ಒಡಿಶಾ ಕಡಲತೀರಕ್ಕೆ ಲಕ್ಷಾಂತರ ಆಮೆಗಳ ಆಗಮನ.. ಫೋಟೋ ವೀಡಿಯೋ ವೈರಲ್

Published : Feb 24, 2025, 12:36 PM ISTUpdated : Feb 24, 2025, 12:51 PM IST
ಒಡಿಶಾ ಕಡಲತೀರಕ್ಕೆ ಲಕ್ಷಾಂತರ ಆಮೆಗಳ ಆಗಮನ.. ಫೋಟೋ ವೀಡಿಯೋ ವೈರಲ್

ಸಾರಾಂಶ

ಒಡಿಶಾದ ಕಡಲತೀರಕ್ಕೆ ಸಂತಾನೋತ್ಪತ್ತಿಗಾಗಿ ಲಕ್ಷಾಂತರ ಆಮೆಗಳು ಆಗಮಿಸಿದ್ದು, ಈ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆ ಆಮೆಗಳ ರಕ್ಷಣೆಗೆ ಕ್ರಮ ಕೈಗೊಂಡಿದೆ.

ಒಡಿಶಾ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಂತಾನೋತ್ಪತಿಗಾಗಿ ಲಕ್ಷಾಂತರ ಹೆಣ್ಣು ಆಮೆಗಳು ಏಕಕಾಲಕ್ಕೆ ಒಡಿಶಾದ ಕಡಲ ತೀರಕ್ಕೆ ಬಂದಿದ್ದು, ಇವುಗಳ ಅಪರೂಪದ ಫೋಟೋ ಹಾಗೂ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಐಎಫ್‌ಎಸ್ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಈ ಅಪರೂಪದ ಫೋಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅವುಗಳ ಬಗ್ಗೆ ಬರೆದುಕೊಂಡಿದ್ದಾರೆ.  ಆಲಿವ್ ರಿಡ್ಲಿ ಆಮೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಒಡಿಶಾದ ಕಡಲತೀರಕ್ಕೆ ಮೊಟ್ಟೆಗಳನ್ನು ಇಡುವುದಕ್ಕಾಗಿ ಆಗಮಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಅವರು ಪೋಸ್ಟ್ ಮಾಡಿದ ವೀಡಿಯೋದಲ್ಲಿ ಸಾವಿರಾರು   ಆಲಿವ್ ರಿಡ್ಲಿ ಆಮೆಗಳು ಸಮುದ್ರ ತೀರದಲ್ಲಿ ಮೊಟ್ಟೆ ಹಾಕಲು ಬಂದಿರುವುದು ಕಂಡು ಬರುತ್ತಿದೆ. ರುಶೀಕುಲ್ಯಾ ನದಿ ಇಲ್ಲಿಗೆ ಸಮೀಪದಲ್ಲೇ ಇದ್ದು, ಅರಣ್ಯ ಇಲಾಖೆ ತೀವ್ರ ನಿಗಾ ಇರಿಸಿದೆ. ಬೆರ್ಹಾಂಪುರ್‌ ವಿಭಾಗೀಯ ಅರಣ್ಯ ಅಧಿಕಾರಿ ಈಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ  ಒಡಿಶಾದ ರಿಷಿಕುಲ್ಯಾ ಬೀಚ್‌ನಲ್ಲಿ 7 ಲಕ್ಷಕ್ಕೂ ಅಧಿಕ ಆಮೆಗಳು ಸಮೂಹಿಕವಾಗಿ ಮೊಟ್ಟೆ ಇಡುವುದಕ್ಕೆ ಆಗಮಿಸಿರುವುದನ್ನು ತೋರಿಸುತ್ತಿದೆ. 

ಪ್ರತಿವರ್ಷವೂ ಕೂಡ ಇದೇ ಸಮಯಕ್ಕೆ ಆಮೆಗಳು ಇಲ್ಲಿಗೆ ಆಗಮಿಸುತ್ತಿದ್ದು, ಈ ಪ್ರಕ್ರಿಯೆಗೆ ಅಲ್ಲಿ ಅರ್ರಿಬಡ ಎಂದು ಕರೆಯಲಾಗುತ್ತದೆ. ಪ್ರತಿವರ್ಷ ಫೆಬ್ರವರಿ 15ರಿಂದ ಫೆಭ್ರವರಿ 25ರವರೆಗೆ ಆಮೆಗಳು ಈ ರಿಷಿಕುಲ್ಯಾ ಬೀಚ್‌ಗೆ ಮೊಟ್ಟೆ ಇಡಲು ಸಾಮೂಹಿಕವಾಗಿ ಆಗಮಿಸುತ್ತವೆ ಎಂದು ರಿಷಿಕುಲ್ಯಾದ ಸಮುದ್ರ ಆಮೆಗಳ ರಕ್ಷಣಾ ತಂಡದ ಕಾರ್ಯದರ್ಶಿ ರಬೀಂದ್ರನಾಥ್ ಸಾಹು ಹೇಳಿದ್ದಾರೆ. 

ಅಳಿವಿನಂಚಿನಲ್ಲಿರುವ ಈ ಸಮುದ್ರ ಜೀವಿಗಳನ್ನು ರಕ್ಷಿಸಲು, ಮಾನವ ಹಸ್ತಕ್ಷೇಪ ಆಗದಂತೆ ತಡೆಯಲು ಅಧಿಕಾರಿಗಳು ಈ ಸಮಯಲ್ಲಿ ಆಮೆಗಳು ಮೊಟ್ಟೆ ಹಾಕಲು ಗೂಡುಕಟ್ಟುವ ಪ್ರದೇಶಗಳಿಗೆ ಬೇಲಿ ಹಾಕಿದ್ದಾರೆ. ಹೆಣ್ಣು ಆಲಿವ್ ರಿಡ್ಲಿ ಆಮೆಗಳು ಮರಳಿನಲ್ಲಿ ಹೊಂಡಗಳನ್ನು ಅಗೆಯುತ್ತವೆ, ಏಕೆಂದರೆ ಅವು ತಲಾ 100 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತವೆ. ಮರಿಗಳು ಸುಮಾರು 50 ದಿನಗಳಲ್ಲಿ ಹೊರಬರುತ್ತವೆ.

ಆಲಿವ್ ಹಸಿರು ಬಣ್ಣದ ಚಿಪ್ಪನ್ನು ಹೊಂದಿರುವ ಕಾರಣಕ್ಕೆ ಈ ಆಮೆಗಳಿಗೆ ಆಲಿವ್ ರಿಡಲ್ ಆಮೆ  ಎಂದು ಹೆಸರಿಸಲಾಗಿದ್ದು, ಇದು ಅಳಿವಿನಂಚಿನಲ್ಲಿರುವ ವರ್ಗಕ್ಕೆ ಸೇರಿದೆ. ವಿಶ್ವ ಸಂರಕ್ಷಣಾ ಒಕ್ಕೂಟವು ವರ್ಗೀಕರಿಸಿದಂತೆ, ಸಂರಕ್ಷಣಾವಾದಿಗಳು ಈ ಜಾತಿಯನ್ನು ರಕ್ಷಿಸುವ ಮಹತ್ವವನ್ನು ಒತ್ತಿ ಹೇಳುತ್ತಲೇ ಇದ್ದಾರೆ. ಹೀಗಾಗಿ ಅವರ ಪ್ರಯತ್ನಗಳಿಗೆ ಸಹಾಯ ಮಾಡಲು, ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) 1991 ರಲ್ಲಿ ಆಲಿವ್ ರಿಡ್ಲಿ ಆಮೆಗಳು ಮತ್ತು ಅವುಗಳ ಗೂಡುಕಟ್ಟುವ ಸ್ಥಳಗಳನ್ನು ರಕ್ಷಿಸಲು ಆಪರೇಷನ್ ಒಲಿವಿಯಾ ಎಂಬ ಯೋಜನೆಯನ್ನು ಜಾರಿಗೆ ತಂದಿತು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ