Article 370 Abrogation: 1,678 ವಲಸಿಗರು ಜಮ್ಮು ಕಾಶ್ಮೀರಕ್ಕೆ ವಾಪಸ್!

By Suvarna NewsFirst Published Nov 30, 2021, 8:55 PM IST
Highlights
  • ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮ ಕಾಶ್ಮೀರದ ಪರಿಸ್ಥಿತಿ ಹೇಗಿದೆ?
  • ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿದ 1,678 ವಲಸಿಗರು 
  • ಶಾಂತಿ ಸ್ಥಾಪನೆಯಲ್ಲಿ ಮಹತ್ವದ ಹೆಜ್ಜೆಯಾದ 370 ರದ್ದು

ನವದೆಹಲಿ(ನ.30):  ಜಮ್ಮು ಮತ್ತು ಕಾಶ್ಮೀರಕ್ಕಿದ್ದ(Jammu and Kashmir) ವಿಶೇಷ ಸ್ಥಾನಮಾನ ಆರ್ಟಿಕಲ್ 370(Article 370) ರದ್ದಾದ ಬಳಿಕ ಕಣಿವೆ ರಾಜ್ಯದ ಪರಿಸ್ಥಿತಿ ಹೇಗಿದೆ?. ಶಾಂತಿ ಸ್ಥಾಪನೆಯಲ್ಲಿ ಆರ್ಟಿಕಲ್ 370 ರದ್ದತಿ ಯಾವ ಪಾತ್ರ ವಹಿಸಿದೆ? ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಇದರ ನಡುವೆ ಇಂದು ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದಾದ ಬಳಿಕ ಕಾಶ್ಮೀರದಲ್ಲಿನ ಬದಲಾವಣೆ ಕುರಿತು ಬೆಳಕು ಚೆಲ್ಲಿದೆ. 2019ರ ಆಗಸ್ಟ್ ತಿಂಗಳಲ್ಲಿ ಆರ್ಟಿಕಲ್ 370 ರದ್ದು ಮಾಡಲಾಗಿದೆ. ಇದರಿಂಗ 1,678 ವಲಸಿಗರು ಕಾಶ್ಮೀರಕ್ಕೆ ವಾಪಾಸ್ ಆಗಿದ್ದಾರೆ ಎಂದು ಕೇಂದ್ರ ಸಂಸತ್ತಿನಲ್ಲಿ ಅಂಕಿ ಅಂಶ ತೆರೆದಿಟ್ಟಿದೆ.

ಭಯೋತ್ಪಾದನೆ(Terrorism) ಸೇರಿದಂತೆ ಹಲವು ಕಾರಣಗಳಿಂದ ಕಾಶ್ಮೀರ ತೊರೆದಿದ್ದ 1,678 ವಲಸಿಗೆ ಮತ್ತೆ ತಾಯ್ನಾಡಿಗೆ ಮರಳಿದ್ದಾರೆ. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅಭಿವೃದ್ಧಿ ಯೋಜನೆ ಅಡಿಯಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಈ ಮೂಲಕ ಕಾಶ್ಮೀರ ನಿಧಾನವಾಗಿ ಗತವೈಭವಕ್ಕೆ ಮರಳುತ್ತಿದೆ ಎಂದು ಕೇಂದ್ರ ಹೇಳಿದೆ.

Kashmir sites for UNESCO: ಕಾಶ್ಮೀರದಲ್ಲಿ ಹೊಸ ಯುಗ ಆರಂಭ; ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಯೋಜನೆ!

ಹೀಗೆ ಮರಳಿದ ಹಲವರು ತಮ್ಮ ಪೂರ್ವಜರ ಆಸ್ತಿ ಮರಳಿಸುವಂತೆ ಅರ್ಜಿ ಹಾಕಿದ್ದಾರೆ. ಇದರಲ್ಲಿ 150 ಅರ್ಜಿಗಳು ಇತ್ಯರ್ಥಗೊಂಡಿದೆ. 150 ಕುಟುಂಬಕ್ಕೆ ಅವರ ಪೂರ್ವಜರ ಆಸ್ತಿಗಳನ್ನು ಮರಳಿ ನೀಡಲಾಗಿದೆ. ಈ ಮೂಲಕ ಕಾಶ್ಮೀರಿ ಪಂಡಿತ್ ಸೇರಿದಂತೆ ಹಲವು ಸಮುದಾಯಗಳ ಮಂದಿ ಮತ್ತೆ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದಿದೆ.

ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ 40 ನಾಗರೀಕರು ಸಾವನ್ನಪ್ಪಿದ್ದಾರೆ. 72 ಮಂದಿ ಗಾಯಗೊಂಡಿದ್ದಾರೆ. ಕಳೆದ 5 ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 348 ಭಾರತೀಯ ಭದ್ರತಾ ಪಡೆ ಸದಸ್ಯರು ಹುತಾತ್ಮರಾಗಿದ್ದಾರೆ. ಓಟ್ಟು 195 ನಾಗರೀಕರು ಸಾವನ್ನಪ್ಪಿದ್ದರೆ ಎಂದು ಕೇಂದ್ರ ವರದಿ ನೀಡಿದೆ.

PoK retrieve;ಪಾಕ್ ಆಕ್ರಮಿತ ಕಾಶ್ಮೀರ ಹಿಂಪಡೆಯುವುದೇ ಮುಂದಿನ ಅಜೆಂಡಾ; ಕೇಂದ್ರದ ಹೇಳಿಕೆಗೆ ಪಾಕಿಸ್ತಾನ ತಲ್ಲಣ!

2017ರಲ್ಲಿ 40 ನಾಗರೀಕರು ಸಾವನ್ನಪ್ಪಿದ್ದಾರೆ. 2018 ಹಾಗೂ 2019ರಲ್ಲಿ ತಲಾ 39 ನಾಗರೀಕರು ಹತ್ಯೆಯಾಗಿದ್ದಾರೆ. 2020ರಲ್ಲಿ 37 ನಾಗರೀಕರು ಭಯೋತ್ಪಾದಕರ ದಾಳಿ ಹಾಗೂ ಶುತ್ರದೇಶಗಳ ಅಪ್ರಚೋದಿತ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. 2021ರಲ್ಲಿ ಇದುವರೆಗೆ 40 ನಾಗರೀಕರು ಸಾವನ್ನಪ್ಪಿದ್ದಾರೆ.

ಕಳೆದೆರಡು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರೀಕರ ಗುರಿಯಾಗಿಸಿ ದಾಳಿ ನಡೆದಿದೆ. ಬೀದಿ ಬದಿ ವ್ಯಾಪಾರಿ ಸೇರಿದಂತೆ ಅಮಾಯಕರ ಜೀವ ಬಲಿಪಡೆದಿತ್ತು. ಇದು 1990ರಲ್ಲಿ ನಡೆದ ಕಾಶ್ಮೀರ ಹತ್ಯೆಯನ್ನು ನೆನೆಪಿಸುವಂತಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಬಳಿಕ ಕಣಿವೆ ರಾಜ್ಯದಲ್ಲಿ ಭದ್ರತೆ ಪರಿಶೀಸಿಲಿದ್ದರು. ಈ ವೇಳೆ ಹೆಚ್ಚಿನ ಭದ್ರತೆ ನೀಡಲು ಸೂಚಿಸಿದ್ದರು. 

ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಹಲವು ಉಗ್ರರನ್ನು ಸದೆಬಡಿಯಲಾಗಿದೆ. ಶಾಂತಿ ಸ್ಥಾಪನೆಗೆ ಕೇಂದ್ರ ಎಲ್ಲಾ ಪ್ರಯತ್ನ ಮಾಡಿದೆ. 

ಇತ್ತೀಚೆಗೆ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಸೇರಿದಂತೆ ಕೆಲ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇನ್ನು ಶ್ರೀನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಉದ್ಯಮಿಗಳನ್ನು ಸೇನೆ ಹತ್ಯೆ ಮಾಡಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು.

ಇತ್ತೀಚೆಗೆ ಕಾಶ್ಮೀರದ ಪಾರಂಪರಿಕ ಹಾಗೂ ಐತಿಹಾಸಿಕ ತಾಣಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸುವ ಪ್ರಯತ್ನಗಳು ನಡೆದಿದೆ. ಇದರ ಜೊತೆಗೆ ನಾಶಗೊಂಡಿರುವ ಹಿಂದೂ ಹಾಗೂ ಬೌದ್ಧ ದೇಗಲುಗಳ ಪುನರ್ ನಿರ್ಮಾಣ ಕಾರ್ಯ ಯೋಜನೆ ಕೂಡ ನಡೆಯುತ್ತಿದೆ.

click me!