ಗೋವಾದ ಪ್ರಸಿದ್ಧ, ಸಾಂಪ್ರದಾಯಿಕ ಕ್ಲಬ್ Tito’s ಮಾರಾಟ, ಕಿರುಕುಳದ ಆರೋಪ!

By Suvarna NewsFirst Published Jun 29, 2021, 5:15 PM IST
Highlights

* ಗೋವಾದ ಪ್ರಸಿದ್ಧ ಕ್ಲಬ್ ಮಾರಾಟ ಮಾಡಿದ ಮಾಲೀಕರು

* ಸೋಶಿಯಲ್ ಮೀಡಿಯಾದಲ್ಲಿ ಈ ಬ್ಗಗೆ ಪೋಸ್ಟ್ ಮಾಡಿದ ಸಹ ಮಾಲೀಕ ರಿಕಾರ್ಡೋ

* ಕಿರುಕುಳ ನೀಡಿದ ಆರೋಪ ಮಾಡಿದ ಕ್ಲಬ್ ಮಾಲೀಕ

ಪಣಜಿ(ಜೂ.29): ಗೋವಾದ ಸಾಂಪ್ರದಾಯಿಕ ಕ್ಲಬ್ ಟಿಟೊ ಸಹ-ಮಾಲೀಕ ರಿಕಾರ್ಡೊ ಡಿಸೋಜಾ ಸ್ಥಳೀಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದ ಬೆನ್ನಲ್ಲೇ ಈ ಕ್ಲಬ್ ಮಾರಾಟ ಮಾಡಲಾಗಿದೆ. 

ಹೌದು ತನ್ನ ಸಹೋದರ ಡೇವಿಡ್ ಡಿಸೋಜಾ ಜೊತೆ ಸೇರಿ ಟಿಟೊ ಕ್ಲಬ್ ನಡೆಸುತ್ತಿದ್ದ ರಿಕಾರ್ಡೋ ಡಿಸೋಜಾ ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಬರೆದಿದ್ದು, 'ಸೂಕ್ತ ಅನುದಾನ' ಸಿಗುತ್ತಿರುವ ಹಿನ್ನೆಲೆ ಗೋವಾದಲ್ಲಿರುವ ತಮ್ಮ ಉದ್ಯಮವನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದ್ದಾರೆ. ಆದರೆ ಇದನ್ನು ಖರೀದಿಸಿದ್ದು ಯಾರು ಎಂಬ ಮಾಹಿತಿಯನ್ನು ಗೌಪ್ಯವಾಗೇ ಇಟ್ಟಿದ್ದಾರೆ.

ಭಾರತದಲ್ಲೂ ನ್ಯೂಡ್ ಬೀಚ್‌ಗಳಿವೆ, ನಿಮಗೆ ಗೊತ್ತೆ?

ನೋವು ಹಾಗೂ ಕೋಪದಿಂದ ನಾವು ಗೋವಾದಲ್ಲಿರುವ ತನ್ನ ಉದ್ಯಮವನ್ನು ಮಾರಾಟ ಮಾಡಿದ್ದೇವೆ. ನನಗೆ ಸಮರ್ಪಕವಾಗಿ ಪರಿಹಾರ ನೀಡಲಾಗಿದ್ದರಿಂದ ನಾನು ವೈಯಕ್ತಿಕವಾಗಿ ಕನಿಷ್ಠ ತೊಂದರೆ ಅನುಭವಿಸಿದ್ದೇನೆ ಮತ್ತು ನನ್ನ ಮುಂದಿನ ಪೀಳಿಗೆಗೆ ಸಹ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ರಿಕಾರ್ಡೊ ಡಿಸೋಜಾ ಬರೆದಿದ್ದಾರೆ.

ಕಿರುಕುಳದ ಬಗ್ಗೆ ಆರೋಪಿಸಿರುವ ರಿಕಾರ್ಡೋ ಡಿಸೋಜಾ, ತಮಗೆ ಯಾವೆಲ್ಲಾ ಸಂಸ್ಥೆ ತೊಂದರೆ ಕೊಟ್ಟಿದೆ ಎಂದು ಹೆಸರಿಸಿದ್ದಾರೆ. ಇಲ್ಲಿ “ಪೊಲೀಸ್, ಪಿಡಿಎ (ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರ), CRZ (ಕರಾವಳಿ ನಿಯಂತ್ರಣ ವಲಯ), ಎನ್‌ಜಿಒಗಳು, ಪಂಚಾಯಿತಿಗಳು ಮತ್ತು ಸರ್ಪಂಚ್‌ಗಳು, ಬಿಡಿಒ (ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್), ಉಪ ಸಂಗ್ರಹಕಾರರು ಇವರೆಲ್ಲರೂ ಸಮಸ್ಯೆ ಹುಟ್ಟು ಹಾಕಿದ್ದರೆಂದು ಆರೋಪಿಸಿದ್ದಾರೆ.

ಹೀಗಿದ್ದರೂ ತಮಗೆ ಯಾವ ರೀರಿಯ ಕಿರುಕುಳ ನೀಡಿದ್ದಾರೆ ಎಂದು ತಿಳಿಸದ ರಿಕಾರ್ಡೋ ಯಾವೊಬ್ಬ ವ್ಯಕ್ತಿಯ ಹೆಸರನ್ನೂ ಹೇಳಿಲ್ಲ ಎಂಬುವುದು ಉಲ್ಲೇಖನೀಯ. ಹೀಗಿದ್ದರೂ ರಿಕಾರ್ಡೊ ಡಿಸೋಜ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ 'ಐಎಎಸ್ ಅಧಿಕಾರಿಗಳು, ಮಾಜಿ ಹಾಗೂ ಹಾಲಿ ಸಿಬ್ಬಂದಿ, ನಮ್ಮ ನೆರೆಹೊರೆಯವರು, ನನ್ನ ಎಲ್ಲಾ ಸ್ನೇಹಿತರು ಮತ್ತು ಕುಟುಂಬ ಮತ್ತು ಗೋವಾದ ಜನ ಸಾಮಾಣ್ಯರು, ಹೀಗೆ ಟಿಟೊಸ್ ಎಂಬ ಈ ಮಹಾನ್ ಬ್ರಾಂಡ್‌ಗೆ ಬೆಳೆದು ನಿಲ್ಲಲು ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ.

'ಎಂಜಾಯ್ ಮಾಡಿ' ಗೆಳೆಯನೊಂದಿಗೆ 50 ವರ್ಷದ ನಟಿಯ ಸುತ್ತಾಟಕ್ಕೆ ಸಿಕ್ಕ ಕಮೆಂಟ್ಸ್!

70 ರ ದಶಕದ ಆರಂಭದಲ್ಲಿ ಗೋವಾದ ಪ್ರವಾಸೋದ್ಯಮವು ಕೆಟ್ಟ ಪರಿಸ್ಥಿತಿಯಲ್ಲಿದ್ದಾಗ, ಈ ಕ್ಲಬ್ ಜನಪ್ರಿಯ ಸ್ಥಳವಾಗಿ ಹೊರಹೊಮ್ಮಿತ್ತು. ಅಲ್ಲದೇ  ಗೀವಾಗೆ ಏಟಿ ನೀಡುವ ಪ್ರವಾಸಿಗರು ಭೇಟಿ ನೀಡಲೇಬೇಕಾದ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಸ್ಥಳವಾಗಿ ಬೆಳೆದು ನಿಂತಿತ್ತು. ಆದರೆ ಇತ್ತೀಚೆಗೆ ಕ್ಲಬ್ CRZ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದು, ನೋಟಿಸ್ ಕೂಡಾ ನೀಡಲಾಗಿತ್ತು. 

click me!