup Srisan Medicals Owner Ranganathan

ಸಾರಾಂಶ

Srisan Medicals Owner Ranganathan Arrested ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ಇದು ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟವನ್ನು ತೀವ್ರಗೊಳಿಸಿತು. ರಂಗನಾಥನ್ ಬಂಧನವನ್ನು ಈಗ ತನಿಖೆಯಲ್ಲಿ ಮಹತ್ವದ ಪ್ರಗತಿ ಎಂದು ಪರಿಗಣಿಸಲಾಗುತ್ತಿದೆ. 

ಭೋಪಾಲ್‌(ಅ.9): ಮಾರಕ "ಕೋಲ್ಡ್ರಿಫ್" ಕೆಮ್ಮಿನ ಸಿರಪ್ ಪ್ರಕರಣದಲ್ಲಿ ಮಧ್ಯಪ್ರದೇಶ ಪೊಲೀಸರು ಪ್ರಮುಖ ಪ್ರಗತಿ ಸಾಧಿಸಿದ್ದಾರೆ. ಕ್ರಮ ಕೈಗೊಂಡ ಪೊಲೀಸರು, ಶ್ರೀಸನ್ ಮೆಡಿಕಲ್ಸ್ ಮಾಲೀಕ ರಂಗನಾಥನ್ ಅವರನ್ನು ಬಂಧಿಸಿದ್ದಾರೆ.ಮಧ್ಯಪ್ರದೇಶದಲ್ಲಿ ಕಲುಷಿತ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ 21 ಮಕ್ಕಳು ಸಾವನ್ನಪ್ಪಿದ ಭಯಾನಕ ಘಟನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರಂಗನಾಥನ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಈ ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ, ಮಧ್ಯಪ್ರದೇಶ ಪೊಲೀಸರು ಶ್ರೀಸನ್ ಫಾರ್ಮಾಸ್ಯುಟಿಕಲ್ ಕಂಪನಿಯ ಮಾಲೀಕರ ಸುಳಿವು ನೀಡಿದಲ್ಲಿ ಬಹುಮಾನ ಘೋಷಿಸಿದ್ದರು. ಆರೋಪಿಗಳನ್ನು ಬಂಧಿಸಲು ಸಹಾಯ ಮಾಡುವವರಿಗೆ ₹20,000 ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಇದರೊಂದಿಗೆ, ತಲೆಮರೆಸಿಕೊಂಡಿರುವ ಕಂಪನಿಯ ಮಾಲೀಕರನ್ನು ಶೀಘ್ರವಾಗಿ ಬಂಧಿಸುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ಎಸ್‌ಐಟಿ ತಂಡವನ್ನು ರಚಿಸಲಾಗಿತ್ತು. ಇದರ ಪರಿಣಾಮವಾಗಿ ರಂಗನಾಥನ್ ಬಂಧನವಾಯಿತು.

ಮಧ್ಯಪ್ರದೇಶ ಸರ್ಕಾರದ ದೊಡ್ಡ ಆರೋಪ

ಮಧ್ಯಪ್ರದೇಶದ ಆರೋಗ್ಯ ಖಾತೆ ರಾಜ್ಯ ಸಚಿವ ನರೇಂದ್ರ ಶಿವಾಜಿ ಪಟೇಲ್ ಬುಧವಾರ, ರಾಜ್ಯದಲ್ಲಿ 21 ಮಕ್ಕಳು ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ ಸಾವನ್ನಪ್ಪಿದ್ದಾರೆ ಮತ್ತು ಈ ಗಂಭೀರ ನಿರ್ಲಕ್ಷ್ಯಕ್ಕೆ ತಮಿಳುನಾಡು ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ. "ರಾಜ್ಯದಿಂದ ರವಾನೆಯಾಗುವ ಔಷಧಿಗಳನ್ನು ಪರೀಕ್ಷಿಸುವುದು ತಮಿಳುನಾಡು ಸರ್ಕಾರದ ಜವಾಬ್ದಾರಿಯಾಗಿದೆ. ಮಧ್ಯಪ್ರದೇಶ ಸರ್ಕಾರವು ರಾಜ್ಯಕ್ಕೆ ಬರುವ ಔಷಧಿಗಳ ರಾಂಡಮ್‌ ಪರೀಕ್ಷೆಯನ್ನು ಸಹ ನಡೆಸುತ್ತದೆ, ಆದರೆ ಆ ಮಾದರಿಯಲ್ಲಿ ಈ ಸಿರಪ್ ಆಕಸ್ಮಿಕವಾಗಿ ತಪ್ಪಿಹೋಗಿದೆ" ಎಂದು ಪಟೇಲ್ ಹೇಳಿದರು.

ಅಕ್ಟೋಬರ್ 3 ರಂದು ಔಷಧ ನಿಯಂತ್ರಕರು ತೆಗೆದುಕೊಂಡ ಮಾದರಿಯ ಪ್ರಯೋಗಾಲಯದ ವರದಿಯು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಅನ್ನು ಕಲಬೆರಕೆ ಎಂದು ಘೋಷಿಸಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯಂ ಹೇಳಿದ್ದರು. ವರದಿಗಳ ನಂತರ, ಕಂಪನಿಯು ಉತ್ಪಾದನೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಲಾಯಿತು. ಕಾಂಚಿಪುರಂ ಜಿಲ್ಲೆಯ ಸುಂಗುವರ್ಚತ್ರಂ ಪ್ರದೇಶದಲ್ಲಿರುವ ಈ ಕಾರ್ಖಾನೆಯು ಕಳೆದ 14 ವರ್ಷಗಳಿಂದ ಕೋಲ್ಡ್ರಿಫ್ ಸಿರಪ್ ಅನ್ನು ಉತ್ಪಾದಿಸುತ್ತಿತ್ತು. ಕಂಪನಿಯು ತನ್ನ ಉತ್ಪನ್ನಗಳನ್ನು ಹಲವಾರು ರಾಜ್ಯಗಳಿಗೆ ಪೂರೈಸುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ