ಅಧಿಕಾರಿಗಳ ವರ್ಗಾವಣೆ, ನೇಮಕಾತಿಗೆ ಕೇಂದ್ರದ ಸುಗ್ರೀವಾಜ್ಞೆ: ಮತ್ತೆ ಸುಪ್ರೀಂ ಮೆಟ್ಟಿಲೇರಲಿರೋ ಕೇಜ್ರಿವಾಲ್‌

Published : May 20, 2023, 05:40 PM IST
ಅಧಿಕಾರಿಗಳ ವರ್ಗಾವಣೆ, ನೇಮಕಾತಿಗೆ ಕೇಂದ್ರದ ಸುಗ್ರೀವಾಜ್ಞೆ: ಮತ್ತೆ ಸುಪ್ರೀಂ ಮೆಟ್ಟಿಲೇರಲಿರೋ ಕೇಜ್ರಿವಾಲ್‌

ಸಾರಾಂಶ

ಈ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಇದು ದೆಹಲಿ ಸರ್ಕಾರದ ಕೆಲಸವನ್ನು ನಿಧಾನಗೊಳಿಸುತ್ತದೆ, ಆದರೆ ಅದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ. 

ನವದೆಹಲಿ (ಮೇ 20, 2023): ರಾಜಧಾನಿಯಲ್ಲಿ ಅಧಿಕಾರಶಾಹಿಗಳನ್ನು ಯಾರು ನಿಯಂತ್ರಿಸುತ್ತಾರೆ ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಹೊಸ ಸುಗ್ರೀವಾಜ್ಞೆ ಹೊರಡಿಸಿದೆ. ಈ ಆದೇಶದ ವಿರುದ್ಧ ಅರವಿಂದ್‌ ಕೇಜ್ರಿವಾಲ್‌ ಕಿಡಿಕಾರಿದ್ದಾರೆ. ಈ ಆದೇಶದ ಮೂಲಕ ಕೇಂದ್ರ ಸರ್ಕಾರವು "ಸುಪ್ರೀಂ ಕೋರ್ಟ್‌ ಅನ್ನು ಅವಮಾನಿಸಿದೆ" ಎಂದು ಶನಿವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಹೊಸ ಸುಗ್ರೀವಾಜ್ಞೆ ವಿರುದ್ಧ ಕಿಡಿ ಕಾರಿದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ "ಇದೊಂದು ಅಸಹ್ಯಕರ ಜೋಕ್. ಅವರು ಒಂದು ವಾರದೊಳಗೆ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಅನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದೆ. ಇದು ಸುಪ್ರೀಂ ಕೋರ್ಟ್‌ನ ನೇರ ತಿರಸ್ಕಾರ ಮತ್ತು ಅದರ ಘನತೆಗೆ ಅವಮಾನವಾಗಿದೆ" ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ಇದನ್ನು ಓದಿ: ದಿಲ್ಲಿ ಮದ್ಯ ಹಗರಣ: ಇಬ್ಬರಿಗೆ ಜಾಮೀನು, ಮೇಲ್ನೋಟಕ್ಕೆ ಆರೋಪ ಸತ್ಯವಲ್ಲ ಎಂದ ದಿಲ್ಲಿ ಕೋರ್ಟ್‌

ಅಲ್ಲದೆ, ಈ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಇದು ದೆಹಲಿ ಸರ್ಕಾರದ ಕೆಲಸವನ್ನು ನಿಧಾನಗೊಳಿಸುತ್ತದೆ, ಆದರೆ ಅದನ್ನು ನಿಲ್ಲಿಸುವುದಿಲ್ಲ ಎಂದೂ ಅರವಿಂದ್‌ ಕೇಜ್ರಿವಾಲ್ ಹೇಳಿದರು. ಜತೆಗೆ, ಕೇಂದ್ರ ಸರ್ಕಾರವು "ಅಸಂವಿಧಾನಿಕ" ಆದೇಶವನ್ನು ಅಥವಾ ಸುಗ್ರೀವಾಜ್ಞೆಯನ್ನು ಪರಿಚಯಿಸುವ ಮೊದಲು ನ್ಯಾಯಾಲಯದ ಬೇಸಿಗೆ ರಜೆಗಾಗಿ ಕಾದಿದೆ ಎಂದೂ ಎಎಪಿ ಮುಖ್ಯಸ್ಥ ಆರೋಪಿಸಿದ್ದಾರೆ. 

ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂ ವ್ಯವಹಾರಗಳನ್ನು ಹೊರತುಪಡಿಸಿ ಅಧಿಕಾರಶಾಹಿಗಳ ನೇಮಕಾತಿ ಮತ್ತು ವರ್ಗಾವಣೆಯ ಮೇಲೆ ದೆಹಲಿ ಸರ್ಕಾರವು ಶಾಸಕಾಂಗ ಮತ್ತು ಕಾರ್ಯಕಾರಿ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್‌ ಮೇ 11 ರಂದು ತೀರ್ಪು ನೀಡಿತ್ತು. ಆದರೆ, ಈ ತೀರ್ಪನ್ನು ರದ್ದುಗೊಳಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರವು ಪರಿಚಯಿಸಿದ್ದ, ಈ ಹಿನ್ನೆಲೆ ಇಂದು ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮನೆ ನವೀಕರಣಕ್ಕೆ 45 ಕೋಟಿ ರೂ. ಖರ್ಚು ಮಾಡಿದ ‘ಆಮ್‌ ಆದ್ಮಿ’ ಸಿಎಂ ಕೇಜ್ರಿವಾಲ್‌!

ಅಲ್ಲದೆ, ಇದು "ದಾಖಲೆಯ ಮುಖದಲ್ಲಿ ಕಂಡುಬರುವ ದೋಷಗಳಿಂದ ಬಳಲುತ್ತಿದೆ ಮತ್ತು ಪರಿಶೀಲನಾ ಅರ್ಜಿದಾರರು ಸಲ್ಲಿಸಿದ ಪ್ರಕರಣವನ್ನು ಪರಿಗಣಿಸಲು ವಿಫಲವಾಗಿದೆ" ಎಂದು ಹೇಳುವ ಮೂಲಕ ತೀರ್ಪನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಕಳೆದ ವಾರ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಸರ್ವಾನುಮತದ ತೀರ್ಪಿನಲ್ಲಿ, 2015 ರಿಂದ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ವಿವಾದವನ್ನು ಕೊನೆಗೊಳಿಸಿತ್ತು.

ಆದರೆ, ಶುಕ್ರವಾರ, ಕೇಂದ್ರ ಸರ್ಕಾರವು ವಿಶೇಷ ಆದೇಶವನ್ನು ಹೊರಡಿಸಿದ್ದು (ಸುಗ್ರೀವಾಜ್ಞೆ ಎಂದು ಕರೆಯಲ್ಪಡುತ್ತದೆ) ದೆಹಲಿಯಲ್ಲಿ ಗ್ರೂಪ್-ಎ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಾಗಿ ಆಥಾರಿಟಿಯನ್ನು ರಚಿಸಿದೆ. ಆದರೆ, ಎಎಪಿ ಸರ್ಕಾರವು ಕೇಂದ್ರ ಸರ್ಕಾರದ ಈ ಕ್ರಮವನ್ನು ವಂಚನೆ ಎಂದು ಕರೆದಿದೆ.  

ಇದನ್ನೂ ಓದಿ: ಪ್ರಧಾನಿ ಸಾರ್, ನಿಮಗೆ ಬೇಕಾದುದನ್ನು ಮಾಡಿ, ಆಪ್‌ ಹೋರಾಟ ನಿಲ್ಸಲ್ಲ; ಸಿಬಿಐ ತನ್ನನ್ನು ಅರೆಸ್ಟ್‌ ಮಾಡಬಹುದು: ಕೇಜ್ರಿವಾಲ್‌

ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಯನ್ನು ಹೊರತುಪಡಿಸಿ ದೆಹಲಿಯಲ್ಲಿ ಸೇವೆಗಳ ನಿಯಂತ್ರಣವನ್ನು ಚುನಾಯಿತ ಸರ್ಕಾರಕ್ಕೆ ಹಸ್ತಾಂತರಿಸಿದ ಒಂದು ವಾರದ ನಂತರ ಬಂದ ಸುಗ್ರೀವಾಜ್ಞೆಯು,  ಡ್ಯಾನಿಕ್ಸ್ ಕೇಡರ್‌ನ ಗ್ರೂಪ್‌ - ಎ ಅಧಿಕಾರಿಗಳ ವಿರುದ್ಧ ಶಿಸ್ತಿನ ಪ್ರಕ್ರಿಯೆಗಳಿಗೆ ವರ್ಗಾವಣೆ ಮತ್ತು ಶಿಸ್ತು ಕ್ರಮಗಳಿಗಾಗಿ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರವನ್ನು ಸ್ಥಾಪಿಸುವುದಾಗಿ ಹೇಳಿದೆ. 

ಇದನ್ನೂ ಓದಿ: ಜನ ಮೋದಿ ವರ್ಚಸ್ಸಿಗೆ ವೋಟ್‌ ಹಾಕಿದ್ದಾರೇ ಹೊರತು ಪದವಿ ನೋಡಲ್ಲ: ನಮೋ ಪರ ಬ್ಯಾಟ್‌ ಬೀಸಿದ ಎನ್‌ಸಿಪಿ ನಾಯಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ