ಹಾರ ಹಾಕಲು ಎತ್ತಿದಾತನಿಗೆ ಕೂಡಲೇ ಕಪಾಳ ಮೋಕ್ಷ ಮಾಡಿದ ವಧು!

Published : Jun 29, 2021, 04:24 PM ISTUpdated : Jun 29, 2021, 04:25 PM IST
ಹಾರ ಹಾಕಲು ಎತ್ತಿದಾತನಿಗೆ ಕೂಡಲೇ ಕಪಾಳ ಮೋಕ್ಷ ಮಾಡಿದ ವಧು!

ಸಾರಾಂಶ

* ಮದುವೆ ಕಾರ್ಯಕ್ರಮದಲ್ಲಿ ಇದೆಂತಾ ಪ್ರಸಂಗ? * ವರನಿಗೆ ಹಾರ ಹಾಕಲು ಸುಲಭವಾಗಲೆಂದು ವಧುವನ್ನೆತ್ತಿದ ವ್ಯಕ್ತಿ * ಅನುಮತಿ ಪಡೆಯದೇ ತನ್ನನ್ನೆತ್ತಿದವನಿಗೆ ಕಲಾಫ ಮೋಕ್ಷ ಮಾಡಿದ ವಧು

ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಮಾತು ಎಲ್ಲರಿಗೂ ತಿಳಿದಿರುವಂತದ್ದೇ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಈ ಮಾತು ಶೇ. 100ರಷ್ಟು ಸತ್ಯ ಎಂಬುವುದನ್ನು ತೋರಿಸಿಕೊಟ್ಟಿದೆ. ಇಲ್ಲಿ ವಧು ತನ್ನನ್ನು ಎತ್ತಿದಾತನಿಗೆ ವೇದಿಕೆಯಲ್ಲೇ ಕಪಾಳ ಮೋಕ್ಷ ಮಾಡಿದ ದೃಶ್ಯಗಳಿವೆ. ಇತ್ತೀಚೆಗೆ ಮದುವೆ ಮನೆಯಲ್ಲಿ ನಡೆಯುತ್ತಿರುವ ವಿಚಿತ್ರ ಪ್ರಸಂಗಗಳು ವೈರಲ್ ಆಗುತ್ತಿದ್ದು, ಅವುಗಳ ನಡುವೆ ಈ ಹಳೇ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲಾರಂಭಿಸಿದೆ.

ಮಟನ್ ಊಟವಿಲ್ಲವೆಂದು ಮದುವೆ ಮುರಿದು, ಬೇರೊಬ್ಬಾಕೆಗೆ ತಾಳಿ ಕಟ್ಟಿದ 'ಮದುಮಗ'!

ಕಳೆದ ಕೆಲ ದಿನಗಳ ಹಿಂದಷ್ಟೇ ವರನೊಬ್ಬ, ಹುಡುಗಿ ಮನೆಯವರು ಊಟಕ್ಕೆ ಮಟನ್ ಮಾಡಿಲ್ಲವೆಂದು ಕೋಪದಿಂದ ಮದುವೆ ಮುರಿದು ಬೇರೊಬ್ಬಳಿಗೆ ತಾಳಿ ಕಟ್ಟಿದ ಪ್ರಸಂಗ ಒಡಿಶಾದಲ್ಲಿ ನಡೆದಿತ್ತು. ಮತ್ತೊಂದೆಡೆ ಕನ್ನಡಕ ಇಲ್ಲದೇ ವರನಿಗೆ ಓದಲಾಗುವುದಿಲ್ಲ ಎಂಬ ಕಾರಣಕ್ಕೆ ವಧು ಮದುವೆ ಮುರಿದಿದ್ದ ಪ್ರಕರಣವೂ ಸದ್ದು ಮಾಡಿತ್ತು. ಇಷ್ಟೇ ಅಲ್ಲದೇ ಮದುವೆ ಮನೆಯಲ್ಲಿ ನಡೆದ ಅನೇಕ ವಿಚಿತ್ರ ಪ್ರಸಂಗಳ ವಿಡಿಯೋ ಇಂಟರ್ನೆಟ್‌ಗಳಲ್ಲಿ ಹರಿದಾಡುತ್ತಿವೆ.

ಸದ್ಯ ಹಳೇ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ವಧು, ವರ ಇಬ್ಬರೂ ಹಾರ ಹಾಕಲು ಸಜ್ಜಾಗಿದ್ದರು. ಹೀಗಿರುವಾಗ ಕೊಂಚ ತಮಾಷೆ ಕೂಡಾ ಇರಲಿ ಎಂದು ವರನ ಗೆಳೆಯರು ಆತನನ್ನು ಎತ್ತಿದ್ದಾರೆ. ಹೀಗಿರುವಾಗ ವಧು ಹಾರ ಹಾಕಲಾಗದೇ ಪರದಾಡುತ್ತಾಳೆ. ಹೀಗಿರುವಾಗಲೇ ವಧುವಿನ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬ ಆಕೆಯ ಅನುಮತಿ ಪಡೆಯದೇ ಕೂಡಲೇ ಆಕೆಯನ್ನು ಎತ್ತುತ್ತಾನೆ. ಹೀಗಿರುವಾಗ ವಧು ವರನಿಗೆ ಹಾರ ಹಾಕುತ್ತಾಳೆ.

ಕನ್ನಡಕ ಧರಿಸದೆ ಪತ್ರಿಕೆ ಓದಲು ಹುಡುಗ ವಿಫಲ; ಮದುವೆ ಕ್ಯಾನ್ಸಲ್ ಮಾಡಿದ ವಧು!

ಆದರೆ ಆ ವ್ಯಕ್ತಿ ಆಕೆಯನ್ನು ಕೆಳಗಿಳಿಸಿದ ಕೂಡಲೇ ತನ್ನೆಲ್ಲಾ ಕೋಪವನ್ನು ಹೊರ ಹಾಕಿದ ವಧು ತನ್ನ ಅನುಮತಿ ಪಡೆಯದೇ ತನ್ನನ್ನು ಎತ್ತಿದ ವ್ಯಕ್ತಿಗೆ ವೇದಿಕೆಯಲ್ಲೇ ಕಪಾಳ ಮೋಕ್ಷ ಮಾಡಿದ್ದಾಳೆ. ಸದ್ಯ ಈ ವಿಡಿಯೋ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಕಳೆದೊಂದು ವರ್ಷದ ಹಿಂದೆ ಈ ವಿಡಿಯೋ ವೈರಲ್ ಆಗಿತ್ತು ಎಂಬುವುದು ಉಲ್ಲೇಖನೀಯ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ