
ನವದೆಹಲಿ: ಮೂರು ಈಶಾನ್ಯ ರಾಜ್ಯಗಳಲ್ಲಿ ಜಯಗಳಿಸಿದ ಬಳಿಕ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಲವರು ‘ಮರ್ ಜಾ ಮೋದಿ’ (ಸತ್ತು ಹೋಗಿ) ಎಂದು ಹೇಳುತ್ತಿದ್ದರೆ, ಜನರು ಮಾತ್ರ ‘ಮತ್ ಜಾ ಮೋದಿ’ (ಎಲ್ಲೂ ಹೋಗಬೇಡಿ) ಎಂದು ಹೇಳುತ್ತಿದ್ದಾರೆ. ಇದಕ್ಕೆ 3 ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿರುವುದೇ ಸಾಕ್ಷಿ ಎಂದು ಹೇಳಿದ್ದಾರೆ.
ಮೇಘಾಲಯ(Meghalaya), ನಾಗಾಲ್ಯಾಂಡ್ (Nagaland)ಮತ್ತು ತ್ರಿಪುರದಲ್ಲಿನ ಬಿಜೆಪಿ ಗೆಲುವನ್ನು (BJP victory) ‘ತ್ರಿವೇಣಿ ಗೆಲುವು’ ಎಂದು ಕರೆದಿರುವ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಸರ್ಕಾರದ ಕಾರ್ಯ ವೈಖರಿ ಮತ್ತು ಪಕ್ಷದ ಕಾರ್ಯಕರ್ತರ ಸಮರ್ಪಣೆಗೆ ಒಲಿದ ಜಯ ಎಂದು ಹೇಳಿದ್ದಾರೆ. ಬಿಜೆಪಿಯ ವಿರುದ್ಧ ವಿಪಕ್ಷಗಳು ನಕಾರಾತ್ಮಕವಾದ ಹೇಳಿಕೆಗಳನ್ನು ನೀಡುತ್ತಲೇ ಬಂದಿವೆ. ಆದರೆ ಬಿಜೆಪಿ ಮೊದಲು ಗೋವಾದಲ್ಲಿ(Goa), ಇದೀಗ ಈಶಾನ್ಯ ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ ಎಂದು ಹೇಳಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಕೇಸರಿ ಸರ್ಕಾರ, ಯಶಸ್ವಿ ಗೆಲುವಿನ ಹಿಂದಿನ ತ್ರಿವೇಣಿ ಸೀಕ್ರೆಟ್ ಬಹಿರಂಗಗೊಳಿಸಿದ ಪ್ರಧಾನಿ ಮೋದಿ!
ಈಶಾನ್ಯ ರಾಜ್ಯಗಳು ದೆಹಲಿಗೆ ದೂರವಾಗಿವೆ ಎಂದು ವಿಪಕ್ಷಗಳು ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈಶಾನ್ಯ ರಾಜ್ಯಗಳ ಈ ಗೆಲುವು ಈ ರಾಜ್ಯಗಳು ದಿಲ್ಲಿ ಮತ್ತು ದಿಲ್ (ಹೃದಯ)ಗೆ ಹತ್ತಿರದಲ್ಲಿವೆ ಎಂಬುದನ್ನು ಸಾಬೀತು ಮಾಡಿದೆ. ಈ ಸಂಪೂರ್ಣ ಗೆಲುವು ಬಿಜೆಪಿ ಸರ್ಕಾರದ ಕಾರ್ಯವೈಖರಿ ಮತ್ತು ಕಾರ‍್ಯಕರ್ತರ ಸಮರ್ಪಣಾ ಭಾವಕ್ಕೆ ಸೇರಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.
ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿನ ಹಿನ್ನೆಲೆಯಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.
ತ್ರಿಪುರಾದಲ್ಲಿ ಬಿಜೆಪಿ ಸೇರಿ ಎಲ್ಲರ ಬೆವರಿಳಿಸಿದ 2 ವರ್ಷದ ಕೂಸು, ಮೊದಲ ಚುನಾವಣೆಯಲ್ಲಿ 13 ಸ್ಥಾನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ