ಉದ್ಧವ್‌ ಠಾಕ್ರೆಗೆ ಮತ್ತೊಂದು ಶಾಕ್, ಶಿವಸೇನೆಯ ವಕ್ತಾರೆ ಶಿಂಧೆ ಬಣಕ್ಕೆ!

By Suvarna News  |  First Published Jul 13, 2022, 10:46 AM IST

* ರಾಜ್ಯದಲ್ಲಿ ಮಹಾ ಅಘಾಡಿ ಸರ್ಕಾರ ಪತನ

* ಠಾಕ್ರೆಗೆ ಶಾಕ್‌ ಕೊಟ್ಟಿದ್ದ ಶಿಂಧೆಯಿಂದ ಇದೀಗ ಮತ್ತೊಂದು ಪೆಟ್ಟು

* ಶಿವಸೇನೆಯ ಕವಕ್ತಾರೆ ಶಿಂಧೆ ಬಣಕ್ಕೆ


ಮುಂಬೈ(ಜು.13): ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಮತ್ತೊಂದು ಹೊಡೆತವಾಗಿ, ಪಕ್ಷದ ವಕ್ತಾರ ಮತ್ತು ಮುಂಬೈನ ಮಾಜಿ ಕೌನ್ಸಿಲರ್ ಶೀತಲ್ ಮಾತ್ರೆ ಮಂಗಳವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪಾಳಯಕ್ಕೆ ಸೇರಿದರು. ಶಿಂಧೆ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ಮುಂಬೈನ ಮೊದಲ ಮಾಜಿ ಶಿವಸೇನೆ ಕೌನ್ಸಿಲರ್ ಶೀತಲ್ ಮ್ಹಾತ್ರೆಯವರು 2012 ಮತ್ತು 2017 ರಲ್ಲಿ ಉತ್ತರ ಮುಂಬೈನ ಉಪನಗರದ ದಹಿಸರ್‌ನಲ್ಲಿ ವಾರ್ಡ್ ಸಂಖ್ಯೆ 7 ಅನ್ನು ಪ್ರತಿನಿಧಿಸಿದ್ದರು.

ಮಹಾರಾಷ್ಟ್ರ ಸಂಪುಟದಲ್ಲಿ ಬಿಜೆಪಿಯ 25, ಶಿಂಧೆ ಟೀಮ್‌ನ 12 ಸಚಿವರು?

Tap to resize

Latest Videos

ಮ್ಹಾತ್ರೆ ಅವರು ಕೆಲವು ಶಿವಸೇನಾ ಕಾರ್ಯಕರ್ತರೊಂದಿಗೆ ಮಂಗಳವಾರ ರಾತ್ರಿ ಶಿಂಧೆ ಅವರ ನಿವಾಸಕ್ಕೆ ತೆರಳಿ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಠಾಕ್ರೆ ನೇತೃತ್ವದ ಶಿವಸೇನೆ ಅಲಿಬಾಗ್-ಪೆನ್ ಪ್ರದೇಶಕ್ಕೆ ಸಂಪರ್ಕ್ ಸಂಯೋಜಕರಾಗಿ (ಸಂಯೋಜಕ) ಮ್ಹಾತ್ರೆ ಅವರನ್ನು ನೇಮಿಸಿತ್ತು. 

मुंबई येथील दहिसर विभागातील माजी नगरसेविका सौ.शीतल मुकेश म्हात्रे यांनी आज वंदनीय हिंदुहृदयसम्राट शिवसेनाप्रमुख बाळासाहेब ठाकरे तसेच धर्मवीर आनंद दिघे साहेब यांच्या विचारांना प्रमाण मानून हिंदुत्वाचा विचार स्वीकारून आम्हाला साथ देण्याचा निर्णय घेतला. pic.twitter.com/zov9q5PFaV

— Eknath Shinde - एकनाथ शिंदे (@mieknathshinde)

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಘೋಷಿಸಿದ ಸಿಎಂ ಶಿಂಧೆ, ಮಹಾರಾಷ್ಟ್ರದಲ್ಲಿ ಇಂಧನ ಅಗ್ಗ!

ಇನ್ನು ಕೆಲವೇ ತಿಂಗಳುಗಳಲ್ಲಿ ಶಿವಸೇನೆ ಹಿಡಿತದಲ್ಲಿರುವ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ಚುನಾವಣೆ ನಡೆಯಲಿದೆ ಎಂಬುವುದು ಉಲ್ಲೇಖನೀಯ. ಹೀಗಿರುವಾಗಲೇ ಮ್ಹಾತ್ರೆ ಶಿಂಧೆ ಬಣ ಸೇರಿರುವುದು ಶಿವಸೇನೆಗೆ ಬಹುದೊಡ್ಡ ಹೊಡೆತ ನೀಡಲಿದೆ.  ಇನ್ನು ಕಳೆದ ತಿಂಗಳು ಶಿಂಧೆ ಅವರ ಬಂಡಾಯದಿಂದಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು ಎಂಬುದು ಗಮನಾರ್ಹ.

click me!