140 ಕೋಟಿ ಭಾರತೀಯರಲ್ಲಿ ಕಡುಬಡವರೀಗ 2% ಮಾತ್ರ!

By Kannadaprabha NewsFirst Published Mar 3, 2024, 8:11 AM IST
Highlights

ಭಾರತದಲ್ಲಿ ಬಡವರ ಸಂಖ್ಯೆಯು ತೀವ್ರ ಇಳಿಮುಖವಾಗಿ ಒಟ್ಟು ಜನಸಂಖ್ಯೆಯ ಶೇ.5ಕ್ಕೆ ಕುಸಿದಿದೆ ಎಂದು ನೀತಿ ಆಯೋಗ ಇತ್ತೀಚೆಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಅಮೆರಿಕದ ಇಬ್ಬರು ಪ್ರಮುಖ ಆರ್ಥಿಕ ಚಿಂತಕರು ಭಾರತದಲ್ಲಿ ಕಡುಬಡವರ ಸಂಖ್ಯೆ ಶೇ.2ಕ್ಕೆ ಕುಸಿದಿದೆ ಎಂದು ವಿಶ್ಲೇಷಿಸಿದ್ದಾರೆ.

ನವದೆಹಲಿ: ಭಾರತದಲ್ಲಿ ಬಡವರ ಸಂಖ್ಯೆಯು ತೀವ್ರ ಇಳಿಮುಖವಾಗಿ ಒಟ್ಟು ಜನಸಂಖ್ಯೆಯ ಶೇ.5ಕ್ಕೆ ಕುಸಿದಿದೆ ಎಂದು ನೀತಿ ಆಯೋಗ ಇತ್ತೀಚೆಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಅಮೆರಿಕದ ಇಬ್ಬರು ಪ್ರಮುಖ ಆರ್ಥಿಕ ಚಿಂತಕರು ಭಾರತದಲ್ಲಿ ಕಡುಬಡವರ ಸಂಖ್ಯೆ ಶೇ.2ಕ್ಕೆ ಕುಸಿದಿದೆ ಎಂದು ವಿಶ್ಲೇಷಿಸಿದ್ದಾರೆ. ನೀತಿ ಆಯೋಗದ ಅಂಕಿಅಂಶಗಳನ್ನು ಬಳಸಿ ಪ್ರಸಿದ್ಧ ಬ್ರೂಕಿಂಗ್ಸ್‌ ಸಂಸ್ಥೆಯ ನಿಯತಕಾಲಿಕೆಯಲ್ಲಿ ಸುರ್ಜೀತ್‌ ಭಲ್ಲಾ ಹಾಗೂ ಕರಣ್‌ ಭಾಸಿನ್‌ ಅವರು ಲೇಖನ ಬರೆದಿದ್ದಾರೆ. ಅದರಲ್ಲಿ ಭಾರತದಲ್ಲಿ ಕಡುಬಡವರ ಸಂಖ್ಯೆ ಶೇ.2ಕ್ಕೆ ಇಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೀತಿ ಆಯೋಗ ಪ್ರಕಟಿಸಿದ್ದ ವರದಿಯಲ್ಲಿ ಭಾರತೀಯರ ಮಾಸಿಕ ಖರ್ಚುವೆಚ್ಚಗಳನ್ನು ವಿಶ್ಲೇಷಣೆ ಮಾಡಿ ಬಡತನ ಶೇ.5ಕ್ಕೆ ಇಳಿಕೆಯಾಗಿದೆ ಎಂದು ಹೇಳಲಾಗಿತ್ತು. ಆ ವರದಿಯಲ್ಲಿರುವ ಅಂಕಿಅಂಶಗಳನ್ನು ವಿಶ್ಲೇಷಿಸಿ ಲೇಖನ ಪ್ರಕಟಿಸಿರುವ ಈ ಇಬ್ಬರು ಪ್ರಸಿದ್ಧ ಅರ್ಥಶಾಸ್ತ್ರಜ್ಞರು, ಭಾರತದಲ್ಲಿ ತೀವ್ರ ಕಡುಬಡತನ ಶೇ.2ಕ್ಕೆ ಇಳಿಕೆಯಾಗಿದೆ. ಭಾರತೀಯರು ಮಾಡುವ ಖರ್ಚು 2012ರಿಂದ ಈವರೆಗೆ ಶೇ.2.9ರಷ್ಟು ಏರಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಇದು ಶೇ.3.1ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ.2.6ರಷ್ಟಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಂಪತ್ತಿನ ಅಸಮಾನ ಹಂಚಿಕೆಯ ಪ್ರಮಾಣ ಕೂಡ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೇಗದ ಆರ್ಥಿಕಾಭಿವೃದ್ಧಿ, ತಲಾದಾಯ ಏರಿಕೆ, ಅಸಮಾನತೆಯಲ್ಲಿ ಭಾರೀ ಇಳಿಕೆ- ಈ ಮೂರು ಸಂಗತಿಗಳು ಒಟ್ಟಾಗಿ ಭಾರತದಲ್ಲಿ ಬಡತನವನ್ನು ನಿರ್ಮೂಲನೆ ಮಾಡುತ್ತಿವೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.

ರುದ್ರೇಶ್‌ ಹತ್ಯೆ, ಆರೋಪಿ ಮೊಹಮದ್‌ ಗೌಸ್‌ನನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಿದ NIA!

click me!