ರಿಮೋಟ್‌ ಇವಿಎಂಗೆ ವಿಪಕ್ಷ ತೀವ್ರ ವಿರೋಧ

By Kannadaprabha NewsFirst Published Jan 17, 2023, 8:48 AM IST
Highlights

ನೂತನವಾಗಿ ಅಭಿವೃದ್ಧಿ ಪಡಿಸಿರುವ ನೂತನ ರಿಮೋಟ್‌ ವೋಟಿಂಗ್‌ ಮಷಿನ್‌ (ಆರ್‌ವಿಎಂ) ತಂತ್ರಜ್ಞಾನದ ಕುರಿತಾಗಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ರಾಜಕೀಯ ಪಕ್ಷಗಳಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿತ್ತು.. ಇದಕ್ಕೆ ವಿಪಕ್ಷಗಳು ಇದಕ್ಕೆ ತಿರಸ್ಕಾರ ಭಾವ ತಾಳಿದ್ದು, ಚುನಾವಣಾ ಆಯೋಗವನ್ನು ಟೀಕಿಸಿವೆ.

ನವದೆಹಲಿ: ನೂತನವಾಗಿ ಅಭಿವೃದ್ಧಿ ಪಡಿಸಿರುವ ನೂತನ ರಿಮೋಟ್‌ ವೋಟಿಂಗ್‌ ಮಷಿನ್‌ (ಆರ್‌ವಿಎಂ) ತಂತ್ರಜ್ಞಾನದ ಕುರಿತಾಗಿ ಕೇಂದ್ರ ಚುನಾವಣಾ ಆಯೋಗ ಸೋಮವಾರ ರಾಜಕೀಯ ಪಕ್ಷಗಳಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದೆ. ಇದಕ್ಕೆ ವಿಪಕ್ಷಗಳು ಇದಕ್ಕೆ ತಿರಸ್ಕಾರ ಭಾವ ತಾಳಿದ್ದು, ಚುನಾವಣಾ ಆಯೋಗವನ್ನು ಟೀಕಿಸಿವೆ.

ಆರ್‌ವಿಎಂ ಬಳಸಿಕೊಂಡು ಮತದಾರನೊಬ್ಬ ದೇಶದ ಯಾವುದೇ ಮೂಲೆಯಲ್ಲಿದ್ದರೂ ತನ್ನ ಸ್ವಕ್ಷೇತ್ರ ಅಭ್ಯರ್ಥಿಗೆ ಮತ ಚಲಾಯಿಸಬಹುದಾಗಿದೆ. ದೇಶದ ಚುನಾವಣಾ ವಲಯದಲ್ಲಿ ಮತ್ತೊಂದು ಕ್ರಾಂತಿಗೆ ಕಾರಣವಾಗಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದರೂ ಸಹ ಪ್ರಾತ್ಯಕ್ಷಿಕೆಯನ್ನು ಯಾವುದೇ ವಿಪಕ್ಷಗಳ ನಾಯಕರು ನೋಡಿಲ್ಲ ಎಂದು ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್‌ ಹೇಳಿದ್ದಾರೆ.

‘ಯಾವುದೇ ವಿಪಕ್ಷಗಳು ಈ ಪ್ರಾತ್ಯಕ್ಷಿಕೆಯನ್ನು ನೋಡಲು ಬಯಸುವುದಿಲ್ಲ. ಭಿನ್ನಾಭಿಪ್ರಾಯಗಳನ್ನು ಚುನಾವಣಾ ಆಯೋಗ ಪರಿಹರಿಸಬೇಕಿತ್ತು. ಅಲ್ಲದೇ ವಿಪಕ್ಷ ನಾಯಕರ ಒಪ್ಪಿಗೆ ಪಡೆಯದೇ ಇದನ್ನು ಆರಂಭಿಸಲಾಗಿದೆ. ಹಾಗಾಗಿ ಯಾವುದೇ ಪಕ್ಷಗಳು ಪ್ರಾತ್ಯಕ್ಷಿಕೆಗೆ ಸಿದ್ಧವಾಗಿಲ್ಲ’ ಎಂದರು. ‘ಆರ್‌ವಿಎಂ ಬಳಕೆಯಿಂದ ಮತದಾನದ ಪ್ರಮಾಣ ಹೆಚ್ಚಳವಾಗುತ್ತದೆ ಎಂಬುದಕ್ಕೆ ಏನು ಪುರಾವೆಗಳಿವೆ? ಬೇರೆ ರಾಜ್ಯಗಳಲ್ಲಿರುವ ವಲಸಿಗರ ಕುರಿತು ಪಕ್ಷಗಳು ಪ್ರಚಾರ ಮಾಡುವುದು ಹೇಗೆ? ಒಂದೇ ಕ್ಷೇತ್ರಕ್ಕೆ ಉಪಚುನಾವಣೆ ಇದ್ದಾಗ ಏನು ಮಾಡಬೇಕು’ ಎಂದು ಆಪ್‌ ನಾಯಕ ಸಂಜಯ್‌ ಸಿಂಗ್‌ ಪ್ರಶ್ನಿಸಿದ್ದಾರೆ.

Udupi Voters List Released: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ

click me!