Rs 1 coin: 1 ರೂಪಾಯಿಯ ಈ ವಿಶೇಷ ನಾಣ್ಯ ನಿಮ್ಮಲಿದ್ಯಾ? 2.5 ಲಕ್ಷ ರೂ. ಗಳಿಸುವ ಅವಕಾಶ, ಇಲ್ಲಿದೆ ವಿವರ

By Suvarna NewsFirst Published Nov 26, 2021, 12:08 AM IST
Highlights

* ಒಂದು ರೂಪಾಯಿ ವಿಶೇಷ ನಾಣ್ಯಕ್ಕೆ ಭಾರೀ ಬೇಡಿಕೆ

* 2.5 ಲಕ್ಷ ರೂ ಕೊಟಗ್ಟು ಸಂಗ್ರಹಿಸುತ್ತಿದ್ದಾರೆ ಆ ನಾಣ್ಯ

* ನಾಣ್ಯ ಹೇಗಿರಬೇಕು? ಇಲ್ಲಿದೆ ವಿವರ!

ನವದೆಹಲಿ(ನ.26): ಅನೇಕರಿಗೆ ಹಳೇ ಕಾಲದ ನಾಣ್ಯ, ನೋಟುಗಳನ್ನು ಸಂಗ್ರಹಿಸುವ (Coin Collection) ಹವ್ಯಾಸ ಇರುತ್ತದೆ. ಇವುಗಳಿಗಾಗಿ ಅದೆಷ್ಟೇ ಮೊತ್ತ ಬೇಕಾದರೂ ಪಾವತಿಸಲು ಅವರು ಸಿದ್ಧರಿರುತ್ತಾರೆ. ಇನ್ನು ಇತ್ತೀಚೆಗಂತೂ ಇಂತಹ ಹವ್ಯಾಸ ಹೊಸ(Hobby) ರೂಪ ಪಡೆದಿದ್ದು, ಅನೇಕರು ಆನ್ಲೈನ್ ಮೂಲಕವೇ ಹರಾಜಿನ ಮೂಲಕ ಖರೀದಿ ಆರಂಭಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಸಂಗ್ರಹಿಸಬಹುದಾದ ಹಳೆಯ ಮತ್ತು ಅಪರೂಪದ ನಾಣ್ಯಗಳು ಮತ್ತು ನೋಟುಗಳಿಗೆ ಬೇಡಿಕೆ ಭಾರೀ ಹೆಚ್ಚಿದೆ. ಅಪರೂಪದ ಕರೆನ್ಸಿಗಳನ್ನು ಹೊಂದಿರುವವರು ಹಳೆ ನಾಣ್ಯ ಮತ್ತು ನೋಟುಗಳನ್ನು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಉದಾಹರಣೆಗೆ, ಅದ್ಯಕ್ಕೀಗ ವಿಶೇಷ 1 ರೂ ನಾಣ್ಯವೊಂದು ರೂ 2.5 ಲಕ್ಷದವರೆಗೆ ಮಾರಾಟವಾಗುತ್ತಿದೆ.

ವರದಿಗಳನ್ವಯ ಈ ಒಂದು ರೂಪಾಯಿ ವಿಶೇಷ ಕಾಯಿನ್ 1985 ರ ರೂ 1 ನಾಣ್ಯವಾಗಿದ್ದು ಅದರ ಮೇಲೆ H ಗುರುತು ಇದೆ. ಅಂತಹ ಒಂದು ನಾಣ್ಯ ಕೆಲವು ವರ್ಷಗಳ ಹಿಂದೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಆದ್ದರಿಂದ, ನೀವು ಅಂತಹ ಒಂದು ನಾಣ್ಯವನ್ನು ಹೊಂದಿದ್ದರೆ, ಮನೆಯಲ್ಲೇ ಕುಳಿತು ಲಕ್ಷಗಟ್ಟಲೇ ಹಣ ಸಂಪಾದಿಸಬಹುದು.

ಕಸದ ರಾಶಿಯಲ್ಲಿ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂತಿರುಗಿಸಿದ ಪೌರ ಕಾರ್ಮಿಕೆ!

ಈ ನಾಣ್ಯದಲ್ಲೇನು ವಿಶೇಷ?

ರೂ 1 ನಾಣ್ಯವೇಕೆ ಅಷ್ಟೊಂದು ವಿಶೇಷವಾದದ್ದು ಎಂದರೆ ಇದನ್ನು ಮೊದಲು 19821 ರಲ್ಲಿ ಚಲಾವಣೆಗೆ ತರಲಾಯಿತು ಮತ್ತು ಕೊನೆಯದಾಗಿ 1991 ರಲ್ಲಿ ಮುದ್ರಿಸಲಾಯಿತು. ಈ ನಾಣ್ಯಗಳನ್ನು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮುದ್ರಿಸಲಾಗಿದೆ ಮತ್ತು ಸುಮಾರು 4.85 ಗ್ರಾಂ ತೂಕವಿದೆ ಎಂದು ಹೇಳಲಾಗುತ್ತದೆ.

ಒಂದು ಬದಿಯಲ್ಲಿ ಜೋಳದ ಚಿತ್ರ ಮತ್ತು ಇನ್ನೊಂದು ಬದಿಯಲ್ಲಿ ಅಶೋಕ ಸ್ತಂಭ ನಾಣ್ಯದ ಮೆಲಿದೆ. ನಾಣ್ಯದ ಮೇಲೆ ಭಾರತವನ್ನು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯುವುದನ್ನು ಒಬ್ಬರು ಸ್ಪಷ್ಟವಾಗಿ ನೋಡಬಹುದು. ನಾಣ್ಯವನ್ನು ನಾಲ್ಕು ಭಾರತೀಯ ಟಂಕಸಾಲೆಗಳಲ್ಲಿ ಮತ್ತು ದೇಶದ ಹೊರಗೆ ಎರಡು ಟಂಕಸಾಲೆಗಳಲ್ಲಿ ಮುದ್ರಿಸಲಾಯಿತು - ಒಂದು ಲಾಂಟ್ರಿಸೆಂಟ್ (ಯುಕೆ) ಮತ್ತು ಇನ್ನೊಂದು ಹೀಟನ್ ಮಿಂಟ್ (ಯುಕೆ).

ಅರೇ ಈ ನಾಣ್ಯ ಸಿಗೋದು ಬಹಳ ಸುಲಭ ಅನ್ನೋರು ಒಂದು ಕ್ಷಣ ಯೋಚಿಸಲೇಬೇಕಿದೆ. ಯಾಕೆಂದರೆ ವರದಿಗಳಲ್ಲಿ ತಿಳಿಸಲಾದ ನಾಣ್ಯ ವಿಶೇಷ ನಾಣ್ಯವಾಗಿದೆ. ಇದು 1985 ಎಚ್ ಮಾರ್ಕ್ ಆಗಿದ್ದ ನಾಣ್ಯ. ಇದನ್ನು ಸಾರ್ವಜನಿಕ ಚಲಾವಣೆಗಾಗಿ ನೀಡದ ಈ ನಾಣ್ಯಟ್ರಯಲ್ ಆಫ್ ಮೆಟಲ್ ಸ್ಟ್ರೈಕ್ (OMS) ನಾಣ್ಯವಾಗಿದೆ. ಹೀಗಾಗೇ ಇದನ್ನು  2.5 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ.

OMS ನಾಣ್ಯ, ಹೆಸರೇ ಸೂಚಿಸುವಂತೆ, ಚಲಾವಣೆಯಲ್ಲಿರುವ ನಾಣ್ಯಗಳಿಗಿಂತ ವಿಭಿನ್ನ ಲೋಹದಿಂದ ಮುದ್ರಿಸಲಾದ ನಾಣ್ಯವಾಗಿದೆ. 2.5 ಲಕ್ಷಕ್ಕೆ ಹರಾಜಾದ 1 ರೂಪಾಯಿ ನಾಣ್ಯವನ್ನು ಶುದ್ಧ ತಾಮ್ರದಲ್ಲಿ ಮುದ್ರಿಸಲಾಗಿತ್ತು. ಆದರೆ ಚಲಾವಣೆಯಲ್ಲಿರುವ ಇತರ ನಾಣ್ಯಗಳನ್ನು ತಾಮ್ರ-ನಿಕಲ್ ಮಿಶ್ರಣದಿಂದ ಮಾಡಲಾಗಿತ್ತು.

ಸಮುದ್ರದಾಳದ ಕಸ ಸ್ವಚ್ಛಗೊಳಿಸುತ್ತಿದ್ದವರ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ!

DNA ವರದಿಯ ಪ್ರಕಾರ, ನೀವು Indiancoinmill.com ನಲ್ಲಿ ನಾಣ್ಯವನ್ನು ಮಾರಾಟ ಮಾಡಬಹುದು, ಅಲ್ಲಿ ನೀವು ವಿಶೇಷ ಕರೆನ್ಸಿಯನ್ನು ಮಾರಾಟ ಮಾಡುವ ಜಾಹೀರಾತನ್ನು ಪೋಸ್ಟ್ ಮಾಡಬಹುದು. ಒಮ್ಮೆ ನೀವು ಉಚಿತ ಜಾಹೀರಾತನ್ನು ಪೋಸ್ಟ್ ಮಾಡಿದರೆ, ಆಸಕ್ತ ಗ್ರಾಹಕರು ತಮ್ಮ ಕೊಡುಗೆಗಳೊಂದಿಗೆ ನಿಮ್ಮನ್ನು ಸಂಪರ್ಕಿಸಲು ಪ್ರಾರಂಭಿಸುತ್ತಾರೆ. ದಶಕಗಳಲ್ಲದಿದ್ದರೂ ಬಹುಶಃ ನಿಮ್ಮ ಬಳಿ ಇರುವ ನಾಣ್ಯವನ್ನು ಮಾರಾಟ ಮಾಡುವ ಮೊದಲು ನೀವು ಅವರೊಂದಿಗೆ ಮಾತುಕತೆ ನಡೆಸಬಹುದು.

click me!