ಎಸ್ಸೆಸ್ಸೆಲ್ಸಿ ಟಾಪರ್‌ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು, ಅಂಗಾಂಗ ದಾನ ಮಾಡಿ 6 ಜನರ ಜೀವಕ್ಕೆ ಬೆಳಕಾದ!

Published : May 20, 2023, 05:40 PM ISTUpdated : May 20, 2023, 05:50 PM IST
ಎಸ್ಸೆಸ್ಸೆಲ್ಸಿ ಟಾಪರ್‌ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು, ಅಂಗಾಂಗ ದಾನ ಮಾಡಿ 6 ಜನರ ಜೀವಕ್ಕೆ ಬೆಳಕಾದ!

ಸಾರಾಂಶ

ಇನ್ನೇನು ಫಲಿತಾಂಶ ಹೊರಬೀಳಬೇಕು ಅನ್ನೋವಷ್ಟರಲ್ಲಿ ಆತ ರಸ್ತೆ ಅಪಘಾತದಲ್ಲಿ ಸಾವು ಕಂಡಿದ್ದ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಆತ ಇಡೀ ರಾಜ್ಯಕ್ಕೆ ಟಾಪರ್‌ ಆಗಿದ್ದರೂ ಸಂಭ್ರಮಿಸಲು ಅವನೇ ಇದ್ದಿರಲಿಲ್ಲ. ಕೊನೆಗೆ ಆತನ ಅಂಗಾಂಗವನ್ನು ದಾನ ಮಾಡಿ 6 ಜನರ ಜೀವವನ್ನು ಉಳಿಸಲಾಗಿದೆ.  

ತಿರುವನಂತಪುರಂ (ಮೇ.20): ಇನ್ನೊಂದು ದಿನ ಕಳೆದರೆ ತಾನು ಪರಿಶ್ರಮ ಪಟ್ಟುಬರೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಬರುವುದರಲ್ಲಿತ್ತು. ಆದರೆ, ವಿಧಿ ಆ ವ್ಯಕ್ತಿಯ ಬಾಳಲ್ಲಿ ನಿರೀಕ್ಷೆಯೇ ಮಾಡದ ಆಟವಾಡಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆತ ಇಡೀ ರಾಜ್ಯಕ್ಕೆ ಟಾಪರ್‌ ಏನೋ ಆಗಿದ್ದ. ಆದರೆ, ಸಂಭ್ರಮ ಪಡಲು ಆತನೇ ಭೂಮಿಯ ಮೇಲಿರಲಿಲ್ಲ. ಫಲಿತಾಂಶ ಬರೋದಕ್ಕೂ ಕೆಲ ದಿನ ಮುಂಚೆ ನಡೆದ ರಸ್ತೆ ಅಫಘಾತದಲ್ಲಿ 16 ವರ್ಷದ ಹುಡುಗ ತೀವ್ರವಾಗಿ ಪೆಟ್ಟು ಕಂಡಿದ್ದರೆ, ಫಲಿತಾಂಶ ಬರುವ ಒಂದು ದಿನ ಮುಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದ. ಈ ದಾರುಣ ಘಟನೆ ನಡೆದಿರುವುದು ಕೇರಳದ ತಿರುವನಂತಪುರದಲ್ಲಿ. ಸಾವಿನಲ್ಲಿಯೂ ಸಾರ್ಥಕತೆ ಮರೆದ ಹುಡುಗ, ತನ್ನ ಅಂಗಾಂಗವನ್ನು 6 ಜನರಿಗೆ ದಾನ ಮಾಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ. ತಮ್ಮ 16 ವರ್ಷದ ಪುತ್ರ ಬಿಆರ್‌ ಸಾರಂಗ್‌ನ ಅಂಗಾಂಗವನ್ನು ತೆಗೆಯಲು ಅವರ ಪೋಷಕರಾದ ಬಿನೇಶ್‌ ಕುಮಾರ್‌ ಹಾಗೂ ರಜನೀಶ್‌ ಅನುಮತಿ ನೀಡಿದ ಬೆನ್ನಲ್ಲಿಯೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಅಗತ್ಯವಿರುವ ಅಂಗಗಳನ್ನು 6 ಮಂದಿಗೆ ಜೋಡಿಸಿದ್ದಾರೆ. ಅಟ್ಟಿಂಗಲ್‌ನ ಸರ್ಕಾರಿ ಬಾಲಕರ ಎಚ್‌ಎಸ್‌ಎಸ್‌ನ ವಿದ್ಯಾರ್ಥಿಯಾಗಿದ್ದ ಸಾರಂಗ್, ಮೇ 6 ರಂದು ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಕಳೆದ ಮಂಗಳವಾರ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದಾಗ ಅವರು ಯಾವುದೇ ಗ್ರೇಸ್‌ ಮಾರ್ಕ್ಸ್‌ ಸಹಾಯ ಪಡೆಯದೆ ಎ ಪ್ಲಸ್‌ ದರ್ಜೆ ಪಡೆದುಕೊಂಡಿದ್ದರು.

ಶುಕ್ರವಾರ ಎಸ್ಸೆಸ್ಸೆಲ್ಸಿ ಫಲಿತಾಂಶದ ಬಗ್ಗೆ ಕುರಿತಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಜ್ಯದ ಶಿಕ್ಷಣ ಸಚಿವ ವಿ.ಶಿವನಕುಟ್ಟಿ ಕೂಡ ಬಹಳ ಭಾವುಕರಾದರು. ಪತ್ರಿಕಾಗೋಷ್ಠಿಯಲ್ಲಿ, ಇತ್ತೀಚೆಗೆ ಅಪಘಾತದಲ್ಲಿ ಸಾವನ್ನಪ್ಪಿದ ಸಾರಂಗ್ ಅವರು ಉನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ್ದಾರೆ ಎಂದು ಹೇಳುವ ವೇಳೆ ಕಣ್ಣೀರು ಹಾಕಿದ್ದಾರೆ.

ತಿರುವನಂತಪುರಂನಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ ಹತ್ತನೇ ತರಗತಿ ವಿದ್ಯಾರ್ಥಿ ಸಾರಂಗ್ ಗ್ರೇಸ್ ಮಾರ್ಕ್ ಇಲ್ಲದೆ ಎಲ್ಲಾ ವಿಷಯಗಳಿಗೆ ಸಂಪೂರ್ಣ ಎ ಪ್ಲಸ್ ಗ್ರೇಡ್ ಪಡೆದಿದ್ದಾನೆ ಎಂದು ಶಿವನ್‌ಕುಟ್ಟಿ ಹೇಳಿದ್ದರು.

ಕಪ್ಪು ಹಣದ ವಿರುದ್ದ ಸರ್ಜಿಕಲ್ ಸ್ಟ್ರೈಕ್, 2000 ನೋಟು ಹಿಂತೆಗೆದ ಪ್ರಶಂಸಿದ ಮೋದಿ ಮಾಜಿ ಕಾರ್ಯದರ್ಶಿ!

ಅಂಗಾಂಗ ದಾನ ಮಾಡಲು ಕುಟುಂಬದವರು ಮುಂದಾಗಿರುವುದು ಸಮಾಜ ಸೇವೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಮೇ 6 ರಂದು ವಡಕ್ಕೊಟ್ಟುಕಾವ್‌ನ ಕುಣಂತುಕೋಣಂ ಸೇತುವೆ ಬಳಿ ತನ್ನ ತಾಯಿಯೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತದಲ್ಲಿ ಸಾರಂಗ್ ಗಾಯಗೊಂಡಿದ್ದರು.

ಇವನೆಂಥಾ ಗಂಡ..ಹೆಂಡ್ತಿಯ ಅಶ್ಲೀಲ ವಿಡಿಯೋ ಗರ್ಲ್‌ಫ್ರೆಂಡ್‌ಗೆ ಶೇರ್‌ ಮಾಡಿದ ಭೂಪ!

ಫುಟ್‌ಬಾಲ್‌ ಹಾಗೂ ಕ್ರಿಶ್ಚಿಯಾನೋ ರೊನಾಲ್ಡೊ ದೊಡ್ಡ ಅಭಿಮಾನಿಯಾಗಿದ್ದ ಸಾರಂಗ್‌, ಮೇ 6 ರಂದು ತಾಯಿಯ ಜೊತೆ ಆಟೋರಿಕ್ಷಾದಲ್ಲಿ ಹೋಗುವಾಗ ಅಪಘಾತ ಸಂಭವಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾರಂಗ್‌ಗೆ ಕೆಲ ದಿನಗಳ ಹಿಂದೆ ಪ್ರಜ್ಞೆ ಕೂಡ ಬಂದಿತ್ತು. ಈ ವೇಳೆ ತನ್ನ ಫೇವರಿಟ್‌ ಫುಟ್‌ಬಾಲ್‌ ಜರ್ಸಿಯನ್ನು ತರುವಂತೆ ಆಸ್ಪತ್ರೆಯಲ್ಲಿದ್ದವರಿಗೆ ಹೇಳಿದ್ದ. ಇದನ್ನು ಅವರು ತಂದು ಕೂಡ ಕೊಟ್ಟಿದ್ದರು. ಶುಕ್ರವಾರ ನಡೆದ ಅಂತ್ಯ ಸಂಸ್ಕಾರದ ವೇಳೆ ಸಾರಂಗ್‌ಗೆ ಅವರ ಫೇವರಿಟ್‌ ಆದ ಕ್ರಿಶ್ಚಿಯಾನೋ ರೊನಾಲ್ಡೋ ಅವರ ಜರ್ಸಿಯನ್ನು ಚಿತೆಗೆ ಹಾಕಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು