ಕೊರೋನಾ ಲಸಿಕೆ ಕೊರತೆ: 700ಕ್ಕೂ ಹೆಚ್ಚು ವ್ಯಾಕ್ಸಿನ್ ಸೆಂಟರ್‌ಗೆ ಬೀಗ

By Suvarna News  |  First Published Apr 8, 2021, 12:38 PM IST

ಕೊರೋನಾ ವ್ಯಾಕ್ಸೀನ್ ಕೊರತೆ | ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ಲಸಿಕಾ ಕೇಂದ್ರಕ್ಕೆ ಬಾಗಿಲು 


ಭುವನೇಶ್ವರ್(ಎ.09): COVID-19 ಲಸಿಕೆಗಳ ಕೊರತೆಯಿಂದಾಗಿ ಒಡಿಶಾದಲ್ಲಿ ಸುಮಾರು 700 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚಬೇಕಾಯಿತು ಎಂದು ಒಡಿಶಾ ಆರೋಗ್ಯ ಸಚಿವ ನಬಾ ಕಿಸೋರ್ ದಾಸ್ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರಿಗೆ ಪತ್ರ ಬರೆದಿದ್ದಾರೆ.

ಏಪ್ರಿಲ್ 9 ರೊಳಗೆ ಒಡಿಶಾ ಕೋವಿಶೀಲ್ಡ್ ಲಸಿಕೆ ಮುಗಿಯಲಿದೆ ಎಂದು ದಾಸ್ ಬರೆದಿದ್ದಾರೆ. ತಕ್ಷಣ ರಾಜ್ಯಕ್ಕೆ 25 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ನೀಡುವಂತೆ ಕೇಂದ್ರವನ್ನು ಕೋರಿದ್ದಾರೆ.

Latest Videos

undefined

ಲಸಿಕೆ ಕೊರತೆ: ಮಹಾರಾಷ್ಟ್ರದ ಕೆಲ ಲಸಿಕಾ ಕೇಂದ್ರ ಸ್ಥಗಿತ!

ಭಾರತವು ಜನಸಂಖ್ಯೆ ಹೆಚ್ಚಿರುವುದರಿಂದ ಚುಚ್ಚುಮದ್ದು ನೀಡುವ ವಿಚಾರದಲ್ಲಿ ಇತರ ದೇಶಗಳಿಗಿಂತ ಭಿನ್ನ ಸವಾಲನ್ನು ಎದುರಿಸುತ್ತಿದೆ. ದೇಶದ ಅತಿದೊಡ್ಡ ಲಸಿಕೆ ಉತ್ಪಾದಕ, ಸೀರಮ್ ಇನ್ಸ್ಟಿಟ್ಯೂಟ್ ತಮ್ಮ ಉತ್ಪಾದನಾ ಗುರಿಗಳನ್ನು ಪೂರೈಸುವ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಮಹಾರಾಷ್ಟ್ರದಲ್ಲೂ 100ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದ್ದು, ಇದೀಗ ಜನರು ಕೊರೋನಾ ಟೆಸ್ಟ್‌ಗೆ ಧಾವಿಸುತ್ತಿದ್ದು, ಸ್ವ್ಯಾಬ್ ಟೆಸ್ಟ್ ಸೆಂಟರ್‌ಗಳಲ್ಲಿ ಜನರು ತುಂಬಿದ್ದಾರೆ.

click me!