Mann Ki Baat: ವೀರ್ ಸಾವರ್ಕರ್, ಎನ್‌ಟಿ ರಾಮರಾವ್ ಅವರಿಗೆ ಮೋದಿ ನಮನ

By BK Ashwin  |  First Published May 28, 2023, 12:18 PM IST

ಹೊಸ ಸಂಸತ್ ಭವನದ ಉದ್ಘಾಟನೆ ನಡೆಯುವ ದಿನದಂದೇ ಈ ಧ್ವನಿಮುದ್ರಿತ ಮನ್‌ ಕೀ ಬಾತ್‌ ಪ್ರಸಾರವಾಗಿದ್ದು, ಈ ವೇಳೆ ವೀರ್ ಸಾವರ್ಕರ್, ಎನ್‌ಟಿ ರಾಮರಾವ್ ಅವರಿಗೆ ಮೋದಿ ನಮನ ಸಲ್ಲಿಸಿದ್ದಾರೆ.


ನವದೆಹಲಿ (ಮೇ 28, 2023): ಇಂದು ಮೇ ತಿಂಗಳ ಕೊನೆಯ ಭಾನುವಾರ. ಈ ಹಿನ್ನೆಲೆ ಪ್ರತಿ ತಿಂಗಳ ಕೊನೆಯ ಭಾನುವಾರದಂತೆ ಇಂದೂ ಸಹ ಪ್ರಧಾನಿ ಮೋದಿಯವರ ಮನ್‌ ಕೀ ಬಾತ್‌ ಸಂಚಿಕೆಯನ್ನು ಪ್ರಸಾರ ಮಾಡಲಾಯ್ತು. 101ನೇ ಸಂಚಿಕೆಯನ್ನು ಎಂದಿನಂತೆ ಬೆಳಗ್ಗೆ 11 ಗಂಟೆಗೆ ಸರಿಯಾಗಿ ರೇಡಿಯೋದಲ್ಲಿ ಮನ್‌ ಕೀ ಬಾತ್‌ ಸಂಚಿಕೆಯನ್ನು ಪ್ರಸಾರ ಮಾಡಲಾಗಿದೆ. ಕಳೆದ ತಿಂಗಳು ಅಂದರೆ ಏಪ್ರಿಲ್‌ ಕೊನೆಯ ಭಾನುವಾರ ಐತಿಹಾಸಿಕ 100ನೇ ಸಂಚಿಕೆಯನ್ನು ದೇಶಾದ್ಯಂತ ಪ್ರಸಾರ ಮಾಡಲಾಗಿದ್ದು, ಈ ಹಿನ್ನೆಲೆ 101ನೇ ಸಂಚಿಕೆಯನ್ನು ಪ್ರಧಾನಿ ಮೋದಿ 2ನೇ ಶತಮಾನದ ಆರಂಭ (ಮೊದಲ ಸಂಚಿಕೆ) ಎಂದು ಬಣ್ಣಿಸಿದ್ದಾರೆ. 

ಹೊಸ ಸಂಸತ್ ಭವನದ ಉದ್ಘಾಟನೆ ನಡೆಯುವ ದಿನದಂದೇ ಈ ಧ್ವನಿಮುದ್ರಿತ ಮನ್‌ ಕೀ ಬಾತ್‌ ಪ್ರಸಾರವಾಗಿದ್ದು, ಈ ವೇಳೆ ವೀರ್ ಸಾವರ್ಕರ್, ಎನ್‌ಟಿ ರಾಮರಾವ್ ಅವರಿಗೆ ಮೋದಿ ನಮನ ಸಲ್ಲಿಸಿದ್ದಾರೆ. ಇನ್ನೊಂದೆಡೆ, ಪ್ರಧಾನಿ ಮೋದಿಯವರ ಭಾಷಣದ ಮಹತ್ವದ ಭಾಗ ಹೊಸ ಸಂಸತ್ತಿನಲ್ಲಿ ನಡೆಯುವ ಸಾಧ್ಯತೆ ಇದೆ.

Tap to resize

Latest Videos

ಇದನ್ನು ಓದಿ: ಜನರ ಜತೆಗಿರಲು 50 ವರ್ಷ ಹಿಂದೆ ಮನೆ ಬಿಟ್ಟಿದ್ದೆ; ಪ್ರಧಾನಿ ಆದ ಬಳಿಕ ‘ಮನ್‌ ಕೀ ಬಾತ್‌’ ಮೂಲಕ ಜನ ಸಂಪರ್ಕ: ಮೋದಿ

ವೀರ್ ಸಾವರ್ಕರ್, ಎನ್‌ಟಿ ರಾಮರಾವ್ ಅವರಿಗೆ ಮೋದಿ ನಮನ
ಇಂದು ಬಲಪಂಥೀಯ ವಿಚಾರವಾದಿ ವಿನಾಯಕ ದಾಮೋದರ್ 'ವೀರ್' ಸಾವರ್ಕರ್ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಟಿ ರಾಮರಾವ್ ಅವರ ಜನ್ಮದಿನ ಹಿನ್ನೆಲೆ ಪ್ರಧಾನಿ ಮೋದಿ ಇಬ್ಬರಿಗೂ ಗೌರವ ನಮನ ಸಲ್ಲಿಸಿದ್ದಾರೆ. .

ಇನ್ನು, ಯುವ ಸಂಗಮ್ ಅಡಿಯಲ್ಲಿ 1,200 ಯುವಕರು 22 ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. "ಯುವ ಸಂಗಮ್‌ನ ಮೊದಲ ಸುತ್ತಿನಲ್ಲಿ, ಸುಮಾರು 1,200 ಯುವಕರು ದೇಶದ 22 ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದಾರೆ. ಅದರ ಭಾಗವಾಗಿರುವ ಪ್ರತಿಯೊಬ್ಬರೂ ಅಂತಹ ನೆನಪುಗಳೊಂದಿಗೆ ಹಿಂದಿರುಗುತ್ತಿದ್ದಾರೆ, ಅದು ಅವರ ಜೀವನದುದ್ದಕ್ಕೂ ಅವರ ಹೃದಯದಲ್ಲಿ ಉಳಿಯುತ್ತದೆ ಎಂದು ಪ್ರಧಾನಿ ಮೋದಿ ಮನ್‌ ಕೀ ಬಾತ್‌ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಮನ್‌ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ

ಇನ್ನು, 'ಯುವ ಸಂಗಮ' ಉಪಕ್ರಮದ ಕುರಿತು ಇಬ್ಬರು ಯುವಕರೊಂದಿಗೆ ಪ್ರಧಾನಿ ಮಾತನಾಡಿದ್ದಾರೆ. ‘ಯುವ ಸಂಗಮ’ ಎಂಬ ಜನರಿಂದ ಜನರಿಗೆ ಉಪಕ್ರಮದಲ್ಲಿ ಅರುಣಾಚಲ ಪ್ರದೇಶ ಮತ್ತು ಬಿಹಾರದ ತಲಾ ಒಬ್ಬರಂತೆ 2 ಯುವಕರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಈ ಯೋಜನೆಯ ಅಡಿಯಲ್ಲಿ, ಅರುಣಾಚಲ ಪ್ರದೇಶದ ಯುವಕರು ರಾಜಸ್ಥಾನಕ್ಕೆ ಹೋಗಿದ್ದಾರೆ ಮತ್ತು ಬಿಹಾರ ರಾಜ್ಯದ ಯುವಕರು ತಮಿಳುನಾಡಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಎರಡನೇ ಶತಮಾನದ ಆರಂಭ'
ಇಂದಿನ ಆವೃತ್ತಿಯು ಮನ್ ಕಿ ಬಾತ್‌ನ ಎರಡನೇ ಶತಮಾನದ ಆರಂಭದಂತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಏಪ್ರಿಲ್ 30 ರಂದು 100 ಸಂಚಿಕೆಗಳನ್ನು ಪೂರ್ಣಗೊಳಿಸಿದ ನಂತರ ಈ ಮೇ 28 ರಂದು 101ನೇ ಸಂಚಿಕೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ರೇಡಿಯೋ ಭಾಷಣ ಮಾಡಿದ್ದಾರೆ. 

ಇದನ್ನೂ ಓದಿ:  Mann Ki Baat: ಪ್ರಧಾನಿ ಭಾಷಣದಿಂದ ಕ್ರೀಡೆಗೆ ದೊರಕಿದ ಪ್ರೋತ್ಸಾಹ, ಸ್ಫೂರ್ತಿ ಬಹಳ ದೊಡ್ಡದು: ಸಾನಿಯಾ ಮಿರ್ಜಾ

ಅಕ್ಟೋಬರ್ 3, 2014 ರಂದು ಮನ್ ಕೀ ಬಾತ್ ಮೊದಲ ಬಾರಿಗೆ ಪ್ರಸಾರವಾಗಿತ್ತು. ಅಂದಿನಿಂದ ಪ್ರತಿ ತಿಂಗಳ ಕೊನೆಯ ಭಾನುವಾರ ದೇಶವನ್ನುದ್ದೇಶಿಸಿ ಮನ್‌ ಕೀ ಬಾತ್‌ ಪ್ರಸಾರವಾಗುತ್ತದೆ. 

ಇದನ್ನೂ ಓದಿ: ಮೋದಿ ‘ಮನ್‌ ಕೀ ಬಾತ್‌’ಗೆ ಇಂದು ಶತಕ: ದೇಶದ 4 ಲಕ್ಷ ಕಡೆ ಕೇಳಲು ಬಿಜೆಪಿ ವ್ಯವಸ್ಥೆ

click me!