
ನವದೆಹಲಿ(ಡಿ.25) ಅಜಾದಿ ಕಾ ಅಮೃತ ಮಹೋತ್ಸವ ಆಚರಿಸಿರುವ ಭಾರತ ಇದೀಗ ಮತ್ತೊಂದು ಯೋಜನೆ ಜಾರಿಗೆ ಸಜ್ಜಾಗಿದೆ. ಮೂಲಭೂತ ಸೌಕರ್ಯದಲ್ಲಿ ಮಹತ್ತರ ಬದಲಾವಣೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಈಗಾಲೇ ದೇಶದ ಮೂಲೆ ಮೂಲೆಗೆ ವಂದೇ ಭಾರತ್ ರೈಲು ಸೌಲಭ್ಯ ನೀಡಿದ್ದಾರೆ. ಇದೀಗ ಅಮೃತ್ ಭಾರತ್ ರೈಲು ಓಡಾಟ ಆರಂಭಿಸಲಿದೆ. ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಅಮೃತ್ ಭಾರತ್ ವಿಶೇಷವಾಗಿ ಜನಸಾಮಾನ್ಯರ ರೈಲು. ಜನಸಾಮಾನ್ಯರಿಗೆ ಅತೀ ವೇಗದ ಹಾಗೂ ಅತ್ಯಾಧುನಿಕ ರೈಲು ನೀಡುವ ಅಮೃತ್ ಭಾರತ್‌ನ 2 ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ.
ರಾಮನ ಜನ್ಮಸ್ಥಳ ಅಯೋಧ್ಯೆ ಮತ್ತು ಸೀತೆಯ ಜನ್ಮಸ್ಥಳ ಸೀತಾಮಢಿಯನ್ನು ಸಂಪರ್ಕಿಸುವ ರಾಷ್ಟ್ರದ ಮೊದಲ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಡಿ.30ರಂದು ಚಾಲನೆ ನೀಡಲಿದ್ದಾರೆ.ಈ ರೈಲು ತನ್ನ ಮೊದಲ ಪ್ರಯಾಣದಲ್ಲಿ ಅಯೋಧ್ಯೆಯಿಂದ ಸೀತಾಮಢಿಯ ಮೂಲಕ ದರ್ಭಾಂಗಕ್ಕೆ ತೆರಳಲಿದೆ. ಮರುದಿನದಿಂದ ಆ ರೈಲು ದೆಹಲಿಯಿಂದ ಅಯೋಧ್ಯೆ-ಸೀತಾಮಢಿಯ ಮೂಲಕ ದರ್ಭಾಂಗಕ್ಕೆ ಸಂಚಾರ ನಡೆಸುತ್ತದೆ. ಇದೇ ವೇಳೆ ಪ್ರಧಾನಿ ಅಯೋಧ್ಯೆಯಲ್ಲಿ ವಂದೇ ಭಾರತ್ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಚಾಲನೆ ನೀಡುವ ನಿರೀಕ್ಷೆಯಿದೆ.
ಬೆಂಗಳೂರಿಗೆ 2 ಸೇರಿ 5 ವಂದೇ ಭಾರತ್, 2 ಅಮೃತ್ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಡಿ. 30 ರಂದು ಹಸಿರು ನಿಶಾನೆ
ಅಮೃತ್ ಭಾರತ್ ರೈಲುಗಳು ಹವಾನಿಯಂತ್ರಣ ರಹಿತ ರೈಲುಗಳಾಗಿದ್ದು, ವಲಸೆ ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪರಿಚಯಿಸಲಾಗುತ್ತಿದೆ. ಈ ರೈಲು ಹೆಚ್ಚಾಗಿ ರಾತ್ರಿಯ ವೇಳೆ ಸಂಚರಿಸುತ್ತವೆ.130 ಕಿಲೋಮೀಟರ್ ವೇಗದಲ್ಲಿ ಸಾಗಬಲ್ಲ ಸಾಮರ್ಥ್ಯ ಹೊಂದಿರುವ ಅಮೃತ್ ಭಾರತ್ ರೈಲು ಜನಸಾಮಾನ್ಯರು, ವಲಸೆ ಕಾರ್ಮಿಕರು ಸೇರಿದಂತೆ ಹಲವರ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ನೀಡಲಾಗುತ್ತದೆ. ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಕಿತ್ತಳೆ ಹಾಗೂ ಬೂದು ಬಣ್ಣದಲ್ಲಿ ಕಂಗೊಳಿಸಲಿದೆ.
ಅಮೃತ್ ಭಾರತ್ ರೈಲು 22 ಕೋಚ್ ಹೊಂದಿರಲಿದೆ. ಈ ರೈಲು ಪ್ರಯಾಣದ ಸಮಯವನ್ನು ಕಡಿತಗೊಳಿಸಲಿದೆ. ಇದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಎಫ್ಆರ್‌ಪಿ ಮಾದರಿ ಶೌಚಾಲಯ, ಸ್ನಾಕ್ ಟೇಬಲ್, ಮೊಬೈಲ್ ಚಾರ್ಜರ್, ಬಾಟಲಿ ಇಡಲು ಜಾಗ, ಲಗೇಜ್ ಇಡಲು ಸ್ಥಳವಕಾಶ ಸೇರಿದಂತೆ ಹಲವು ಸೌಲಭ್ಯಗಳು ಈ ರೈಲಿನಲ್ಲಿದೆ.
ಯಶವಂತಪುರ-ಅರಸಿಕೆರೆ ನಡುವೆ ಸ್ವಯಂಚಾಲಿತ ಸಿಗ್ನಲಿಂಗ್ ಶೀಘ್ರ
ವಿಶೇಷವಾಗಿ ಅಮೃತ್ ಭಾರತ್ ರೈಲುಗಳು ಚೆನ್ನೈನಲ್ಲಿ ಉತ್ಪಾದನೆಯಾಗುತ್ತಿದೆ. ಮೊದಲ ಅಮೃತ್ ಭಾರತ್ ರೈಲು ಆಯೋಧ್ಯೆ ದರ್ಭಾಂಗ್ ಮಾರ್ಗದಲ್ಲಿ ಸಂಚರಿಸಿದರೆ, ಎರಡನೇ ಅಮೃತ್ ಭಾರತ್ ರೈಲು ಬೆಂಗಳೂರು-ಮಾಲ್ಡಾ ಮಾರ್ಗದಲ್ಲಿ ಸಂಚರಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ