ಮುಂದುವರಿದ ಜಾತಿಗಳು ಮೀಸಲು ಪಟ್ಟಿಯಿಂದ ಹೊರಬನ್ನಿ, ಎಸ್‌ಸಿ-ಎಸ್‌ಟಿ ಒಳಮೀಸಲು ತೀರ್ಪು ಕಾಯ್ದಿರಿಸಿದ ಸುಪ್ರೀಂ

By Kannadaprabha NewsFirst Published Feb 9, 2024, 9:00 AM IST
Highlights

ಮುಂದುವರಿದ ಜಾತಿಗಳು ಮೀಸಲು ಪಟ್ಟಿಯಿಂದ ಹೊರಬರಲಿ. ಅವರೇಕೆ ಸಾಮಾನ್ಯ ವರ್ಗ ಜತೆ ಸ್ಪರ್ಧಿಸಬಾರದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ನವದೆಹಲಿ (ಫೆ.9): ಹಿಂದುಗಳಿದ ಸಮುದಾಯಗಳಲ್ಲಿರುವ, ಈಗಾಗಲೇ ಉತ್ತಮ ಸಾಧನೆ ಮಾಡಿರುವ ಕೆಲ ಶ್ರೀಮಮಂತ ಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಏಕೆ ಹೊರಗಿಡಬಾರದು? ಅವರು ಕೂಡ ಸಾಮಾನ್ಯ ವರ್ಗದ ಜನರೊಂದಿಗೆ ಸ್ಪರ್ಧಿಸಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ನೇತೃತ್ವದ 7 ಸದಸ್ಯರ ಸಾಂವಿಧಾನಿಕ ಪೀಠವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಮೀಸಲು ಉಪವರ್ಗೀಕರಣಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಫೆ.14ಕ್ಕೆ ಇಷ್ಟಲಿಂಗ ಪೂಜೆ: ಕೂಡಲ ಶ್ರೀ

‘ಸದ್ಯ ಉತ್ತಮ ಸಾಧನೆಯೊಂದಿಗೆ ಮುನ್ನೆಲೆಗೆ ಬಂದಿರುವ ಕೆಲ ಸಮುದಾಯಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಡಬಾರದೇಕೆ? ಅವರು ಏಕೆ ಮೀಸಲಾತಿಯಲ್ಲಿರಬೇಕು? ಸಾಮಾನ್ಯ ವರ್ಗಗಳೊಂದಿಗೆ ಸ್ಪರ್ಧಿಸಬೇಕು. ಮೀಸಲು ಪಟ್ಟಿಯಲ್ಲೇ ಏಕೆ ಅವರು ಇರಬೇಕು?’ ಎಂದು ಪ್ರಶ್ನಿಸಿದೆ.

ಎಲ್ಲಾ ರೀತಿಯ ಮೀಸಲಾತಿಯನ್ನು ವಿರೋಧಿಸಿದ್ದರು ನೆಹರು: ಮುಖ್ಯಮಂತ್ರಿಗಳಿಗೆ ಬರೆದ ಪತ್ರ ನೆನಪಿಸಿದ ಮೋದಿ!

ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಒಳಮೀಸಲಾತಿ ನೀಡುವ ಹಕ್ಕು
ರಾಜ್ಯ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಎಸ್‌ಟಿ ಎಸ್‌ಸಿ ಸಮುದಾಯಗಳಲ್ಲಿ ಯಾವುದೇ ಒಳ ಮೀಸಲಾತಿ ನೀಡುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಎಸ್ಟಿ ಮತ್ತು ಎಸ್‌ಸಿ ಸಮುದಾಯ ಗಳನ್ನು ಮತ್ತಷ್ಟು ವರ್ಗೀಕರಿಸಲು ಹಾಗೂ ಮತ್ತೆ ಅವುಗಳಿಗೆ ಮೀಸಲಾತಿಯಲ್ಲೇ ವಿಶೇಷ ಮೀಸಲಾತಿ ನೀಡಲು ಸಾಧ್ಯವಿಲ್ಲ ಹಾಗೂ ಈ ಬಗ್ಗೆ ರಾಜ್ಯಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು 2004ರ ಇ.ವಿ. ಚಿನ್ನಯ್ಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅದರ ಮರುಪರಿಶೀಲನೆ ಹಾಗೂ ರಾಜ್ಯಗಳ ಅಧಿಕಾರದ ಕುರಿತ ಅರ್ಜಿ ವಿಚಾರಣೆ ಇದಾಗಿದೆ.

click me!