Constitution Day: ನಮ್ಮ ಸಂವಿಧಾನ ಮುಕ್ತ, ಪ್ರಗತಿಪರ ದೃಷ್ಟಿಕೋನಕ್ಕೆ ಹೆಸರುವಾಸಿ: ಪ್ರಧಾನಿ ಮೋದಿ

By BK AshwinFirst Published Nov 26, 2022, 1:09 PM IST
Highlights

ನ್ಯಾಯಾಂಗವು ಸಕಾಲಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಶ್ಲಾಘಿಸಿದರು. ಬಡವರ ಪರ ನೀತಿಗಳು ಭಾರತದ ಬಡವರು, ಮಹಿಳೆಯರ ಸಬಲೀಕರಣಕ್ಕೆ ಸಹಾಯ ಮಾಡುತ್ತಿವೆ. ಸಾಮಾನ್ಯ ಜನರಿಗೆ ಕಾನೂನುಗಳನ್ನು ಸರಳಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಮ್ಮ ಸಂವಿಧಾನವು (Constitution) ಮುಕ್ತ, ಫ್ಯೂಚರಿಸ್ಟಿಕ್ ಮತ್ತು ಪ್ರಗತಿಪರ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಸಂವಿಧಾನ ದಿನದ (Constitution Day) ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು. "We the People" ಎಂಬ ಪದಗಳು ಕೇವಲ ಮೂರು ಪದಗಳಲ್ಲ. ಆದರೆ ನಮ್ಮ ಸಂವಿಧಾನದ ಮೂಲತತ್ವ ಹಾಗೂ ನಮ್ಮ ಪ್ರಜಾಪ್ರಭುತ್ವವನ್ನು (Democracy) ವ್ಯಾಖ್ಯಾನಿಸುತ್ತದೆ ಮತ್ತು ನಮ್ಮನ್ನು ಜಗತ್ತಿನ ಎಲ್ಲಾ ಪ್ರಜಾಪ್ರಭುತ್ವಗಳ ತಾಯಿಯನ್ನಾಗಿ ಮಾಡುತ್ತದೆ ಎಂದೂ ಪ್ರಧಾನಿ ಮೋದಿ ಶ್ಲಾಘಿಸಿದರು.. ಸುಪ್ರೀಂಕೋರ್ಟ್‌ನಲ್ಲಿ (Supreme Court) ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತ್ವರಿತ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗುತ್ತಿರುವ ಭಾರತದತ್ತ (India) ಇಡೀ ಜಗತ್ತು ನೋಡುತ್ತಿದೆ ಎಂದೂ ಹೇಳಿದರು.

ಅದು ವ್ಯಕ್ತಿಯಾಗಿರಲಿ ಅಥವಾ ಸಂಸ್ಥೆಯಾಗಿರಲಿ, ನಮ್ಮ ಕರ್ತವ್ಯಗಳು ನಮ್ಮ ಮೊದಲ ಆದ್ಯತೆಯಾಗಿದೆ. ಅಮೃತ ಕಾಲವು ನಮಗೆ ಕರ್ತವ್ಯಗಳ ಯುಗವಾಗಿದೆ. ಈ ಆಜಾದಿ ಕಾ ಅಮೃತಕಾಲವು ರಾಷ್ಟ್ರವನ್ನು ಹೆಚ್ಚಿನ ವೇಗದಲ್ಲಿ ಮತ್ತು ಮುಂದಕ್ಕೆ ಕೊಂಡೊಯ್ಯುವತ್ತ ಪ್ರಯತ್ನ ಪಡಲು ಹಾಗೂ ಭಾರತವನ್ನು ವಿಶ್ವ ನಾಯಕನನ್ನಾಗಿ ಮಾಡುವ ಉದ್ದೇಶಕ್ಕೆ ಪ್ರತಿಜ್ಞೆ ತೆಗೆದುಕೊಳ್ಳುವ ಸಮಯವಾಗಿದೆ. ಅಲ್ಲದೆ, ಇಂದಿನಿಂದ ಒಂದು ವಾರದ ಅವಧಿಯಲ್ಲಿ ಭಾರತವು ಜಿ - 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ ಎಂದು ಅವರು ಹೇಳಿದರು.

ಇದನ್ನ ಓದಿ: ಇ- ಕೋರ್ಟ್‌ ಯೋಜ​ನೆ​ಗೆ ಇಂದು ಮೋದಿ ಚಾಲನೆ: ಸುಪ್ರೀಂ ಕೋರ್ಟ​ಲ್ಲಿ ಸಂವಿಧಾನ ದಿನಾಚರಣೆ ವೇಳೆ ಉದ್ಘಾ​ಟ​ನೆ

ಭಾರತದ ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ಸಹ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಅವರು ನ್ಯಾಯಾಂಗವು ಸಕಾಲಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಶ್ಲಾಘಿಸಿದರು. ಬಡವರ ಪರ ನೀತಿಗಳು ಭಾರತದ ಬಡವರು, ಮಹಿಳೆಯರ ಸಬಲೀಕರಣಕ್ಕೆ ಸಹಾಯ ಮಾಡುತ್ತಿವೆ. ಸಾಮಾನ್ಯ ಜನರಿಗೆ ಕಾನೂನುಗಳನ್ನು ಸರಳಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ವೇಳೆ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸಹ ಪ್ರಧಾನಿ ಮೋದಿ ಸ್ಮರಿಸಿದರು. 2008ರಲ್ಲಿ ರಾಷ್ಟ್ರವು ಸಂವಿಧಾನ ದಿನವನ್ನು ಆಚರಿಸುತ್ತಿದ್ದಾಗ ಪ್ರಜಾಪ್ರಭುತ್ವ ಮತ್ತು ರಾಷ್ಟ್ರದ ಶತ್ರುಗಳು ಭಯೋತ್ಪಾದಕ ದಾಳಿ ನಡೆಸಿದರು, ಆ ದಿನ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದೂ ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: Constitution Day: ಜಗತ್ತಿನಲ್ಲೇ ಅತಿ ವಿಶಿಷ್ಟ ಭಾರತೀಯ ಸಂವಿಧಾನ

ಇನ್ನು, ಪ್ರಧಾನಿ ಮೋದಿ ಅವರು ಇ-ಕೋರ್ಟ್ ಯೋಜನೆಯಡಿಯಲ್ಲಿ ವಿವಿಧ ಹೊಸ ಉಪಕ್ರಮಗಳನ್ನು ಶನಿವಾರ ಪ್ರಾರಂಭಿಸಿದರು. ಇದು ದಾವೆದಾರರು, ವಕೀಲರು ಮತ್ತು ನ್ಯಾಯಾಂಗಕ್ಕೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಸಕ್ರಿಯಗೊಳಿಸಿದ ನ್ಯಾಯಾಲಯಗಳ ಮೂಲಕ ಸೇವೆಗಳನ್ನು ಒದಗಿಸುತ್ತದೆ. ಪ್ರಧಾನಮಂತ್ರಿ ಮೋದಿ ಪ್ರಾರಂಭಿಸುತ್ತಿರುವ ಉಪಕ್ರಮಗಳಲ್ಲಿ ವರ್ಚುವಲ್ ಜಸ್ಟೀಸ್‌ ಕ್ಲಾಕ್, JustIS ಮೊಬೈಲ್ ಅಪ್ಲಿಕೇಶನ್ 2.0, ಡಿಜಿಟಲ್ ಕೋರ್ಟ್ ಮತ್ತು S3WaaS ವೆಬ್‌ಸೈಟ್‌ಗಳು ಸೇರಿವೆ.

1949 ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ನವೆಂಬರ್ 26 ಅನ್ನು 2015 ರಿಂದ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ಮೊದಲು ಈ ದಿನವನ್ನು ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು.

click me!