ಆಪರೇಷನ್ ಏರ್‌ಲಿಫ್ಟ್‌: ಭಾರತದ ಇತಿಹಾಸದ ಅತಿದೊಡ್ಡ ಕಾರ್ಯಾಚರಣೆ!

By Kannadaprabha News  |  First Published May 6, 2020, 8:10 AM IST

ನಾಳೆಯಿಂದ ಮೆಗಾ ಏರ್‌ಲಿಫ್ಟ್‌!| ವಿದೇಶದಲ್ಲಿರುವ ಭಾರತೀಯರ ಕರೆತರಲು ಅತಿದೊಡ್ಡ ಕಾರ್ಯಾಚರಣೆ| ವಿಮಾನ, ಹಡಗುಗಳ ಬಳಕೆ| ಮೊದಲ ಹಂತದಲ್ಲಿ ಸುಮಾರು 15 ಸಾವಿರ ಜನರು ಭಾರತಕ್ಕೆ ವಾಪಸ್‌| ವಿದೇಶಗಳಿಂದ ಒಟ್ಟಾರೆಯಾಗಿ 2ರಿಂದ 4 ಲಕ್ಷದಷ್ಟುಜನರನ್ನು ಹಂತ ಹಂತವಾಗಿ ಕರೆತರುವ ಸಾಧ್ಯತೆ


ನವದೆಹಲಿ(ಮೇ.06): ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ವಿಶ್ವದ ವಿವಿಧೆಡೆ ಸಿಲುಕಿಕೊಂಡಿರುವ ಭಾರತೀಯರನ್ನು ತವರಿಗೆ ಕರೆತರಲು ಕೇಂದ್ರ ಸರ್ಕಾರ ದೇಶದ ಇತಿಹಾಸದಲ್ಲೇ ಅತ್ಯಂತ ಬೃಹತ್ತಾದ ಕಾರ್ಯಾಚರಣೆ ನಡೆಸಲು ಸನ್ನದ್ಧವಾಗಿದೆ.

ವಿವಿಧ ದೇಶಗಳಲ್ಲಿ ಅತಂತ್ರರಾಗಿರುವ ಸುಮಾರು 4 ಲಕ್ಷ ಮಂದಿ ತವರಿಗೆ ಬರಲು ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಿಮಾನ, ಹಡಗು ಬಳಸಿ ಭಾರತೀಯರನ್ನು ವಿವಿಧ ಹಂತಗಳಲ್ಲಿ ಕರೆತರಲು ಸರ್ಕಾರ ಕಾರ್ಯತಂತ್ರ ರೂಪಿಸಿದೆ. ಮೊದಲ ಹಂತದ ಕಾರ್ಯಾಚರಣೆ ಮೇ 7ರಿಂದ 13ರವರೆಗೆ ನಡೆಯಲಿದೆ. ಏರ್‌ ಇಂಡಿಯಾದ 64 ವಿಮಾನಗಳನ್ನು ಯುಎಇ, ಬ್ರಿಟನ್‌, ಅಮೆರಿಕ, ಖತಾರ್‌, ಸೌದಿ ಅರೇಬಿಯಾ, ಸಿಂಗಾಪುರ, ಮಲೇಷ್ಯಾ, ಫಿಲಿಪ್ಪೀನ್ಸ್‌, ಬಾಂಗ್ಲಾದೇಶ, ಬಹ್ರೇನ್‌, ಕುವೈತ್‌, ಒಮಾನ್‌ಗೆ ಕಳುಹಿಸಿ 14800 ಭಾರತೀಯರನ್ನು ತವರಿಗೆ ಕರೆತರಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Latest Videos

undefined

ತವರಿಗೆ ಬರಲು 58000 ಕನ್ನಡಿಗರು ರೆಡಿ, ಕ್ವಾರಂಟೈನ್‌ ಮಾಡುವುದೇ ಸವಾಲು!

64 ವಿಮಾನಗಳ ಪೈಕಿ 15 ಕೇರಳಕ್ಕೆ ಬಂದಿಳಿಯಲಿವೆ. ತಲಾ 11 ದೆಹಲಿ ಹಾಗೂ ತಮಿಳುನಾಡಿಗೆ ಆಗಮಿಸಲಿವೆ. ತಲಾ 7 ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಲ್ಯಾಂಡ್‌ ಆಗಲಿವೆ. ಕರ್ನಾಟಕಕ್ಕೆ 3 ವಿಮಾನ ಆಗಮಿಲಿಸಿದೆ. ಮಿಕ್ಕ ವಿಮಾನಗಳು ಇನ್ನೂ 4 ರಾಜ್ಯಗಳಿಗೆ ಜನರನ್ನು ತಲುಪಿಸಲಿವೆ. 64 ವಿಮಾನಗಳಲ್ಲಿ 10 ಯುಎಇಗೆ ತೆರಳಲಿದ್ದರೆ, ತಲಾ 7 ವಿಮಾನಗಳು ಅಮೆರಿಕ ಹಾಗೂ ಬ್ರಿಟನ್‌ನಿಂದ ಭಾರತೀಯರನ್ನು ಕರೆತರಲಿವೆ. 5 ಸೌದಿ ಅರೇಬಿಯಾ, 5 ಸಿಂಗಾಪುರ ಹಾಗೂ 2 ಖತಾರ್‌ಗೆ ಹೋಗಲಿವೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಯುಎಇ ಮತ್ತು ಮಾಲ್ಡೀವ್‌್ಸಗೆ ತಲಾ 2 ಹಡಗುಗಳು ಈಗಾಗಲೇ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ಭಾರತೀಯರನ್ನು ಕರೆತರಲಿವೆ.

ಹಿಂದಿನ ಏರ್‌ಲಿಫ್ಟ್‌ಗಳು

1.7 ಲಕ್ಷ ಜನ: 1990ರ ಕೊಲ್ಲಿ ಯುದ್ಧ ವೇಳೆ ಕುವೈತ್‌ನಿಂದ 1.7 ಲಕ್ಷ ಜನರನ್ನು ಏರಿಂಡಿಯಾ ಕರೆತಂದಿತ್ತು. ಇದು ಈವರೆಗಿನ ಅತಿದೊಡ್ಡ ಕಾರಾರ‍ಯಚರಣೆ

15000 ಮಂದಿ: 2011ರಲ್ಲಿ ಲಿಬಿಯಾದಲ್ಲಿ ಅಮೆರಿಕ ನೇತೃತ್ವದ ಪಡೆಗಳು ಯುದ್ಧ ಸಾರಿದಾಗ 15 ಸಾವಿರ ಭಾರತೀಯರನ್ನು ತವರಿಗೆ ಕರೆತರಲಾಗಿತ್ತು

4600 ಜನರು: 2015ರಲ್ಲಿ ಯೆಮನ್‌ ಬಿಕ್ಕಟ್ಟು ವೇಳೆ ಭಾರತ ಸರ್ಕಾರ 4640 ಭಾರತೀಯರು ಹಾಗೂ 41 ದೇಶಗಳ 960 ವಿದೇಶಿಗರನ್ನೂ ರಕ್ಷಣೆ ಮಾಡಿತ್ತು

7 ದಿನ: ಮೇ 7ರಿಂದ 13ರವರೆಗೆ ಮೊದಲ ಹಂತದ ಏರ್‌ಲಿಫ್ಟ್‌ ಕಾರ್ಯಕ್ರಮ

13 ದೇಶ: ಅಮೆರಿಕ, ಬ್ರಿಟನ್‌, ಕೊಲ್ಲಿ ಸೇರಿ 13 ದೇಶಗಳಿಂದ ಜನರು ತವರಿಗೆ

64 ವಿಮಾನ: ಮೊದಲ ಹಂತದ ಏರ್‌ಲಿಫ್ಟ್‌ಗೆ ಬಳಕೆಯಾಗಲಿರುವ ವಿಮಾನಗಳು

14800 ಜನ: ಮೊದಲ ಹಂತದಲ್ಲಿ ಭಾರತಕ್ಕೆ ವಾಪಸ್‌ ಆಗಲಿರುವ ಜನರ ಸಂಖ್ಯೆ

ದೇಶದಲ್ಲಿ ಬೃಹತ್‌ ಕೊರೋನಾ ಸ್ಫೋಟ: ಒಂದೇ ದಿನ 4885 ಕೇಸ್‌!

ಟಿಕೆಟ್‌, ಕ್ವಾರಂಟೈನ್‌ ವೆಚ್ಚ ಪ್ರಯಾಣಿಕರದ್ದೇ

ವಿದೇಶದಿಂದ ತವರಿಗೆ ಬರುವ ಭಾರತೀಯರನ್ನು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿಡಲಾಗುತ್ತದೆ. ತವರಿಗೆ ಬರುವವರು ಪ್ರಯಾಣ ಶುಲ್ಕದ ಜತೆಗೆ ಕ್ವಾರಂಟೈನ್‌ ಶುಲ್ಕವನ್ನು ಪಾವತಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಲಂಡನ್‌ನಿಂದ 50 ಸಾವಿರ, ಅಮೆರಿಕದಿಂದ 1 ಲಕ್ಷ ದರ

ಲಂಡನ್‌ನಿಂದ ಭಾರತಕ್ಕೆ ಮರಳುವವರಿಗೆ 50000 ರು., ಅಮೆರಿಕದಿಂದ ಮರಳುವವರಿಗೆ 1 ಲಕ್ಷ ರು., ಕೊಲ್ಲಿ ದೇಶಗಳಿಂದ ಮರಳುವವರಿಗೆ 15000, ಇತರೆ ದೇಶಗಳಿಂದ ಮರಳುವವರಿಗೆ 12000 ರು. ಟಿಕೆಟ್‌ ದರ ನಿಗದಿಪಡಿಸಲಾಗಿದೆ.

ವಾಪಸ್‌ ಬರುವವರಿಗೆ ಆರೋಗ್ಯ ತಪಾಸಣೆ

- ಸ್ವದೇಶಕ್ಕೆ ಮರಳುವ ಭಾರತೀಯರಿಗೆ ಆರೋಗ್ಯ ತಪಾಸಣೆ ಕಡ್ಡಾಯ

- ಸೋಂಕು ಲಕ್ಷಣ ಇಲ್ಲದವರಿಗೆ ಮಾತ್ರ ವಿಮಾನವನ್ನು ಏರಲು ಅವಕಾಶ

- ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್‌ ಕಡ್ಡಾಯ ಅಳವಡಿಸಬೇಕು

- ಅದರಲ್ಲಿ ತಮ್ಮ ಆರೋಗ್ಯದ ಕುರಿತು ಸಮಗ್ರ ಮಾಹಿತಿ ದಾಖಲಿಸಬೇಕು

click me!