BJP ವಿರೋಧಿಸುವವರಿಗೆ ರಾಷ್ಟ್ರ ವಿರೋಧಿ ಪಟ್ಟ; ಕೇಂದ್ರದ ವಿರುದ್ದ ಓಮರ್ ವಾಗ್ದಾಳಿ!

By Suvarna NewsFirst Published Nov 17, 2020, 9:42 PM IST
Highlights

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ಸದಾ ವಾಗ್ದಾಳಿ ನಡೆಸುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಇದೀಗ ಮತ್ತೆ ಗುಡುಗಿದ್ದಾರೆ. ಈ ಬಾರಿ ಅಮಿತ್ ಶಾ ಸೇರಿದಂತೆ ಕೇಂದ್ರದ ವಿರುದ್ಧ ಓಮರ್ ಹೊಸ ಆರೋಪ ಮಾಡಿದ್ದಾರೆ.

ನವದೆಹಲಿ(ನ.17): ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ಪುನರ್ ಸ್ಥಾಪಿಸಲು ಪಿಡಿಪಿ ಸೇರಿದಂತೆ ಸ್ಥಳೀಯ ಪಕ್ಷಗಳು ಒಕ್ಕೂಟ ರಚಿಸಿವೆ. ಪೀಪಲ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್(PAGD) ಒಕ್ಕೂಟವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಪ್ಕರ್ ಗ್ಯಾಂಗ್ ಎಂದು ಕರೆದಿದ್ದರು. ಇದೀಗ ಅಮಿತ್ ಶಾ ವಿರುದ್ಧ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ಚುನಾವಣೆಗೆ ನಿಲ್ಲಲ್ಲ' ಓಮರ್ ಶಪಥ

ಬಿಜೆಪಿಯನ್ನು ಯಾರು ವಿರೋಧಿಸುತ್ತಾರೋ ಅವರಿಗೆ ರಾಷ್ಟ್ರವಿರೋಧಿ ಪಟ್ಟ ಕಟ್ಟಲಾಗುತ್ತಿದೆ. ನಮ್ಮದು ಗ್ಯಾಂಗ್ ಅಲ್ಲ, ರಾಜಕೀಯ ಪಕ್ಷಗಳ ಒಕ್ಕೂಟವಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನರ ಪರವಾಗಿ, ಅಭಿವೃದ್ಧಿ ಪರ ಹೆಜ್ಜೆ ಇಡುವ ಪಕ್ಷವಾಗಿದೆ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಕಾಶ್ಮೀರದ 7 ಪಕ್ಷಗಳ ಕೂಟಕ್ಕೆ ಫಾರೂಖ್‌ ಅಬ್ದುಲ್ಲಾ ಮುಖ್ಯಸ್ಥ!.

ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನರು ಮತ ಹಾಕುವ ಭಯ ಅಮಿತ್ ಶಾಗಿದೆ. ಕೇಂದ್ರದ ವಿರುದ್ಧ ಇಲ್ಲಿನ ಜನ ರೋಸಿ ಹೋಗಿದ್ದಾರೆ. ಈ ಹತಾಶೆಯಿಂದ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ರಾಜಕೀಯ ಪಕ್ಷಗಳ ಒಕ್ಕೂಟವನ್ನು ಗ್ಯಾಂಗ್ ಎಂದು ಕರೆದಿದ್ದಾರೆ. ಒಕ್ಕೂಟ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡಲಿದೆ ಎಂದು ಓಮರ್ ಹೇಳಿದ್ದಾರೆ.

click me!