
ಚಂಡೀಗಢ(ಫೆ.15): ಕೃಷಿ ಕಾಯ್ದೆ ವಿರುದ್ಧ ಹರ್ಯಾಣ ರೈತರು ಭಾರೀ ಪ್ರತಿಭಟನೆ ನಡೆಸುತ್ತಿರುವುದು ಹರ್ಯಾಣದ ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರದಲ್ಲಿ ಒಡಕು ಸೃಷ್ಟಿಸಿದೆ ಎಂಬ ವಾದಕ್ಕೆ ಈಗ ಪುಷ್ಟಿಸಿಕ್ಕಿದೆ.
‘ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ರಾಜೀನಾಮೆ ಪತ್ರ ನನ್ನ ಕಿಸೆಯಲ್ಲಿದೆ. ಅದರಿಂದ ಕೆಲಸ ಆಗುತ್ತದೆ ಎಂದರೆ ತಕ್ಷಣವೇ ಸಲ್ಲಿಸಲಾಗುತ್ತದೆ’ ಎಂದು ದುಷ್ಯಂತ್ ತಂದೆ ಅಜಯ್ ಚೌಟಾಲಾ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕತ್ವಕ್ಕೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಟ್ರಾಕ್ಟರ್‌ನಲ್ಲಿ ಬಂದು ಹರ್ಯಾಣದ INLD ಶಾಸಕ ರಾಜೀನಾಮೆ!
‘ನನ್ನ ಸೋದರ ಅಭಯ್ ಚೌಟಾಲಾ ಇತ್ತೀಚೆಗೆ ಕೃಷಿ ಕಾಯ್ದೆ ವಿರೋಧಿಸಿ ರಾಜೀನಾಮೆ ನೀಡಿದರು. ಅದರಿಂದ ಯಾವುದೇ ಉದ್ದೇಶ ಸಫಲ ಆಗಲಿಲ್ಲ. ದುಷ್ಯಂತ್ ರಾಜೀನಾಮೆ ಕೂಡ ನನ್ನ ಕಿಸೆಯಲ್ಲಿದೆ. ಇದರಿಂದ ಉದ್ದೇಶ (ಕೃಷಿ ಕಾಯ್ದೆ ವಿಚಾರ) ಈಡೇರುತ್ತದೆ ಎಂದರೆ ತಕ್ಷಣವೇ ಸಲ್ಲಿಕೆ ಆಗಲಿದೆ’ ಎಂದು ಅಭಯ್ ಸೋದರರೂ ಆದ ಅಜಯ್ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ