ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ಅಜಂ ಚೀಮಾ ಪಾಕ್‌ನಲ್ಲಿ ನಿಗೂಢ ಸಾವು

By Kannadaprabha News  |  First Published Mar 3, 2024, 7:55 AM IST

2006ರ ಮುಂಬೈ ಸರಣಿ ರೈಲ್ವೆ ಸ್ಫೋಟ ಹಾಗೂ 2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್‌ ಆಜಂ ಚೀಮಾ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ.


ಇಸ್ಲಾಮಾಬಾದ್‌: 2006ರ ಮುಂಬೈ ಸರಣಿ ರೈಲ್ವೆ ಸ್ಫೋಟ ಹಾಗೂ 2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್‌ ಆಜಂ ಚೀಮಾ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದ್ದರೂ, ಇತ್ತೀಚೆಗೆ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಮೋಸ್ಟ್‌ ವಾಂಟೆಡ್‌ ಉಗ್ರರು ನಿಗೂಢವಾಗಿ ಸಾವನ್ನಪ್ಪುತ್ತಿರುವ ಬೆಳವಣಿಗೆಗಳು ನಡೆಯುತ್ತಿರುವುದರಿಂದ ಈತನ ಸಾವು ಕೂಡ ಅನುಮಾನಕ್ಕೆ ಕಾರಣವಾಗಿದೆ. ಕಳೆದ ಕೆಲ ತಿಂಗಳಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಭಾರತಕ್ಕೆ ಬೇಕಾದ 24ನೇ ಉಗ್ರ ಇವನಾಗಿದ್ದಾನೆ.

ಮುಂಬೈ ಮೇಲೆ ಎರಡು ಭೀಕರ ದಾಳಿಗಳನ್ನು ನಡೆಸಲು ಭಯೋತ್ಪಾದಕರಿಗೆ ತರಬೇತಿ ನೀಡಿದ್ದು ಆಜಂ ಚೀಮಾ ಎಂದು ಹೇಳಲಾಗಿದೆ. 2006ರ ಸರಣಿ ಬಾಂಬ್‌ ದಾಳಿಯಲ್ಲಿ 188 ಮಂದಿ ಹಾಗೂ 2008ರ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು. ಲಷ್ಕರ್‌-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ ಆಗಿರುವ ಈತ ಫೈಸಲಾಬಾದ್‌ನಲ್ಲಿ ಮೃತಪಟ್ಟಿದ್ದಾನೆ. ಅಲ್ಲಿನ ಮಲ್ಖಾನ್‌ವಾಲಾದಲ್ಲಿ ಅಂತ್ಯಸಂಸ್ಕಾರ ನಡೆದಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.

Tap to resize

Latest Videos

ಪಾಕಿಸ್ತಾನದಿಂದ ಐಸಿಸ್ ಉಗ್ರ ಹೇಗೆಲ್ಲಾ ಪ್ಲಾನ್ ಮಾಡಿದ್ದ ಗೊತ್ತಾ? ಎನ್ಐಎ ತನಿಖೆಯಲ್ಲಿ ಬಯಲಾಯ್ತು ಕ್ರಿಮಿಯ ಅಸಲಿ ಸಂಚು..!

ಆಜಂ ಚೀಮಾ ಲಷ್ಕರ್‌ ಸಂಘಟನೆಗೆ ಸೇರಿದವನಾಗಿದ್ದರೂ ಅಲ್‌ ಖೈದಾ ಉಗ್ರರಿಗೆ ತರಬೇತಿ ನೀಡಿ ಮುಂಬೈ ಮೇಲೆ ಎರಡು ಭೀಕರ ದಾಳಿಗಳನ್ನು ಸಂಯೋಜಿಸಿದ್ದ. ಈತನನ್ನು ಅಮೆರಿಕದ ಗೃಹ ಇಲಾಖೆಯು ಲಷ್ಕರ್‌-ಎ-ತೊಯ್ಬಾದ ‘ಪ್ರಮುಖ ಕಮಾಂಡರ್‌’ ಎಂದು ವರ್ಗೀಕರಿಸಿತ್ತು.

ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ತೀವ್ರಗೊಳಿಸಲು ಯತ್ನಿಸುತ್ತಿರುವ ಲಷ್ಕರ್‌-ಎ-ತೊಯ್ಬಾ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಆಜಂ ಚೀಮಾನ ಸಾವು ಹಿನ್ನಡೆ ಉಂಟುಮಾಡಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಸರ್ಕಾರಿ ಉರ್ದು ಶಾಲೆ ಶಿಕ್ಷಕನಾಗಿದ್ದುಕೊಂಡೆ ಉಗ್ರ ಚಟುವಟಿಕೆ : 22 ವರ್ಷದ ನಂತರ ಬಂಧನ

click me!