ರಾಯ್‌ಘಡ(ಆ.24): ಮಹಾರಾಷ್ಟ್ರದ ರಾಯ್‌ಘಡ್ ಜಿಲ್ಲೆಯ ಮಹಾಡ್ ಪಟ್ಟಣದಲ್ಲಿ 5 ಅಂತಸ್ತಿನ ಕಟ್ಟಡ ಕುಸಿದ ದುರಂತ ಘಟನೆ ನಡೆದಿದೆ. 10 ವರ್ಷ ಹಳೆಯದಾದ ಕಟ್ಟಡ ಇದಾಗಿದ್ದು, ಸುಮಾರು 47 ಕುಟುಂಬಗಳು ವಾಸಿಸಿತ್ತು. ಇಂದು(ಆ.24) ಸಂಜೆ 6 ಗಂಟೆಗೆ ಕಟ್ಟಡ ಕುಸಿದಿದೆ. ಈ ವೇಳೆ ಕಟ್ಟದಡಿ ಸುಮಾರು 75ಕ್ಕೂ ಹೆಚ್ಚಿನ ಮಂದಿ ಸಿಲುಕಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ NDRF ತಂಡ ರಕ್ಷಣಾ ಕಾರ್ಯ ಆರಂಭಿಸಿದೆ. ಇದುವರೆಗೆ 25 ಮಂದಿಯನ್ನು ರಕ್ಷಿಸಲಾಗಿದೆ.
'ತಡೆಗೋಡೆ ಇಲ್ಲದಿರುವುದೇ ಕಟ್ಟಡಗಳು ಕುಸಿಯಲು ಕಾರಣ'
ಮುಂಬೈನಿಂದ 170 ಕಿಲೋಮೀರ್ ದೂರದಲ್ಲಿರುವ ಮಹಾಡ್ ಪಟ್ಟಣದಲ್ಲಿ 10 ವರ್ಷ ಹಳೆಯ ಅಪಾರ್ಟ್‌ಮೆಂಟ್ ಕಟ್ಟಡ ಆರಂಭದಲ್ಲಿ 5ನೇ ಅಂತಸ್ತು ಕುಸಿದಿದೆ. ಇದನ್ನು ಗಮಮಿಸಿದ ಕೆಳ ಅಂತಸ್ತಿನ ನಿವಾಸಿಗಳು ಓಡಿ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ 3 ಮತ್ತು 4ನೇ ಅಂತಸ್ತು ಕುಸಿದಿದೆ. ಬಳಿಕ ಸಂಪೂರ್ಣ ಕಟ್ಟದ ನೆಲಕ್ಕುರುಳಿದೆ.
ದೆಹಲಿಯಲ್ಲಿ ಭಾರೀ ಮಳೆ, ಕ್ಯಾಮೆರಾದಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ!..
ಸುಮಾರು 150ಕ್ಕೂ ಹೆಚ್ಚಿನ ಮಂದಿ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ರಕ್ಷಣೆಗೆ ಎಲ್ಲಾ ನೆರವು ನೀಡಲಾಗಿದೆ. ಬುಲ್ಡೋಜರ್ ಸೇರಿದಂತೆ ಯಂತ್ರಗಳನ್ನು ತಂಡವನ್ನು ಕಳುಹಿಸಿಕೊಡಲಾಗಿದೆ. ಯಾವುದೇ ಅಪಾಯವಾಗದಂತೆ ಎಲ್ಲರು ಸುರಕ್ಷಿತವಾಗಿರಲಿ ಎಂದು ಸ್ಥಳೀಯ ಸಚಿವ ಆದಿತಿ ತಾತ್ಕರೆ ಪ್ರಾರ್ಥಿಸಿದ್ದಾರೆ.
ಸ್ಥಳದಲ್ಲಿ ಹೆಚ್ಚುವರಿ ಪೊಲೀಸರು, NDRF ತಂಡ ನಿರಂತರ ಕಾರ್ಯಚರಣೆ ನಡೆಸುತ್ತಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಹಲವು ಕಟ್ಟಡಗಳು, ಮನೆಗಳು ನೆಲಕ್ಕುರುಳಿದೆ. ಪ್ರವಾಹದಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿದೆ.