Omicron Alert: ಒಮಿಕ್ರೋನ್‌ಗೆ ಕೊಲ್ಲುವ ಶಕ್ತಿ ಕಡಿಮೆ, ಆದ್ರೆ 3ನೇ ಅಲೆಗೆ ದೇಶ ಸಿದ್ಧವಾಗಬೇಕೆಂದ ತಜ್ಞರು

By Suvarna NewsFirst Published Dec 5, 2021, 5:00 AM IST
Highlights
  • Omicron Alert ಒಮಿಕ್ರೋನ್ ವೈರಸ್‌ಗೆ ಕೊಲ್ಲುವ ಶಕ್ತಿ ಕಡಿಮೆ
  • ಆದರೆ ಮೂರನೇ ಅಲೆಗೆ ಸಿದ್ಧವಾಗಬೇಕಿದೆ ಭಾರತ - ತಜ್ಞರ ಎಚ್ಚರಿಕೆ

ಓಮಿಕ್ರಾನ್ ರೂಪಾಂತರದ ಹರಡುವಿಕೆಯ ವೇಗ ಅಧಿಕವಾಗಿದೆ ಎಂದು ನಂಬಲಾಗಿರುವುದರಿಂದ ಭಾರತವು ಮೂರನೇ COVID-19 ತರಂಗಕ್ಕೆ ಸಿದ್ಧವಾಗಬೇಕು ಎಂದು AIIMS ನ ಕಾರ್ಯನಿರ್ವಾಹಕ ನಿರ್ದೇಶಕ ಬೀಬಿನಗರ ಹೇಳಿದ್ದಾರೆ. ಆದರೂ ರೂಪಾಂತರ ಒಮಿಕ್ರೋನ್‌ಗೆ(Omicron) ಕಡಿಮೆ ಕೊಲ್ಲುವ ಶಕ್ತಿ ಇದೆ. ಇದು ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರಬಹುದು ಎಂದು ಡಾ ವಿಕಾಸ್ ಭಾಟಿಯಾ ಹೇಳಿದ್ದಾರೆ. ಇತ್ತೀಚೆಗೆ ಕಂಡುಹಿಡಿದ ರೂಪಾಂತರದ ನಾಲ್ಕು ಪ್ರಕರಣಗಳು ಭಾರತದಲ್ಲಿ ಇಲ್ಲಿಯವರೆಗೆ ವರದಿಯಾಗಿದೆ.

ಬಿಬಿನಗರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವಿಕಾಸ್ ಭಾಟಿಯಾ, ಈ ಅಲೆಯಲ್ಲಿ ಹೈಬ್ರಿಡ್ ರೋಗನಿರೋಧಕ ಶಕ್ತಿಯ ಸಾಮರ್ಥ್ಯದ ಕುರಿತು ಮಾತನಾಡಿ, ಇದು ಊಹಿಸಲು ತುಂಬಾ ಕಷ್ಟ. ಈ ಸಮಯದಲ್ಲಿ ಸಹ 30ಕ್ಕೂ ಹೆಚ್ಚು ದೇಶಗಳಲ್ಲಿ ಒಮಿಕ್ರೋನ್ ವರದಿಯಾಗಿದೆ. ಈ ಹಂತದಲ್ಲಿ, ಮೂರನೇ ತರಂಗ ಬರಬಹುದು ಎಂದು ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು.ಈ ನಿರ್ದಿಷ್ಟ ವೈರಸ್ ಓಮಿಕ್ರಾನ್ ಹೆಚ್ಚು ಮಾರಣಾಂತಿಕವಾಗಿಲ್ಲ. ಇದುವರೆಗೆ ಪ್ರಪಂಚದ ಯಾವುದೇ ಭಾಗದಿಂದ ಯಾವುದೇ ಸಾವು ವರದಿಯಾಗಿಲ್ಲ ಎಂದಿದ್ದಾರೆ.

India Omicron Case: ಭಾರತದಲ್ಲಿ 4ನೇ ಓಮಿಕ್ರಾನ್ ಕೇಸ್ ಪತ್ತೆ, ಮುಂಬೈ ಅಲರ್ಟ್!

ಡಾ. ಭಾಟಿಯಾ ಅವರು ಓಮಿಕ್ರಾನ್ ರೂಪಾಂತರದಿಂದಾಗಿ ಆಮ್ಲಜನಕದ ಮಟ್ಟವು ಕುಸಿದರೆ, ಅದು ಕಳವಳಕಾರಿಯಾಗಿದೆ. ಆದರೆ ರಾಷ್ಟ್ರವ್ಯಾಪಿ ಲಸಿಕೆ ಕಾರ್ಯಕ್ರಮದಿಂದಾಗಿ ಅದು ಸಮಸ್ಯೆಯಾಗದು ಎಂದು ಅವರು ನಂಬುತ್ತಾರೆ. ಆಮ್ಲಜನಕದ ಮಟ್ಟದಲ್ಲಿನ ಇಳಿಕೆ ಮತ್ತು ಸಾವಿನ ಪ್ರಕರಣಗಳು ನಮ್ಮ ಮುಖ್ಯ ಕಾಳಜಿಯಾಗಿದೆ. ನಾವು ರೋಗ ಹರಡುವಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಏಕೆಂದರೆ ಲಸಿಕೆ ಕಾರ್ಯಕ್ರಮವೂ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ 4ನೇ ಕೇಸ್ ಪತ್ತೆ:

ಕರ್ನಾಟಕ, ಗುಜರಾತ್ ಬಳಿಕ ಇದೀಗ ಮಹಾರಾಷ್ಟ್ರದ ಮುಂಬೈ(Mumbai) ನಗರದಲ್ಲಿ ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ(Maharastra) ಪತ್ತೆಯಾದ ಮೊದಲ ಓಮಿಕ್ರಾನ್ ಕೇಸ್ ಆಗಿದೆ. ಒಟ್ಟಾರೆ ಭಾರತದಲ್ಲಿ ಖಚಿತಗೊಂಡಿರುವ ನಾಲ್ಕನೇ ಓಮಿಕ್ರಾನ್ ಕೇಸ್ ಇದಾಗಿದೆ.

ಭಾರತದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗಿದೆ. ಕೇಂದ್ರದ ಮಾರ್ಗೂಸೂಚಿ ನಡುವೆ ಒಂದೊಂದೆ ರಾಜ್ಯಗಳು ಮತ್ತಷ್ಟು ಕಠಿಣ ನಿಯಮ ಜಾರಿಗೊಳಿಸುತ್ತಿದೆ. ಕರ್ನಾಟಕದಲ್ಲಿ(Karnataka) ಮೊದಲೆರೆಡು ಕೇಸ್ ಪತ್ತೆಯಾಗಿತ್ತು. ಇದೀಗ ಗುಜರಾತ್(Gujarat) ಹಾಗೂ ಮಹಾರಾಷ್ಟ್ರದಲ್ಲಿ ಮತ್ತೆರಡು ಪ್ರಕರಣ ಪತ್ತೆಯಾಗಿದೆ. ಇದರಿಂದ ಆತಂಕ ಹೆಚ್ಚಾಗಿದೆ. 

click me!