
ಪುರಿ: ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಪ್ರಸಿದ್ಧ ಜಗನ್ನಾಥ ಮಂದಿರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ 800 ಕೋಟಿ ರು. ವೆಚ್ಚದ ಶ್ರೀಮಂದಿರ ಪರಿಕ್ರಮ ಪ್ರಕಲ್ಪ ಪುರಿ ಜಗನ್ನಾಥ ಕಾರಿಡಾರ್ ಅನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬುಧವಾರ ಉದ್ಘಾಟಿಸಿದರು.
ಈ ವೇಳೆ ಮುಖ್ಯಮಂತ್ರಿಗೆ ಪುರಿಯ ಗಜಪತಿ ವಂಶದ ಮಹಾರಾಜ ದಿವ್ಯಸಿಂಘ ದೇವ ಸಾಥ್ ನೀಡಿದರು. ನಂತರ ಮಹಾರಾಜರೊಂದಿಗೆ ಮೆರವಣಿಗೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಶ್ರೀಮಾರ್ಗದುದ್ದಕ್ಕೂ ಮೆರವಣಿಗೆಯಲ್ಲಿ ಸಾಗಿ ಜಗನ್ನಾಥ ಮಂದಿರ ತಲುಪಿದರು. ಅಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ ಜಗನ್ನಾಥನ ಅನುಗ್ರಹದಿಂದಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದೇನೆ ಎಂದು ತಿಳಿಸಿದರು.
ಪುರಿ ಜಗನ್ನಾಥನ ಭಕ್ತಾದಿಗಳು ಗಮನಿಸಿ, ಈ ನಿಯಮ ಪಾಲಿಸದೇ ಇದ್ರೆ ದರ್ಶನ ಸಾಧ್ಯವಾಗೋದಿಲ್ಲ!
ಯೋಜನೆಯನ್ನು ಉದ್ಘಾಟಿಸುವ ಸಲುವಾಗಿ ನಗರವನ್ನು ಹೂವು, ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಅಲ್ಲದೆ ಪ್ರಪಂಚದಾದ್ಯಂತ 90 ದೇಗುಲಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದರ ಸಲುವಾಗಿ ಒಡಿಶಾ ಸರ್ಕಾರ ಬುಧವಾರ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು.
ಅಳಿವಿನಂಚಿನಲ್ಲಿರೋ ಆಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ನಿಲ್ಲಿಸಿದ ಡಿಆರ್‌ಡಿಒ!
ಏನಿದು ಪುರಿ ಕಾರಿಡಾರ್?:
ಶ್ರೀಮಂದಿರ ಪರಿಕ್ರಮ ಪ್ರಕಲ್ಪ ಎಂದು ಕರೆಯಲಾಗುವ ಪುರಿ ಜಗನ್ನಾಥ ಅಭಿವೃದ್ಧಿ ಕಾರಿಡಾರ್‌ನ್ನು 800 ಕೋಟಿ ರು. ವೆಚ್ಚದಲ್ಲಿ ಮಾಡಲಾಗಿದೆ. ಇದರಲ್ಲಿ ಐತಿಹಾಸಿಕ ಪುರಿ ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದ್ದು,. ಪ್ರಮುಖವಾಗಿ ಜಗನ್ನಾಥ ಮಂದಿರವನ್ನು ಸಂಪರ್ಕಿಸುವ ರಸ್ತೆಯನ್ನು ಅಗಲಗೊಳಿಸಿ ಶ್ರೀಮಾರ್ಗ ಎಂದು ಹೆಸರಿಸಲಾಗಿದೆ. ಅಲ್ಲದೆ ಶ್ರೀಸೇತು ಎಂಬ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ. ಜೊತೆಗೆ ದೇಗುಲಕ್ಕೆ ಭರುವ ಭಕ್ತಾದಿಗಳಿಗೆ ವಾಹನ ನಿಲ್ಲಿಸಲು ಜಗನ್ನಾಥ ಬಲ್ಲವ ಪಾರ್ಕಿಂಗ್ ನಿರ್ಮಿಸಲಾಗಿದೆ. ಇದರ ಜೊತೆಗೆ ಧಾರ್ಮಿಕ ಕೇಂದ್ರ, ಶೌಚಾಲಯ ವ್ಯವಸ್ಥೆ, ಲಗೇಜು ಕೊಠಡಿ, ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ