ರಾಷ್ಟ್ರಪತಿ ಭವನಕ್ಕೂ ಕೊರೋನಾ ಭೀತಿ| ಸ್ವಚ್ಛತಾ ಸಿಬ್ಬಂದಿ ಸಂಬಂಧಿಗೆ ಕೊರೋನಾ ಸೋಂಕು ದೃಢ ಹಿನ್ನೆಲೆ
ನವದೆಹಲಿ(ಏ.21): ದೇಶಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ಸೋಂಕು ಇದೀಗ ರಾಷ್ಟ್ರಪತಿ ಭವನದಲ್ಲೂ ಆತಂಕ ಹುಟ್ಟುಹಾಕಿದೆ. ರಾಷ್ಟ್ರಪತಿ ಭವನದ ಸ್ವಚ್ಛತಾ ಸಿಬ್ಬಂದಿಯೊಬ್ಬರ ಸಂಬಂಧಿಯೊಬ್ಬರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ಆವರಣದಲ್ಲಿರುವ 125 ಕುಟುಂಬಗಳನ್ನು ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
undefined
ಹಾಲಿ ಸೋಂಕು ಪತ್ತೆಯಾಗಿರುವ ವ್ಯಕ್ತಿಯ ತಾಯಿ ಮೂರು ದಿನಗಳ ಹಿಂದಷ್ಟೇ ಕೊರೋನಾದಿಂದ ಸಾವನ್ನಪ್ಪಿದ್ದರು. ಆ ಮಹಿಳೆಯ ಅಂತ್ಯಸಂಸ್ಕಾರ ಮತ್ತು ಅದಕ್ಕೂ ಮುನ್ನ ಆಸ್ಪತ್ರೆಯಲ್ಲಿ ಆಕೆಯನ್ನು ಭೇಟಿ ಮಾಡಲು ಹೋಗಿಬಂದಿದ್ದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಸ್ಚಚ್ಛತಾ ಸಿಬ್ಬಂದಿಯ ಕುಟುಂಬವನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು.
ಕೊರೋನಾ ಗೂಂಡಾಗಳಿಗೆ 2 ವರ್ಷ ಜೈಲು, ದಂಡ?: ಸುಗ್ರೀವಾಜ್ಞೆ ಜಾರಿಗೆ ನಿರ್ಧಾರ!
ಇದೀಗ ಆ ಮಹಿಳೆಯ ಪುತ್ರನಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ವ್ಯಾಪ್ತಿಯಲ್ಲೇ ಇರುವ 125 ಕುಟುಂಬಗಳ 500ಕ್ಕೂ ಹೆಚ್ಚು ಜನರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕುಟುಂಬಗಳ ಯಾವುದೇ ಸದಸ್ಯರು ತಾವಿರುವ ಸ್ಥಳದಿಂದ ಹೊರಬಾರದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.