
ದೇಶದ ಪಡಿತರ ವ್ಯವಸ್ಥೆಯನ್ನು ಸರ್ಕಾರ ಸರಳಗೊಳಿಸ್ತಿದೆ. ಜನರಿಗೆ ಸುಲಭವಾಗಿ ರೇಷನ್ ಸಿಗಲು ಒನ್ ನೇಷನ್ ಒನ್ ರೇಷನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಡಿಜಿಟಲ್ ಸೌಲಭ್ಯಗಳನ್ನು ಸುಲಭಗೊಳಿಸಲು ಸರ್ಕಾರ ನಿರಂತರ ಕೆಲ್ಸ ಮಾಡ್ತಿದೆ. ಇನ್ಮುಂದೆ ನೀವು ಒಂದೇ ರೇಷನ್ ಅಂಗಡಿಯಲ್ಲಿ ಎಲ್ಲ ರೇಷನ್ ಖರೀದಿ ಮಾಡುವ ಅಗತ್ಯವಿಲ್ಲ. ನೀವು ಪಡಿತರ ಅಂಗಡಿ ಬದಲಿಸಬಹುದು. ಅಂದ್ರೆ ಒಂದು ಅಂಗಡಿಯಲ್ಲಿ ಗೋಧಿ, ಇನ್ನೊಂದು ಅಂಗಡಿಯಲ್ಲಿ ಅಕ್ಕಿ ಖರೀದಿ ಮಾಡ್ಬಹುದು.
ಈ ಬದಲಾವಣೆಯಿಂದ ಜನಸಾಮಾನ್ಯರ ಕೆಲಸ ಸುಲಭವಾಗಲಿದೆ. ನೀವು ರೇಷನ್ ಸಂಗ್ರಹಿಸಲು ಒಂದೇ ಅಂಗಡಿಯಲ್ಲಿ ಗಂಟೆಗಟ್ಟಲೆ ಕಾಯಬೇಕಾಗೋದಿಲ್ಲ. ಯಾವುದಾದ್ರೂ ತಾಂತ್ರಿಕ ದೋಷವಾದಾಗ ರೇಷನ್ ಪಡೆಯದೆ ಹಿಂದೆ ಹೋಗುವ ಪರಿಸ್ಥಿತಿ ಬರೋದಿಲ್ಲ. ಅಂಗಡಿಯಲ್ಲಿ ಧಾನ್ಯದ ಕೊರತೆಯಂತ ಸಮಸ್ಯೆ ಇದ್ರೂ ಅದು ಜನಸಾಮಾನ್ಯರ ಮೇಲೆ ಪರಿಣಾಮ ಬೀರೋದಿಲ್ಲ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಅಂಗಡಿ ಬದಲಿಸಬಹುದು. ಒಂದು ರೇನಷ್ ಅಂಗಡಿಯಲ್ಲಿ ಗೋಧಿ ಖರೀದಿ ಮಾಡಿ ಇನ್ನೊಂದರಲ್ಲಿ ಅಕ್ಕಿ ಪಡೆಯಬಹುದು. ಈ ಬಗ್ಗೆ ಕೇಂದ್ರ ರಾಜ್ಯ ಸಚಿವ ಬಿ.ಎಲ್. ವರ್ಮಾ ಮಾಹಿತಿ ನೀಡಿದ್ದಾರೆ.
ಕಡಿಮೆ ಬೆಲೆಗೆ, ಸಖತ್ ಸೇಫ್ಟಿ ಕಾರ್‌ಗಳ್ ಸಿಕ್ಕಾಪಟ್ಟೆ ಆಪ್ಶನ್ ಕೊಟ್ಟ Mahindra Cars! ಎಲೆಕ್ಟ್ರಿಕ್
ಕೇಂದ್ರ ರಾಜ್ಯ ಸಚಿವ ಬಿ.ಎಲ್. ವರ್ಮಾ ತಮ್ಮ ಪೋಸ್ಟ್ನಲ್ಲಿ, ಸರ್ಕಾರವು ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ONORC) ಯೋಜನೆಯಡಿ ಪಡಿತರ ವಿತರಣೆಯನ್ನು ಸರಳಗೊಳಿಸುವ ಕೆಲಸ ಮಾಡ್ತಿದೆ ಎಂದಿದ್ದಾರೆ. ಪಡಿತರ ಚೀಟಿ ಹೊಂದಿರುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ಸ್ಥಳಗಳಿಂದ ತಮ್ಮ ಪಡಿತರವನ್ನು ಪಡೆಯಬಹುದು. ನೀವು ದೇಶದ ಯಾವುದೇ ಭಾಗದಿಂದ ಈ ಸೌಲಭ್ಯವನ್ನು ಪಡೆಯಬಹುದು ಎಂದಿದ್ದಾರೆ.
Aprilia SR 175: ಇಂಡಿಯನ್ ಮಿಲಿಟರಿಯನ್ನು ಗೌರವಿಸೋ ಏಪ್ರಿಲಿಯಾ S
ಈ ಸೌಲಭ್ಯ ಎಟಿಎಂನಂತೆ ಕೆಲಸ ಮಾಡಲಿದೆ. ನೀವು ಎಲ್ಲಿ ಬೇಕಾದ್ರೂ ರೇಷನ್ ಪಡೆಯಬಹುದಾಗಿದೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಿಂದ ವಲಸೆ ಕಾರ್ಮಿಕರ ಕುಟುಂಬಗಳಿಗೆ ದೊಡ್ಡ ಲಾಭವಾಗಿದೆ. ಅವರು ರೇಷನ್ ಪಡೆಯಲು ದೂರದ ತಮ್ಮ ಹಳ್ಳಿಗೆ ಹೋಗ್ಬೇಕಾಗಿಲ್ಲ. ತಾವು ಸದ್ಯ ವಾಸವಾಗಿರುವ ಪ್ರದೇಶದಲ್ಲಿಯೇ ರೇಷನ್ ಪಡೆಯಬಹುದು. ಆಧಾರ್ ಮತ್ತು ಬಯೋಮೆಟ್ರಿಕ್ಸ್ ಮೂಲಕ ದೇಶದ ಜನರ ಕೆಲಸವನ್ನು ಸುಲಭಗೊಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ