ಶಿರೂರು ಗುಡ್ಡು ಕುಸಿತದಲ್ಲಿ ಕೇರಳ ಲಾರಿ ಚಾಲಕ ಅರ್ಜುನ್ ಕೊಚ್ಚಿ ಹೋಗಿ 70 ದಿನಗಳ ಬಳಿಕ ಮೃತದೇಹ ಹೊರತೆಗೆಯಲಾಗಿತ್ತು. ಅರ್ಜುನ್ ತನ್ನ ಮಗನಂತೆ ಎಂದು 70 ದಿನ ಶಿರೂರಿನಲ್ಲಿ ಠಿಕಾಣಿ ಹೂಡಿದ್ದ ಟ್ರಕ್ ಮಾಲೀಕ ಮನಾಫ್ ವಿರುದ್ಧ ಇದೀಗ ಅರ್ಜುನ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಇದೀಗ ಜಟಾಪಟಿ ಜೋರಾಗಿದೆ.
ಕೋಝಿಕೋಡ್(ಅ.05) ಶಿರೂರು ಗುಡ್ಡ ಕುಸಿದಲ್ಲಿ ಕೊಚ್ಚಿ ಹೋದ ಕೇರಳ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆಯಾದ ಬಳಿಕ ಅರ್ಜುನ್ ತವರಿನಲ್ಲಿ ಎಲ್ಲವೂ ನೆಟ್ಟಗಿಲ್ಲ. 70 ದಿನಗಳ ಕಾಲ ಶಿರೂರಿನಲ್ಲಿ ಠಿಕಾಣಿ ಹೂಡಿ ಅರ್ಜುನ್ ಮೃತದೇಹ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಟ್ರಕ್ ಮಾಲೀಕ ಅಬ್ಬುಲ್ ಮನಾಫ್ ವಿರುದ್ಧ ಇದೀಗ ಅರ್ಜುನ್ ಕುಟುಂಬಸ್ಥರೇ ದೂರು ದಾಖಲಿಸಿದ್ದಾರೆ. ಅರ್ಜುನ್ ಸಾವು, ಕುಟುಂಬಸ್ಥರ ದುಃಖವನ್ನೇ ಮೂಲವಾಗಿಟ್ಟುಕೊಂಡು ಅಬ್ದುಲ್ ಮನಾಫ್ ಹಣ ಮಾಡುತ್ತಿದ್ದಾರೆ, ತಮ್ಮ ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅರ್ಜುನ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಅರ್ಜುನ್ ಕುಟುಂಬಸ್ಥರು ನೀಡಿದ ದೂರಿನಲ್ಲಿ ಮನಾಫ್ ವಿರುದ್ದ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಅಬ್ದುಲ್ ಮನಾಫ್ ತಮ್ಮ ವೈಯುಕ್ತಿತ ಪ್ರಚಾರಕ್ಕೆ ಅರ್ಜುನ್ ಸಾವಿನ ಘಟನೆಯನ್ನು, ಕುಟುಂಬದ ದುಃಖವನ್ನು ಬಳಸಿಕೊಳ್ಳುತ್ತಿದ್ದಾರೆ. ಅರ್ಜುನ್ ಹೆಸರು ಹಾಗೂ ಘಟನೆ ಬಳಸಿಕೊಂಡು ಯೂಟ್ಯೂಬ್ ಚಾನೆಲ್ ಆರಂಭಿಸಿರುವ ಮನಾಫ್, ನಮ್ಮ ನೋವನ್ನೇ ಮೂಲವಾಗಿಟ್ಟುಕೊಂಡು ಹಣ ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಿರೂರು ಗುಡ್ಡ ಕುಸಿತ: 71 ದಿನಗಳ ಬಳಿಕ ನಾಪತ್ತೆಯಾಗಿದ್ದ ಲಾರಿ ಮತ್ತು ಕೇರಳದ ಚಾಲಕ ಅರ್ಜುನ್ ಶವ ಪತ್ತೆ
ಅರ್ಜುನ್ ಘಟನೆ ಮುಂದಿಟ್ಟುಕೊಂಡು ಮನಾಫ್ ಹಣ ಸಂಗ್ರಹಿಸಿದ್ದಾರೆ ಅನ್ನೋ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ. ತಮಗೆ ಯಾವುದೇ ಮಾಹಿತಿ ನೀಡಿದ ಮನಾಫ್ ಹಣ ಸಂಗ್ರಹ ಮಾಡಿದ್ದಾರೆ. ಇಂತಹ ನೀಚ ಪ್ರಯತ್ನ ಮಾಡಿ ಕುಟುಂಬಕ್ಕೆ ಮತ್ತಷ್ಟು ಆಘಾತ ಹಾಗೂ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅರ್ಜುನ್ ಫೋಟೋವನ್ನು ಬಳಸಿಕೊಂಡು ಯೂಟ್ಯೂಬ್ ಚಾನೆಲ್ ಜನಪ್ರಿಯಗೊಳಿಸಲು ಪ್ರಯತ್ನಿಸಿದ್ದಾರೆ. ಹಣ ಮಾಡಲು ಈ ಘಟನೆಯನ್ನು ಬಳಸಿಕೊಂಡಿದ್ದಾರೆ ಅನ್ನೋ ಆರೋಪಗಳಿಗೆ ಮನಾಫ್ ಸ್ಪಷ್ಟನೆ ನೀಡಿದ್ದಾರೆ. ಶಿರೂರು ಗುಡ್ಡ ಕುಸಿತದ ಘಟನೆ, ಅರ್ಜುನ್ ಶೋಧ ಕಾರ್ಯ ಕುರಿತು ಮಾಹಿತಿ ನೀಡಲು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೆ. ಆರೋಪ ಬಂದ ಬೆನ್ನಲ್ಲೇ ಅರ್ಜುನ್ ಫೋಟೋವನ್ನು ತೆಗೆದು ಹಾಕಲಾಗಿದೆ. ಅರ್ಜುನ್ ಮೃತದೇಹ ಸಿಕ್ಕ ಬಳಿಕ ಘಟನೆ ಸಂಬಂಧಿಸಿದ ಯಾವುದ ವಿಡಿಯೋ ಹಂಚಿಕೊಂಡಿಲ್ಲ ಎಂದು ಮನಾಫ್ ಸ್ಪಷ್ಟನೆ ನೀಡಿದ್ದಾರೆ.
ಗೊಂದಲಗಳಾಗಿದೆ. ಇದಕ್ಕೆ ಕ್ಷಮೆ ಇರಲಿ. ಅರ್ಜುನ್ ಕುಟುಂಬ್ಥರು ಆರೋಪಿಸಿದರೂ ನಾನು ಅವರ ಜೊತೆ ನಿಲ್ಲುವೆ. ಇದೇ ವೇಳೆ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ತನ್ನ ಸೋಹದರ ಮಬೀನ್ ಹೆಸರಿನಲ್ಲಿ ನೋಂದಣಿಯಾಗಿದೆ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ಇದೀಗ ಅರ್ಜುನ್ ಕುಟುಂಬಸ್ಥರು ಹಾಗೂ ಮನಾಫ್ ನಡುವಿನ ಜಟಾಪಟಿ ಜೋರಾಗಿದೆ. ಅರ್ಜುನ್ ಕುಟುಂಬಸ್ಥರು ಸುದ್ದಿಗೋಷ್ಠಿ ನಡೆಸಿ ಆರೋಪದ ಸುರಿಮಳೆಗೈದಿದ್ದಾರೆ. ಇತ್ತ ಮನಾಫ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸ್ಪಷ್ಟನೆ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ.
ಶಿರೂರು ಗುಡ್ಡ ಕುಸಿತ: ಕಣ್ಮರೆಯಾದ ವ್ಯಕ್ತಿಯ ಪುತ್ರಿಗೆ ನೌಕರಿ ಕೊಡಿಸಿದ ಕುಮಾರಸ್ವಾಮಿ