ದಾಖಲೆಯ 50 ಕೋಟಿ ಲಸಿಕೆ ವಿತರಣೆ!

By Kannadaprabha NewsFirst Published Aug 7, 2021, 1:01 PM IST
Highlights

* ಲಸಿಕೆ ವಿತರಣೆಯಲ್ಲಿ ಹೊಸ ದಾಖಲೆ ಸ್ಥಾಪಿಸಿದ ಭಾರತ

* ದಾಖಲೆಯ 50 ಕೋಟಿ ಲಸಿಕೆ ವಿತರಣೆ

ನವದೆಹಲಿ(ಆ.07): ಕೋವಿಡ್‌ ಲಸಿಕೆ ವಿತರಣೆ ಆರಂಭದ ಮೂಲಕ ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನ ಆರಂಭಿಸಿದ್ದ ಭಾರತ, ಶುಕ್ರವಾರ ಹೊಸ ಐಸಿಹಾಸಿಕ ದಾಖಲೆಯೊಂದನ್ನು ಸ್ಥಾಪಿಸಿದೆ. ಶುಕ್ರವಾರ ದೇಶಾದ್ಯಂತ 43.29 ಲಕ್ಷ ಜನರಿಗೆ ಲಸಿಕೆ ವಿತರಿಸಲಾಗಿದ್ದು, ಇದರೊಂದಿಗೆ ಈವರೆಗೆ ವಿತರಿಸಿದ ಲಸಿಕೆ ಪ್ರಮಾಣ 50 ಕೋಟಿಯ ಗಡಿ ದಾಟಿದೆ. ಇದರಲ್ಲಿ ಮೊದಲ ಮತ್ತು ಎರಡನೇ ಡೋಸ್‌ ಪಡೆದವರ ಸಂಖ್ಯೆಯೂ ಸೇರಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸರ್ಕಾರ ಮೊದಲ 10 ಕೋಟಿ ಡೋಸ್‌ ನೀಡಲು 85 ದಿನ ಬೇಕಾಗಿತ್ತು, ನಂತರದ 45 ದಿನದಲ್ಲಿ 20 ಕೋಟಿ ಡೋಸ್‌, ನಂತರದ 29 ದಿನದಲ್ಲಿ 30 ಕೋಟಿ, ನಂತರದ 24 ದಿನದಲ್ಲಿ 40 ಕೋಟಿ ಮತ್ತು ನಂತರದ 20 ದಿನಗಳಲ್ಲಿ 50 ಕೋಟಿ ಡೋಸ್‌ ಗುರಿ ಮುಟ್ಟಲಾಗಿದೆ ಎಂದು ತಿಳಿಸಿದೆ.

ದೇಶದಲ್ಲಿ ಜ.16ರಂದು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮಾ.1ರಿಂದ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ, ಏ.1ರಿಂದ 45 ವರ್ಷ ಮೇಲ್ಪಟ್ಟಎಲ್ಲರಿಗೂ ಮತ್ತು ಮೇ 1ರಿಂದ 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡಲು ಆರಂಭಿಸಲಾಗಿತ್ತು.

click me!