27 ವರ್ಷದ ಒಡಿಶಾದ ಗಾಯಕಿ ರುಕ್ಸಾನಾ ಬಾನು ಅವರು ಹಠಾತ್ ನಿಧನರಾಗಿದ್ದು, ಆಕೆ ವಿಷಪ್ರಾಶನ ಮಾಡಿರುವ ಶಂಕೆಯನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಒಡಿಶಾದ ಪ್ರಸಿದ್ಧ ಸಂಬಲ್ಪುರಿ ಗಾಯಕಿಯಾಗಿದ್ದ ರುಕ್ಸಾನಾ ಬಾನು ಅವರು ಭುವನೇಶ್ವರ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಸಾವನ್ನಪ್ಪಿದ್ದಾರೆ.
27 ವರ್ಷದ ಒಡಿಶಾದ ಗಾಯಕಿ ರುಕ್ಸಾನಾ ಬಾನು ಅವರು ಹಠಾತ್ ನಿಧನರಾಗಿದ್ದು, ಆಕೆ ವಿಷಪ್ರಾಶನ ಮಾಡಿರುವ ಶಂಕೆಯನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಒಡಿಶಾದ ಪ್ರಸಿದ್ಧ ಸಂಬಲ್ಪುರಿ ಗಾಯಕಿಯಾಗಿದ್ದ ರುಕ್ಸಾನಾ ಬಾನು ಅವರು ಭುವನೇಶ್ವರ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಸಾವನ್ನಪ್ಪಿದ್ದಾರೆ.
ಅಲ್ಲಿ ರುಕ್ಸಾನಾ ಬಾನು ಸ್ಕ್ರಬ್ ಟೈಪೂಸ್ (Scrub Typhus)ಎಂಬ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತ ಆಸ್ಪತ್ರೆ ಕೂಡ ರುಕ್ಸಾನಾ ಸಾವಿಗೆ ಏನು ಕಾರಣ ಎಂಬುದಕ್ಕೆ ಖಚಿತವಾದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ, ಸೆಪ್ಟೆಂಬರ್ 18 ರಂದು ಆಕೆ ಸ್ಕ್ರಬ್ ಟೈಪುಸ್ ಸೋಂಕಿಗೆ ಒಳಗಾಗಿರುವುದು ತಿಳಿದು ಬಂದಿತ್ತು.
undefined
ಆದರೆ ಆಕೆಯ ತಾಯಿ ಹಾಗೂ ಸೋದರಿ ತಮ್ಮ ಪುತ್ರಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ರುಕ್ಸಾನಾ ಬಾನುವಿನ ವಿರೋಧಿಯಾಗಿದ್ದ ಪಶ್ಚಿಮ ಒಡಿಶಾದ ಗಾಯಕಿ ಆಕೆಗೆ ವಿಷವಿಕ್ಕಿದ್ದಾಳೆ ಎಂದು ರುಕ್ಸಾನಾ ತಾಯಿ ಆರೋಪಿಸಿದ್ದಾರೆ. ಆದರೆ ವಿಷವಿಕ್ಕಿದ ಗಾಯಕಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ, ಅಲ್ಲದೇ ರುಕ್ಸಾನಾಗೆ ಈ ಹಿಂದೆಯೂ ಹಲವು ಬಾರಿ ಬೆದರಿಕೆ ಕರೆಗಳು ಬಂದಿವೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಸರ್ಜರಿ ಬಳಿಕ ಕೋಮಾಗೆ ಜಾರಿದ ದಕ್ಷ RAS ಅಧಿಕಾರಿ ಸಾವು
ಸ್ವಲ್ಪ ದಿನಗಳ ಹಿಂದಷ್ಟೇ ರುಕ್ಸಾನಾ ಒಡಿಶಾದ ಬೊಲಂಗಿರ್‌ನಲ್ಲಿ ಶೂಟಿಂಗ್‌ನಲ್ಲಿ ತೊಡಗಿದ್ದ ವೇಳೆ ಜ್ಯೂಸೊಂದನ್ನು ಕುಡಿದಿದ್ದು, ಜ್ಯೂಸ್ ಕುಡಿದ ನಂತರ ರುಕ್ಸಾನಾ ಅಸ್ವಸ್ಥರಾಗಿದ್ದರು. ನಂತರ ಆಕೆಯನ್ನು ಆಗಸ್ಟ್ 27ರಂದು ಭವಾನಿಪಟ್ನಾದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಆಕೆಯನ್ನು ಬೊಲಿಂಗಿರ್‌ನಲ್ಲಿರುವ ಭೀಮಾ ಭಾಯ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಆಕೆಯ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ ಹಿನ್ನೆಲೆಯಲ್ಲಿ ಬರ್ಗರ್‌ನ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಶಿಫ್ಟ್ ಮಾಡಲಾಗಿತ್ತು. ನಂತರ ಆಕೆಯನ್ನ ಅಲ್ಲಿಂದ ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಆಕೆಯ ಆರೋಗ್ಯದಲ್ಲಿ ಮತ್ತೆ ಸುಧಾರಣೆ ಕಾಣಿಸಲಿಲ್ಲ ಎಂದು ಸೋದರಿ ರುಬೇ ಬಾನು ಹೇಳಿದ್ದಾರೆ.
ಮಗಳ ಮೇಲೆಯೇ ಅಪ್ಪನ ಬಲಾತ್ಕಾರ: ದೂರು ದಾಖಲಿಸದ ಅಮ್ಮನ ಮೇಲಿನ ಕೇಸ್ ವಜಾ
ಇತ್ತ ರುಕ್ಸಾನಾ ಕುಟುಂಬದವರು ಮಾಡಿರುವ ಈ ವಿಷಪ್ರಾಶನ ಆರೋಪದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ.
ರುಕ್ಸಾನಾಗೆ ಉಂಟಾದ ಸ್ಕ್ರಬ್ ಟೈಫಸ್ ಲಕ್ಷಣಗಳೇನು?
ಸ್ಕ್ರಬ್ ಟೈಫಸ್ ಅನ್ನು ಬುಷ್ ಟೈಫಸ್ ಎಂದೂ ಕರೆಯುತ್ತಾರೆ, ಇದು ಓರಿಯೆಂಟಿಯಾ ಸುಟ್ಸುಗಮುಶಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದೆ. ಸ್ಕ್ರಬ್ ಟೈಫಸ್ ಸೋಂಕಿತ ಹುಳಗಳ ಕಡಿತದ ಮೂಲಕ ಜನರಿಗೆ ಹರಡುತ್ತದೆ. ಜ್ವರ, ತಲೆನೋವು, ಮೈಕೈ ನೋವು ಮತ್ತು ದದ್ದು ಸ್ಕ್ರಬ್ ಟೈಫಸ್‌ನ ಸಾಮಾನ್ಯ ಲಕ್ಷಣಗಳಾಗಿವೆ. ಇದಕ್ಕೆ ಚಿಕಿತ್ಸೆ ನೀಡದೇ ಹೋದರೆ ಇದು ಮಾರಣಾಂತಿಕವಾಗಲಿದೆ. ಸ್ಕ್ರಬ್ ಟೈಫಸ್ ಸೋಂಕಿನ ನಂತರ ಉಂಟಾಗುವ ಮರಣ ಪ್ರಮಾಣವು ಭೌಗೋಳಿಕ ಪ್ರದೇಶ ಮತ್ತು ಬ್ಯಾಕ್ಟೀರಿಯಾದ ಒತ್ತಡವನ್ನು ಅವಲಂಬಿಸಿ 1% ರಿಂದ 60% ದವರೆಗೆ ಇದೆ.