ಓರ್ವ ಪತ್ನಿ ತೊರೆದವ, ಇನ್ನೋರ್ವನಿಗೆ ಪತ್ನಿಯೇ ಇಲ್ಲ: ಕಾಂಗ್ರೆಸ್‌ ಅಧ್ಯಕ್ಷ ಆಕ್ಷೇಪಾರ್ಹ ಮಾತು

Published : Sep 24, 2023, 08:25 AM IST
ಓರ್ವ ಪತ್ನಿ ತೊರೆದವ, ಇನ್ನೋರ್ವನಿಗೆ ಪತ್ನಿಯೇ ಇಲ್ಲ: ಕಾಂಗ್ರೆಸ್‌ ಅಧ್ಯಕ್ಷ ಆಕ್ಷೇಪಾರ್ಹ ಮಾತು

ಸಾರಾಂಶ

ದೆಹಲಿಯಲ್ಲಿ ಪತ್ನಿಯನ್ನು ತೊರೆದವನು ಹಾಗೂ ಹರ್ಯಾಣದಲ್ಲಿ ಪತ್ನಿಯೇ ಇಲ್ಲದವನು ಆಡಳಿತ ನಡೆಸುತ್ತಿದ್ದಾನೆ ಎಂದು ಹೇಳುವ ಮೂಲಕ ಹರ್ಯಾಣ ಕಾಂಗ್ರೆಸ್‌ ಮುಖ್ಯಸ್ಥ ಉದಯ್‌ ಭಾನ್‌ (Uday Bhan)ವಿವಾದ ಸೃಷ್ಟಿಸಿದ್ದಾರೆ.

ನವದೆಹಲಿ: ದೆಹಲಿಯಲ್ಲಿ ಪತ್ನಿಯನ್ನು ತೊರೆದವನು ಹಾಗೂ ಹರ್ಯಾಣದಲ್ಲಿ ಪತ್ನಿಯೇ ಇಲ್ಲದವನು ಆಡಳಿತ ನಡೆಸುತ್ತಿದ್ದಾನೆ ಎಂದು ಹೇಳುವ ಮೂಲಕ ಹರ್ಯಾಣ ಕಾಂಗ್ರೆಸ್‌ ಮುಖ್ಯಸ್ಥ ಉದಯ್‌ ಭಾನ್‌ (Uday Bhan)ವಿವಾದ ಸೃಷ್ಟಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಹ್ಮಚಾರಿ ಆಗಿರುವ ಹರ್ಯಾಣ ಮುಖ್ಯಮಂತ್ರಿ ಮನೊಹರ್‌ ಲಾಲ್‌ ಖಟ್ಟರ್‌ (Manohar Lal Khattar) ವಿರುದ್ಧ ಅವಹೇಳನಾಕಾರಿ ಹೇಳಿಕೆ ಬಳಸಿರುವುದರ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ‘ಭಾನ್‌ ಅವರ ಈ ಹೇಳಿಕೆಯನ್ನು ಕೇವಲ ವಿರೋಧಿಸಿದರೆ ಸಾಲದು. ಇದು ಕೇವಲ ಬಿಜೆಪಿಯವರಿಗಷ್ಟೇ ಅಲ್ಲದೇ ದೇಶದ ಜನರಿಗೆ ನೋವನ್ನುಂಟು ಮಾಡಿದೆ’ ಎಂದು ಹೇಳಿದ್ದಾರೆ. ಅಲ್ಲದೇ, ‘ಇದೇನಾ ಕಾಂಗ್ರೆಸ್‌ನ ಪ್ರೀತಿಯ ಅಂಗಡಿ?’ ಎಂದು ಬಿಜೆಪಿ ಕುಟುಕಿದೆ.

ಹೊಸ ಸಂಸತ್ತು ಮೋದಿ ಮಲ್ಟಿಪ್ಲೆಕ್ಸ್‌ : ಕಾಂಗ್ರೆಸ್‌ ಕಿಡಿ

ಕಾಂಗ್ರೆಸ್ಸಿಗ ಗೊಗೋಯ್‌ ವಿರುದ್ಧ ಅಸ್ಸಾಂ ಸಿಎಂ ಪತ್ನಿ 10 ಕೋಟಿ ರು. ಮಾನನಷ್ಟ ಕೇಸ್

ಗುವಾಹಟಿ: ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪದ ಮೇಲೆ ಕಾಂಗ್ರೆಸ್‌ ನಾಯಕ ಗೌರವ್‌ ಗೊಗೋಯ್‌ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ (Assam Chief Minister) ಹಿಮಂತ ಬಿಸ್ವ ಶರ್ಮಾHimanta Biswa Sharma) ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು 10 ಕೋಟಿ ರು. ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ಸಿಎಂ ಹಿಮಂತ ಪತ್ನಿ (Pride East Entertainments) ರಿನಿಕಿ ಒಡೆತನದ ‘ಪ್ರೈಡ್‌ ಈಸ್ಟ್‌ ಎಂಟರ್‌ಟೈನ್‌ಮೆಂಟ್ಸ್‌’ ಸಂಸ್ಥೆಯು ಆಹಾರ ಸಂಸ್ಕರಣಾ ಸಚಿವಾಲಯದ (Food Processing Ministry scheme) ಯೋಜನೆಯಡಿ ಬರೋಬ್ಬರಿ 10 ಕೋಟಿ ರು. ಸಬ್ಸಿಡಿ ಪಡೆದಿದ್ದಾರೆ ಎಂದು ಜಾಲತಾಣದಲ್ಲಿ ಗೌರವ್‌ ಇತ್ತೀಚೆಗೆ ಬರೆದುಕೊಂಡಿದ್ದರು. ಆದರೆ ಇದನ್ನು ಹಿಮಂತ ಮತ್ತು ಪತ್ನಿ ಸಂಪೂರ್ಣವಾಗಿ ತಳ್ಳಿ ಹಾಕಿದ್ದರು.

ಅದಾಗ್ಯೂ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಗೌರವ್‌ ವಿರುದ್ಧ ರಿನಿಕಿ ಶುಕ್ರವಾರ ಪ್ರಕರಣ ದಾಖಲಿಸಿದ್ದು ಇದು ಸೆ.26ರಂದು ವಿಚಾರಣೆಗೊಳಪಡಲಿದೆ ಎಂದು ರಿನಿಕಿ ಪರ ವಕೀಲರು ತಿಳಿಸಿದ್ದಾರೆ.

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ