ಶಬರಿಮಲೆ ಯಾತ್ರೆಗೆ ಇನ್ನು ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ: ನಿತ್ಯ ಇಷ್ಟು ಭಕ್ತರಿಗಷ್ಟೇ ಅಯ್ಯಪ್ಪ ದರ್ಶನ

By Kannadaprabha News  |  First Published Oct 6, 2024, 5:59 AM IST

ಪ್ರಸಿದ್ದ ಶಬರಿಮಲೆ ದೇಗುಲದ ವಾರ್ಷಿಕ ಮಂಡಲ೦- ಮಕರವಿಳಕ್ಕು ಯಾತ್ರೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ವರ್ಷ ಆನ್‌ಲೈನ್‌ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಶಬರಿಮಲೆಗೆ ಪ್ರವೇಶ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ. 


ತಿರುವನಂತಪುರ (ಅ.06): ಪ್ರಸಿದ್ದ ಶಬರಿಮಲೆ ದೇಗುಲದ ವಾರ್ಷಿಕ ಮಂಡಲ೦- ಮಕರವಿಳಕ್ಕು ಯಾತ್ರೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ವರ್ಷ ಆನ್‌ಲೈನ್‌ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಶಬರಿಮಲೆಗೆ ಪ್ರವೇಶ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಏಕಾಏಕಿ ಲಕ್ಷಾಂತರ ಭಕ್ತರು ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದರಿಂದ ಮತ್ತು ಅದನ್ನು ನಿರ್ವಹಿಸಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿ ಕೊಂಡಿರದ ಕಾರಣ ಭಾರೀ ಅವ್ಯವಸ್ಥೆ ಉಂಟಾಗಿತ್ತು. 

ಭಕ್ತರು ದಿನಗಟ್ಟಲೆ ಮೆಟ್ಟಿಲು ಮೇಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕರ್ನಾ ಟಕ ಸೇರಿದಂತೆ ವಿವಿಧ ರಾಜ್ಯ ಗಳ ಭಕ್ತರು ದೇವರ ದರ್ಶನ ಮಾಡದೇ ವಂತಾಗಿತ್ತು.ಈ ಹಿನ್ನೆಲೆಯಲ್ಲಿ ಈ ವರ್ಷ ಭಕ್ತರ ನಿರ್ವಹಣೆ ಸಮರ್ಪಕವಾಗಿ ಮರಳು ಮಾಡುವ ನಿಟ್ಟಿನಲ್ಲಿ ಆನ್ ಲೈನ್‌ನಲ್ಲಿ ಬುಕ್ ಮಾಡಿದವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ಮಾಡಿಕೊ ಡಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ ನಿತ್ಯ ಗರಿಷ್ಠ 80000 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು. 

Tap to resize

Latest Videos

ಜಾತಿ ಗಣತಿ ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

ವರ್ಚ್‌ಯುವಲ್ ಕ್ಯು ಬುಕ್ಕಿಂಗ್ ಸಮಯದಲ್ಲೇ ತಾವು ಆಗಮಿಸುವ ಮಾರ್ಗವನ್ನೂ ಆಯ್ಕೆ ಮಾಡಿಕೊಳ್ಳುವ ಅವಕಾಶ ಭಕ್ತರಿಗೆ ಸಿಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಕೈಗೊಂಡ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ ಸಾಂಪ್ರ ದಾಯಿಕ ಅರಣ್ಯ ಮಾರ್ಗದಲ್ಲಿ ಬರುವ ಭಕ್ತರಿಗೆ ಎಲ್ಲಾ ರೀತಿಯ ಸವಲತ್ತು ಕಲ್ಪಿಸಲಾಗುವುದು. ಅಗತ್ಯ ಬಿದ್ದರೆ ನೀಲಕ್ಕಲ್ ಮತ್ತು ಪಂಬಾದಲ್ಲಿ ಈ ವರ್ಷ ವಾಹನ ನಿಲುಗಡೆಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗುವುದು. ಶಬರಿಮಲೆಗೆ ಆಗಮಿಸುವ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.

click me!