ಸೋಲು ಗೆಲುವು ಚುನಾವಣೆಯಲ್ಲಿ ಸಾಮಾನ್ಯವಾಗಿರುತ್ತದೆ. ಗೆದ್ದವರು ದೇಶ ಆಳಿದರೆ ಸೋತವರು ಮುಂದೆ ಗೆಲುವಿಗಾಗಿ ಪಣ ತೊಡಬೇಕು. ಆದರೆ ಇಲ್ಲೊಬ್ಬ ವ್ಯಕ್ತಿ ಚುನಾವಣೆಯಲ್ಲಿ ಸೋತ ಸಿಟ್ಟಿಗೆ ತನ್ನ ಗ್ರಾಮಕ್ಕೆ ಬರುವ ದಾರಿಯನ್ನೇ ಮುಚ್ಚಿದ್ದಲ್ಲದೇ ಅಲ್ಲಲ್ಲಿ ಹೊಂಡ ತೋಡಿಸಿದ್ದಾನೆ. ಒಡಿಶಾದ(Odisha) ಗಜಪತಿ(Gajapati) ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸೋಲಿನಿಂದ ತೀವ್ರ ನಿರಾಸೆಯ ಜೊತೆ ಕೋಪಗೊಂಡ ಈ ವ್ಯಕ್ತಿ ತನ್ನ ಬೆಂಬಲಿಗರೊಂದಿಗೆ ಸೇರಿ ಗ್ರಾಮದ ರಸ್ತೆಯನ್ನು ತೋಡಿದಲ್ಲದೇ ಗ್ರಾಮದ ಬೀದಿ ದೀಪಗಳನ್ನು ಕೂಡ ಧ್ವಂಸಗೊಳಿಸಿದ್ದಾನೆ.
ರಾಯಗಡ ಬ್ಲಾಕ್‌ನ (Rayagada block) ಗಂಗಾಬಡಾ ಪಂಚಾಯಿತಿ (Gangabada panchayat) ವ್ಯಾಪ್ತಿಯ ಬಡದೇಬುಲ ಗ್ರಾಮದಲ್ಲಿ (Badadebula villlage) ಸೋಮವಾರ ಈ ಘಟನೆ ನಡೆದಿದೆ. ಆರೋಪಿಯನ್ನು ಬಾರಿಕ್ ಸಬರ್ (Barik Sabar) ಎಂದು ಗುರುತಿಸಲಾಗಿದ್ದು, ಈತ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಹರಿಬಂಧು ಕರ್ಜೀ (Haribandhu Karjee) ವಿರುದ್ಧ ಸೋತಿದ್ದ. ಸೋಲಿನ ಬಳಿಕ ಬಾರಿಕ್ ಸಬರ್ ತನ್ನ ಬೆಂಬಲಿಗರೊಂದಿಗೆ ಸೇರಿ ಗ್ರಾಮಕ್ಕೆ ತೆರಳುವ ರಸ್ತೆಯ ಮೇಲೆ ದೊಡ್ಡ ಕಲ್ಲುಗಳನ್ನು ಹಾಕಿದ್ದಾನೆ . ಈತ ಗಂಗಾಬಡಾ ಪಂಚಾಯಿತಿಗೆ ಸೇರುವ ಬಡಪಬೇರಿಯಾ (Badapaberia), ತಾಲಾ ಸಾಹಿ(Tala Sahi), ಸಗಾಡಿಯಾ(Sagadia), ಲೋಬಾ(Loba) ಮತ್ತು ಬಟಕುಂಬಾ(Batakhumba) ಗ್ರಾಮಗಳ ರಸ್ತೆಗಳಲ್ಲಿ ಗುಂಡಿ ತೋಡಿ ಕಲ್ಲುಗಳನ್ನು ಇಟ್ಟು ರಸ್ತೆ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಉಕ್ರೇನ್‌ನಲ್ಲಿ MBBS ಮಾಡ್ತಿದ್ದ ಗ್ರಾ.ಪಂ. ಅಧ್ಯಕ್ಷೆ: ಯುದ್ಧದ ಬಳಿಕ ಬಯಲಾದ ರಹಸ್ಯ
ಸೋಮವಾರ, ಬಾರಿಕ್ ಸಬರ್ 196 ಮತಗಳ ಅಂತರದಿಂದ ಎರಡನೇ ಬಾರಿಗೆ ಕರ್ಜೀ ವಿರುದ್ಧ ಸೋತಿದ್ದರು. ಚುನಾವಣೆಯಲ್ಲಿ ಗ್ರಾಮಸ್ಥರು ಆತನಿಗೆ ಮತ ನೀಡದ ಹಿನ್ನೆಲೆಯಲ್ಲಿ ಕಂಗೆಟ್ಟು ಆತ ಈ ಕೃತ್ಯವೆಸಗಿದ್ದಾನೆ ಎಂದು ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿ ಆರೋಪಿಸಿದ್ದಾರೆ. ಈ ಮಧ್ಯೆ ಆರೋಪಿ ಸಬರ್ ವಿರುದ್ಧ ಗ್ರಾಮಸ್ಥರು ಗರಾಬಂದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಹತಾಶೆಗೊಂಡ ಬಾರಿಕ್ ಸಬರ್ ಈ ಕೃತ್ಯವೆಸಗಿದ್ದಾರೆ ಎಂದು ಸಗಾಡಿಯಾ ಗ್ರಾಮದ ವ್ಯಕ್ತಿಯೊಬ್ಬರು ಹೇಳಿದರು. ಗ್ರಾಮದ ಮೂಲಸೌಕರ್ಯ ಹಾಳು ಮಾಡಿದ ದುಷ್ಕರ್ಮಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
UP Elections: 6ನೇ ಹಂತದ ಚುನಾವಣೆ: ಯೋಗಿ, ಮೌರ್ಯ ಸೇರಿ ಘಟಾನುಘಟಿಗಳ ಭವಿಷ್ಯ ನಿರ್ಧಾರ!
ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಮತ್ತು ಪೊಲೀಸರು ಸೇರಿದಂತೆ ಸ್ಥಳೀಯ ಅಧಿಕಾರಿಗಳು ಧಾವಿಸಿ ಹಾನಿಗೀಡಾದ ಹಾದಿಯನ್ನು ಸರಿಪಡಿಸಲು ಶುರು ಮಾಡಿದರು ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಸಂಗ್ರಾಮ್ ಪಾಂಡ (Sangram Panda) ಹೇಳಿದ್ದಾರೆ. ಆಂಧ್ರಪ್ರದೇಶದ (Andhra Pradesh) ಗಡಿಯಲ್ಲಿರುವ ಈ ಪಂಚಾಯಿತಿ 1500 ಮತದಾರರನ್ನು ಹೊಂದಿದೆ. ಫೆ.20ರಂದು ಮೂರನೇ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಇಲ್ಲೂ ಪಂಚಾಯಿತಿ ಚುನಾವಣೆ ನಡೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ