
ನವದೆಹಲಿ (ಆ.29): ಆತನ ಯೂಟ್ಯೂಬ್ ವಿಡಿಯೋ ನೋಡಿದವರೆಲ್ಲಾ ಅವನ ಮಾತಿಗೆ ಮಾರು ಹೋಗದವರೇ ಇಲ್ಲ. ಅದಕ್ಕಾಗಿ ಯೂಟ್ಯೂಬ್‌ಗೆ ಅಂಥದ್ದೇ ಹೆಸರನ್ನೇ ಇಟ್ಟುಕೊಂಡಿದ್ದ. 'ಚೇಂಜ್ ಯುವರ್ ಲೈಫ್..'. ಮೋಟಿವೇಷನಲ್ ಸ್ಪೀಕರ್ ಅಂತಾರಲ್ಲ.. ಅಂಥದ್ದೇನೋ ಮಾಡ್ತಿದ್ದ. ಯೂಟ್ಯೂಬ್ ವಿಡಿಯೋ ನೋಡುವವರಿಗೆ ನೀವು ಬದುಕಲು ಕಲಿಯಿರಿ ಎನ್ನುತ್ತಿದ್ದ. ಆದರೆ, ಈತ ಮಾತ್ರ ಬದುಕೋಕೆ ಕದಿಯುತ್ತಿದ್ದ. ಅಂಥ ಒಬ್ಬ ಮೋಟಿವೇಷನಲ್ ಸ್ಪೀಕರ್ ಹಾಗೂ ಐನಾತಿ ಕಳ್ಳನನ್ನು ಒಡಿಶಾದ ಭುವನೇಶ್ವರ ಪೊಲೀಸರು ಬಂಧಿಸಿದ್ದಾರೆ.
ಚೆಂಜ್ ಯುವರ್ ಲೈಫ್ ಎನ್ನುವ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ವ್ಯಕ್ತಿ ನಿಜ ಜೀವನದಲ್ಲಿ ಕಳ್ಳತನದ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಆತನನ್ನು ಭುವನೇಶ್ವರ ಪೊಲೀಸರು ಬಂದಿಸಿದ್ದಾರೆ.
ಮನೋಜ್ ಸಿಂಗ್ ಎಂಬ ವ್ಯಕ್ತಿ ವಿರುದ್ಧ ಹತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ ಮತ್ತು ವಿವಿಧ ಜನರು ಮತ್ತು ಸ್ಥಳಗಳಿಂದ ಕದ್ದಿದ್ದ ನಗದು ಮತ್ತು ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಕೇಸ್ ತನಿಖಾ ತಜ್ಞರು ಹೇಳುವ ಪ್ರಕಾರ, ಸಿಂಗ್ ದಿನವಿಡೀ ಒಂಟಿ ಮನೆಗಳನ್ನು ಆಯ್ಕೆ ಮಾಡುತ್ತಿದ್ದ. ಆದರೆ, ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬದುಕಿನ ಸದ್ಗುಣಗಳ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದ. ಜನರು ಪ್ರಮಾಣಿಕತೆ ಹಾಗೂ ಶಿಸ್ತಿನಿಂದ ಬದುಕಲು ಬೇಕಾಗುವ ಕಲೆ ಸಿದ್ದಿಸಿಕೊಳ್ಳಬೇಕು ಎಂದು ಹೇಳುತ್ತಿದ್ದ.
ಆಗಸ್ಟ್ 14 ರಂದು ಭರತ್‌ಪುರದ ಮನೆಯೊಂದಕ್ಕೆ ಮನೋಜ್ ನುಗ್ಗಿ 200 ಗ್ರಾಂ ಚಿನ್ನ ಮತ್ತು 5 ಲಕ್ಷ ರೂಪಾಯಿ ನಗದು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಬೀಗ ಮುರಿದಿರುವುದನ್ನು ತಿಳಿದ ನಂತರ ಮನೆಯ ನಿವಾಸಿಗಳು ತಮ್ಮ ಚಿನ್ನ ಮತ್ತು ನಗದು ಕಾಣೆಯಾಗಿರುವುದನ್ನು ನೋಡಿದ್ದಾರೆ.
ಪೊಲೀಸರು ಮನೋಜ್‌ನನ್ನು ಒಂದು ವಾರದ ಕಾಲ ಹದ್ದಿನ ಕಣ್ಣಲ್ಲಿಟ್ಟು, ನಂತರ ಖಂಡಗಿರಿ ಬಾರಿಯಲ್ಲಿ ಬಂಧಿಸಿದರು. ಆತನಿಂದ ಆಭರಣಗಳು ಮತ್ತು 1 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
"ಆತ ಒಬ್ಬ ಪರಿಣಿತ ಕಳ್ಳನಾಗಿದ್ದರೂ ಮತ್ತು ಆತನ ವಿರುದ್ಧ ಕನಿಷ್ಠ 10 ಕಳ್ಳತನ ಪ್ರಕರಣಗಳು ಬಾಕಿ ಇದ್ದರೂ, ಆತ ತನ್ನ ಬಿಡುವಿನ ವೇಳೆಯಲ್ಲಿ ಮೋಟಿವೇಷನಲ್ ಸ್ಪೀಚ್ ನೀಡಿ ಉತ್ತಮ ಅಭಿಪ್ರಾಯಗಳನ್ನು ಗಳಿಸಿದ್ದ" ಎಂದು ಪೊಲೀಸ್ ಆಯುಕ್ತ ಎಸ್. ದೇವ್ ದತ್ತ ಸಿಂಗ್ ತಿಳಿಸಿದ್ದಾರೆ.
ಮನೋಜ್ ಸಿಂಗ್‌ನ ಇತರ ಕಳ್ಳತನಗಳ ತನಿಖೆ ಮುಂದುವರೆದಿದ್ದು, ಆತ ಈಗ ಬಂಧನದಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ನಿವಾಸಿಗಳು ಜಾಗರೂಕರಾಗಿರಿ ಮತ್ತು ಆನ್‌ಲೈನ್ ವ್ಯಕ್ತಿಗಳನ್ನು ಕುರುಡಾಗಿ ನಂಬಬೇಡಿ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ