ದೆಹಲಿ(ಡಿ.01): ಕೊರೋನಾವೈರಸ್‌ನ ಒಮಿಕ್ರೋನ್ ರೂಪಾಂತರಿ ತಳಿಯು ಆರ್‌ಟಿಪಿಸಿಆರ್ ಹಾಗೂ ಆರ್‌ಎಟಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಈ ಪರೀಕ್ಷೆಗಳಲ್ಲೂ ಒಮಿಕ್ರೋನ್ ಪತ್ತೆಯಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹೊಸ ರೂಪಾಂತರಿ ವೈರಸ್ ಹರಡದಂತೆ ತಡೆಯಲು ಕೋವಿಡ್ ಟೆಸ್ಟಿಂಗ್ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ದಕ್ಷಿಣ ಆಫ್ರಿಕಾದ ಒಮಿಕ್ರೋನ್ ವೈರಸ್ ಹರಡುತ್ತಿರುವುದರಿಂದ ಭಾರತದಲ್ಲಿ ಈ ರೂಪಾಂತರಿ ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ರಾಜ್ಯ ಸರ್ಕಾರಗಳ ಜೊತೆ ಉನ್ನತ ಮಟ್ಟದ ವರ್ಚುವಲ್ ಸಭೆ ನಡೆಸಿದರು. ಸಭೆಯ ನಂತರ ಕೇಂದ್ರ ಸರ್ಕಾರ ಒಮಿಕ್ರೋನ್ ತಡೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತು.
ಮಾರ್ಗಸೂಚಿಯಲ್ಲಿ ಏನಿದೆ?
undefined
- ಆರ್‌ಟಿಪಿಸಿಆರ್ ಮತ್ತು ರಾರಯಟ್ ಪರೀಕ್ಷೆಯಲ್ಲಿ ಒಮಿಕ್ರೋನ್ ತಪ್ಪಿಸಿಕೊಳ್ಳುವುದಿಲ್ಲ. ಹೀಗಾಗಿ ಬಹಳ ಮೊದಲೇ ಅದರ ಪತ್ತೆಗೆ ಟೆಸ್ಟಿಂಗ್ ಹೆಚ್ಚಿಸಬೇಕು.
- ಅಂತಾರಾಷ್ಟ್ರೀಯ ಪ್ರಯಾಣಿಕರ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಮತ್ತು ಕೋವಿಡ್ ಹಾಟ್‌ಸ್ಪಾಟ್‌ಗಳಲ್ಲಿ ಜನರ ಮೇಲೆ ತೀವ್ರ ನಿಗಾ ಇರಿಸಬೇಕು.
- ಈಗಾಗಲೇ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಪಟ್ಟಮಾರ್ಗಸೂಚಿಯನ್ನು ಕೇಂದ್ರ ಬಿಡುಗಡೆ ಮಾಡಿದೆ. ಅದನ್ನು ಕಡ್ಡಾಯವಾಗಿ ಪಾಲಿಸಬೇಕು.
- ಒಮಿಕ್ರೋನ್ ಪತ್ತೆಯಾಗಿರುವ ದೇಶಗಳಿಂದ ಬರುವ ಪ್ರಯಾಣಿಕರನ್ನು ಮೊದಲ ದಿನ ಹಾಗೂ ಎಂಟನೇ ದಿನ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು.
News Hour; ಒಮ್ರಿಕಾನ್ ತಡೆಗೆ ರಾಜ್ಯದ ನಿಯಮ, ಕಟ್ಟೆಚ್ಚರ
- ‘ಒಮಿಕ್ರೋನ್ ದೇಶಗಳಿಂದ’ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಪರೀಕ್ಷಿಸಿ, ಪರೀಕ್ಷೆ ಫಲಿತಾಂಶ ಬರುವವರೆಗೆ ಅಲ್ಲೇ ಇರಿಸಿಕೊಳ್ಳಬೇಕು.
- ಪಾಸಿಟಿವ್ ಬಂದ ಸ್ಯಾಂಪಲ್‌ಗಳನ್ನು ತಕ್ಷಣ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ನಿಗದಿತ ಐಎನ್‌ಎಸ್‌ಎಸಿಒಜಿ ಪ್ರಯೋಗಾಲಯಕ್ಕೆ ಕಳಿಸಬೇಕು.
- ಅಪಾಯಕಾರಿ ದೇಶಗಳಿಂದ ಬಂದು ಪಾಸಿಟಿವ್ ಆದ ವ್ಯಕ್ತಿಗಳ ಸಂಪರ್ಕಿತರನ್ನು ಬೇಗ ಪತ್ತೆಹಚ್ಚಿ 14 ದಿನಗಳ ಕಾಲ ಅವರ ಮೇಲೆ ನಿಗಾ ವಹಿಸಬೇಕು.
- ಪ್ರತಿ ಜಿಲ್ಲೆಯಲ್ಲೂ ಟೆಸ್ಟಿಂಗ್ ಮೂಲಸೌಕರ್ಯ ಹೆಚ್ಚಿಸಬೇಕು. ಕ್ಲಸ್ಟರ್ ಪಾಸಿಟಿವಿಟಿ ಇರುವೆಡೆಯಿಂದ ಎಲ್ಲಾ ಪಾಸಿಟಿವ್ ವರದಿ ಜಿನೋಮ್ ಪರೀಕ್ಷೆಗೆ ಕಳಿಸಬೇಕು.
- ಹೋಮ್ ಐಸೋಲೇಷನ್‌ನಲ್ಲಿ ಇರುವವರನ್ನು ಆರೋಗ್ಯ ಕಾರ್ಯಕರ್ತರು ಖುದ್ದಾಗಿ ಮನೆಗೆ ಹೋಗಿ ವಿಚಾರಿಸಬೇಕು ಮತ್ತು 14 ದಿನ ಸಂಪರ್ಕದಲ್ಲಿರಬೇಕು.
- ರಾಜ್ಯಗಳು ಐಸಿಯು, ಆಕ್ಸಿಜನ್ ಬೆಡ್, ವೆಂಟಿಲೇಟರ್, ಔಷಧಗಳ ಲಭ್ಯತೆ ಹೆಚ್ಚಿಸಬೇಕು. ಆಕ್ಸಿಜನ್ ಪ್ಲಾಂಟ್ ಮತ್ತು ಸಿಲಿಂಡರ್‌ಗಳ ಮೇಲೆ ನಿಗಾ ಇರಿಸಬೇಕು.
ವಿಶ್ವಾದ್ಯಂತ ಭಾರೀ ತಲ್ಲಣ ಮೂಡಿಸಿರುವ ಹೊಸ (Coronavirus) ರೂಪಾಂತರಿ ಒಮಿಕ್ರೋನ್ (Omicron variant) ವೈರಸ್ ಸೋಮವಾರ ಇನ್ನೆರೆಡು ದೇಶಗಳಿಗೆ ಪ್ರವೇಶ ಮಾಡಿರುವುದು ಖಚಿತಪಟ್ಟಿದೆ. ಹೀಗಾಗಿ ಇದುವರೆಗೆ ಒಟ್ಟು 13 ದೇಶಗಳಿಗೆ ಪ್ರವೇಶ ಮಾಡಿದಂತಾಗಿದೆ.
ಪೋರ್ಚುಗಲ್‌ನಲ್ಲಿ 13 ಮಂದಿಗೆ ಮತ್ತು ಸ್ಕಾಟ್ಲೆಂಡ್‌ನಲ್ಲಿ(Scotland) 6 ಜನರಲ್ಲಿ ಹೊಸ ವೈರಸ್ ಪತ್ತೆಯಾಗಿರುವುದಾಗಿ ಆ ದೇಶಗಳು ಘೋಷಿಸಿವೆ., ಆಸ್ಪ್ರೇಲಿಯಾದಲ್ಲಿ ಒಬ್ಬರಲ್ಲಿ ಹೊಸ ಪ್ರಭೇದ ಕಂಡುಬಂದಿದೆ. ಪೋರ್ಚುಗಲ್‌ನ 13 ಮಂದಿ ಪೈಕಿ ಒಬ್ಬರು ಮಾತ್ರವೇ ಇತ್ತೀಚೆಗೆ ದಕ್ಷಿಣ ಆಫ್ರಿಕಾಕ್ಕೆ ಹೋಗಿಬಂದಿದ್ದರು. ಉಳಿದವರು ಯಾವುದೇ ದೇಶಕ್ಕೆ ಭೇಟಿ ನೀಡಿರಲಿಲ್ಲ. ಈ 12 ಮಂದಿಗೆ ಸ್ಥಳೀಯವಾಗಿಯೇ ಸೋಂಕು ಹಬ್ಬಿದೆ. ದಕ್ಷಿಣ ಆಫ್ರಿಕಾ ಹೊರತಾಗಿ ಸ್ಥಳೀಯವಾಗಿ ಈ ಸೋಂಕು ಹಬ್ಬಿದ ಮೊದಲ ಪ್ರಕರಣವಿದು.
COVID19 ಅಪಾಯವೂ ಇದೆ:
ರಾಜಧಾನಿ ಬೆಂಗಳೂರಿನಲ್ಲಿ(Bengaluru) ನ.1ರಿಂದ 20 ದಿನಗಳಲ್ಲಿ ದೃಢಪಟ್ಟಿರುವ ಒಟ್ಟು ಕೊರೋನಾ(Coronavirus) ಸೋಂಕಿತರಲ್ಲಿ ಶೇ.72ರಷ್ಟು ಮಂದಿ ಲಸಿಕೆ ಪಡೆದವರಿಗೇ ಸೋಂಕು ಉಂಟಾಗಿದೆ. ಆದರೆ, ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ತೀರಾ ಕಡಿಮೆ ಇರುವುದು ದೃಢಪಟ್ಟಿದೆ. ಹೀಗಾಗಿ ಲಸಿಕೆ ಬಗ್ಗೆ ನಿರ್ಲಕ್ಷ್ಯ ಮಾಡದೆ ಕೂಡಲೇ ಲಸಿಕೆ ಪಡೆಯುವಂತೆ ತಜ್ಞರು ಸಲಹೆ ನೀಡಿದ್ದಾರೆ.