ಚುನಾವಣೆಯಲ್ಲಿ ಮಮತಾ ಕಾರ್ಡ್ ಮಾತ್ರ ರಾಮ ಕಾರ್ಡ್ ನಡೆಯಲ್ಲ; ಬಿಜೆಪಿಗೆ ಟಿಎಂಸಿ ತಿರುಗೇಟು!

By Suvarna NewsFirst Published Feb 14, 2021, 8:24 PM IST
Highlights

ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವಿನ ವಾಕ್ಸಮರ ಹೆಚ್ಚಾಗಿದೆ. ಇದೀಗ ಕಾರ್ಡ್ ವಿಚಾರ ಭಾರಿ ಸದ್ದು ಮಾಡುತ್ತಿದೆ. ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಕಾರ್ಡ್ ಬಿಟ್ಟು ಬಿಜೆಪಿ ಶ್ರೀ ರಾಮ ಕಾರ್ಡ್ ನಡೆಯೋದಿಲ್ಲ ಎಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ..

ಕೋಲ್ಕತಾ(ಫೆ.14): ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಚುನಾವಣೆಗೆ ಶ್ರೀ ರಾಮ ಕಾರ್ಡ್ ಬಳಸುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಜನತಾ ಕಾರ್ಡ್ ಹಾಗೂ ಮಮತಾ ಬ್ಯಾನರ್ಜಿ ಕಾರ್ಡ್ ಮಾತ್ರ ನಡೆಯಲಿದೆ ಎಂದು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

ಮಮತಾಗೆ ತ್ರಿವೇದಿ ಸಡ್ಡು: ರಾಜ್ಯಸಭೆಗೆ ರಾಜೀನಾಮೆ

ಬಂಗಾಳದಲ್ಲಿ ಬಿಜೆಪಿ ನಾಯಕರು ಇರುವ ಸ್ಥಾನಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬಿಜೆಪಿ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಬಿಜೆಪಿಯ ಬಣ್ಣದ ಮಾತಿಗೆ ಯಾರೂ ಮರಳಾಗುವುದಿಲ್ಲ ಎಂದು ಪಾರ್ಥ ಚಟರ್ಜಿ ಹೇಳಿದ್ದಾರೆ.

ಬಂಗಾಳದ ಅಭಿವೃದ್ಧಿ ಕಡೆ ಜನ ಇದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅತ್ಯುತ್ತಮ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಸಂತುಷ್ಛರಾಗಿದ್ದಾರೆ ಎಂದು ಪಾರ್ಥ ಚಟರ್ಜಿ ಹೇಳಿದ್ದಾರೆ. 

ಶ್ರೀರಾಮ ಪದಕ್ಕೆ ಕೆಂಡ, ಭಾರತ ವಿರೋಧಿ ಪಿತೂರಿಗೆ ಮೌನ; ಮಮತಾ ವಿರುದ್ಧ ಮೋದಿ ವಾಗ್ದಾಳಿ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಎಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ. ಬಿಜೆಪಿ ಈಗಾಗಲೇ ರಥ ಯಾತ್ರೆಗೆ ಚಾಲನೆ ನೀಡಿದೆ. ಬಿಜೆಪಿ ನಾಯಕರಾದ ಅಮಿತ್ ಶಾ, ಜೆಪಿ ನಡ್ಡಾ ಪಶ್ಚಿಮ ಬಂಗಾಳದಲ್ಲಿ ಒಂದರಮೇಲೊಂದರಂತೆ ರ್ಯಾಲಿ ಆಯೋಜಿಸುತ್ತಿದ್ದಾರೆ.

click me!