ಸೋಮವಾರ ದೇಶದಲ್ಲಿ ಸೋಂಕಿಗಿಂತ ಹೆಚ್ಚು ಜನ ಗುಣಮುಖ!

By Kannadaprabha NewsFirst Published Aug 25, 2020, 8:04 AM IST
Highlights

ನಿನ್ನೆ ಸೋಂಕಿಗಿಂತ ಹೆಚ್ಚು ಜನ ಗುಣಮುಖ| ಸೋಮವಾರ 53,669 ಕೊರೋನಾ ವೈರಸ್‌ ಪ್ರಕರಣಗಳು ದಾಖಲು| ಕೊರೋನಾದಿಂದ ಸೋಮವಾರ ಒಂದೇ ದಿನ 62,467 ಮಂದಿ ಗುಣಮುಖ

ನವದೆಹಲಿ(ಆ.25): ನಾಗಾಲೋಟದಿಂದ ಸಾಗುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆಯಲ್ಲಿ ಸೋಮವಾರ ಕೊಂಚ ಇಳಿಕೆ ಆಗಿದೆ. ಅಲ್ಲದೇ ಸೋಂಕಿತರ ಸಂಖ್ಯೆಗಿಂತಲೂ ಗುಣಮುಖರಾದವರ ಸಂಖ್ಯೆ ಹೆಚ್ಚಳಗೊಂಡಿದೆ.

ಗುಡ್ ನ್ಯೂಸ್ : ರಾಜ್ಯದಲ್ಲಿ ಕೊರೋನಾ ಹರಡುವ ವೇಗ ಇಳಿಕೆ

ಸೋಮವಾರ 53,669 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 31.53ಲಕ್ಷಕ್ಕೆ ಏರಿದೆ. ಇನ್ನು ನಿನ್ನೆ ಕೊರೋನಾಕ್ಕೆ 722 ಮಂದಿ ಬಲಿ ಆಗಿದ್ದು, ಸಾವಿನ ಸಂಖ್ಯೆ 58,335ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಇದೇ ಗತಿಯಲ್ಲಿ ಸಾಗಿದರೆ ಕೊರೋನಾ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿರುವ ಮೆಕ್ಸಿಕೋ (60,480)ವನ್ನು ಕೂಡ ಭಾರತ ಸದ್ಯದಲ್ಲೇ ಹಿಂದಿಕ್ಕಲಿದೆ. ಅಮೆರಿಕ (180,724), ಬ್ರೆಜಿಲ್‌ (114,772) ಸಾವಿನೊಂದಿಗೆ ಮೊದಲ ಎರಡು ಸ್ಥಾನದಲ್ಲಿವೆ.

ಉಸೇನ್ ಬೋಲ್ಟ್‌ಗೂ ವಕ್ಕರಿಸಿದ ಕೊರೋನಾ; ಕ್ರಿಸ್ ಗೇಲ್‌ಗೂ ಶುರುವಾಯ್ತು ಭೀತಿ..!

ಈ ಮಧ್ಯೆ ಕೊರೋನಾದಿಂದ ಸೋಮವಾರ ಒಂದೇ ದಿನ 62,467 ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 23.90ಲಕ್ಷಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಶೇ.75.27ಕ್ಕೆ ಏರಿಕೆ ಕಂಡಿರುವುದು ಆಶಾವಾದ ಮೂಡಿಸಿದೆ.

click me!