82 ರ ಪತಿ, 80 ವರ್ಷದ ಪತ್ನಿ ಗೆ ಕಡೆಗೂ ಡೈವೋರ್ಸ್!

By Kannadaprabha News  |  First Published Nov 29, 2019, 3:38 PM IST

ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಸಾಮಾನ್ಯ. ಇಲ್ಲೊಂದು ಜೋಡಿ 80 ನೇ ವಯಸ್ಸಿಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಬೇರೆ ಬೇರೆಯಾಗಿದ್ದರು. ಇದೀಗ ಡಿವೋರ್ಸ್ ಪಡೆದುಕಂಡಿದ್ದಾರೆ. 


ಮದುರೈ (ನ. 29): ವೃದ್ಧಾಪ್ಯದಲ್ಲಿ ಪರಾವಲಂಬನೆ ಸಾಮಾನ್ಯ. ಆದರೆ, ಇಲ್ಲೊಂದು ವೃದ್ಧ ದಂಪತಿ ತಮ್ಮ 80 ನೇ ವಯಸ್ಸಿ ನಲ್ಲಿ ಸಾಂಗತ್ಯದ ಬದಲಾಗಿ ವಿಚ್ಚೇದನ ಪಡೆದುಕೊಂಡಿದೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಾಲಯಂ ಪಟ್ಟಿಯ ವೇಲುಚಾಮಿ(82), ಕಸ್ತೂರಿ (80) ವಿಚ್ಛೇದನ ಪಡೆದುಕೊಂಡವರು. ಈ ಜೋಡಿ 1962 ರಲ್ಲಿ ವಿವಾಹವಾಗಿದ್ದರು.

ಪ್ರೇಮ ಸುದೀರ್ಘ, ದಾಂಪತ್ಯ ಕ್ಷಣಿಕ, ಯಾಕ್ಹೀಗೆ?

Tap to resize

Latest Videos

ತದನಂತರ ದಂಪತಿಗಳಿಬ್ಬರ ನಡುವೆ ಸರಿಪಡಿಸಿಕೊಳ್ಳಲಾಗದ ಭಿನ್ನಾಭಿಪ್ರಾಯ ಕಂಡುಬಂದಿತ್ತು. ಇಬ್ಬರೂ ಕಳೆದ 25 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅಲ್ಲದೇ, ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 

click me!