ಸೀರಂಗೆ ಆಸ್ಟ್ರಾಜೆನೆಕಾ ಲೀಗಲ್‌ ನೋಟಿಸ್‌!

Published : Apr 08, 2021, 11:44 AM IST
ಸೀರಂಗೆ ಆಸ್ಟ್ರಾಜೆನೆಕಾ ಲೀಗಲ್‌ ನೋಟಿಸ್‌!

ಸಾರಾಂಶ

: ‘ಕೋವಿಶೀಲ್ಡ್‌’ ಲಸಿಕೆ ಉತ್ಪಾದಿಸುವ ಸೀರಂ ಇನ್ಸ್‌ಟಿಟ್ಯೂಟ್‌ಗೂ ಹಾಗೂ ಈ ಲಸಿಕೆ ಕಂಡುಹಿಡಿದ ಬ್ರಿಟನ್‌ನ ಆಸ್ಟ್ರಾಜೆನೆಕಾ ಕಂಪನಿ| ಪೂರೈಕೆ ವಿಳಂಬ: ಸೀರಂಗೆ ಆಸ್ಟ್ರಾಜೆನೆಕಾ ಲೀಗಲ್‌ ನೋಟಿಸ್‌

ನವದೆಹಲಿ(ಏ.08): ‘ಕೋವಿಶೀಲ್ಡ್‌’ ಲಸಿಕೆ ಉತ್ಪಾದಿಸುವ ಸೀರಂ ಇನ್ಸ್‌ಟಿಟ್ಯೂಟ್‌ಗೂ ಹಾಗೂ ಈ ಲಸಿಕೆ ಕಂಡುಹಿಡಿದ ಬ್ರಿಟನ್‌ನ ಆಸ್ಟ್ರಾಜೆನೆಕಾ ಕಂಪನಿಗೂ ಕಾನೂನು ಸಂಘರ್ಷ ಆರಂಭವಾಗಿದೆ.

ಲಸಿಕೆ ವಿತರಣೆಗೆ ಸೀರಂ ವಿಳಂಬ ಮಾಡುತ್ತಿದೆ ಎಂದು ಆಸ್ಟ್ರಾಜೆನೆಕಾ ಕಂಪನಿಯು ಸೀರಂಗೆ ಲೀಗಲ್‌ ನೋಟಿಸ್‌ ಜಾರಿ ಮಾಡಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಆಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್‌ ವಿವಿ ಜಂಟಿಯಾಗಿ ಕೋವಿಶೀಲ್ಡ್‌ ಲಸಿಕೆಯನ್ನು ಕಂಡುಹಿಡಿದಿವೆ. ಇದರ ಉತ್ಪಾದನೆಯನ್ನು ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಮಾಡುತ್ತಿದ್ದು, ವಿಶ್ವದೆಲ್ಲೆಡೆ ಪೂರೈಕೆಯ ಹೊಣೆ ಹೊತ್ತಿದೆ.

ಇತ್ತೀಚೆಗಷ್ಟೇ ಸೀರಂ ಮುಖ್ಯಸ್ಥ ಅದರ್‌ ಪೂನಾವಾಲಾ ಅವರು, ‘ಲಸಿಕೆ ಉತ್ಪಾದನಾ ಕೇಂದ್ರ ಒತ್ತಡದಲ್ಲಿದೆ’ ಎಂದಿದ್ದರು. ಈ ಮೂಲಕ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಆಗುತ್ತಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: 2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ
ಹಾರ್ಮುಜ್ ಜಲಸಂಧಿ ದಾಟದ ತೈಲ ಹಡಗು: ಭಾರತ ಸೇರಿದಂತೆ ಜಗತ್ತಿಗೆ ಕಾದಿದೆಯೇ ಪೆಟ್ರೋಲ್, ಗ್ಯಾಸ್ ಸಂಕಷ್ಟ?