ಒಬಾಮಾ ಆತ್ಮಕತೆಯಲ್ಲಿ ಮನಮೋಹನ್ ಸಿಂಗ್ ಬಗ್ಗೆ ಮೆಚ್ಚುಗೆ| ಮೋದಿ ಹೆಸರೇ ಇಲ್ಲ ಎಂದು ಟ್ವೀಟ್ ಮಾಡಿದ ತರೂರ್|
ನವದೆಹಲಿ(ನ.17): ಕಾಂಗ್ರೆಸ್ ನಾಯಕ ಶಶಿ ತರೂರ್ ಭಾನುವಾರ ಸರಣಿ ಟ್ವೀಟ್ ಮಾಡಿ ಮಾಡಿ ಕೆಲ ದಿನಗಳಲ್ಲೇ ಬಿಡುಗಡೆ ಕಾಣಲಿರುವ ಅವರ ಆತ್ಮಕತೆ 'A Promised Land' ಬಗ್ಗೆ ಬರೆದಿದ್ದಾರೆ. ಅವರ ಈ ಟ್ವೀಟ್ ಒಬಾಮಾ ತಮ್ಮ ಕೃತಿಯಲ್ಲಿ ಡಾ. ಸಿಂಗ್ ಹಾಗೂ ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿದ ಬಳಿಕ ಬಂದಿವೆ.
ರಾಹುಲ್ ಯೋಗ್ಯತೆಗೆ ಸವಾಲೆಸೆದ್ರೆ, ಡಾ. ಸಿಂಗ್ ಹೊಗಳಿದ ಒಬಾಮಾ!
undefined
ಕೆಲ ದಿನಗಳ ಹಿಂದಷ್ಟೇ ಒಬಬಾಮಾರ ಈ ಕೃತಿಯಲ್ಲಿ ರಾಹುಲ್ ಗಾಂಧಿ ಕುರಿತಾಗಿ ಉಲ್ಲೇಖಿಸಿದ್ದು, ಇದರಲ್ಲಿ ಪಾಮಾ ಅವರನ್ನು ನರ್ವಸ್ ನಾಯಕ ಎಂದು ಕರೆದಿದ್ದರು. ಈ ವಿಚಾರ ಅನೇಕ ಮಂದಿಯನ್ನು ಆಕ್ರೋಶಕ್ಕೀಡು ಮಾಡಿತ್ತು.
ಒಬಾಮಾರ ಈ ಕೃತಿ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ 'ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಮನಮೋಹನ್ ಸಿಂಗ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಮೋದಿ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ' ಎಂದಿದ್ದಾರೆ. ಅಲ್ಲದೇ ಎರಡು ಆವೃತ್ತಿಯಲ್ಲಿ ಬಿಡುಗಡೆಗೊಳ್ಳಲಿರುವ ಬರಾಕ್ ಒಬಾಮಾರ ಆತ್ಮಕತೆಯ ಮೊದಲ ಭಾಗದ ಅಡ್ವಾನ್ಸ್ಡ್ ಕಾಪಿಯಲ್ಲಿ ಭಾರತದ ಬಗ್ಗೆ ಎಲ್ಲೆಲ್ಲಾ ಉಲ್ಲೇಖಿಸಲಾಗಿದೆಯೋ ಅದೆಲ್ಲವನ್ನೂ ಓದಿರುವುದಾಗಿ ತಿಳಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆ: ಸ್ಪರ್ಧಿಗಳ ಬಹಿರಂಗ ಚರ್ಚೆ ನಡೆಯೋ ಕೋಣೆಯ ಟೆಂಪರೇಚರ್ ಕೂಡಾ ಇಂಪಾರ್ಟೆಂಟ್
2. Huge praise for Dr ManMohan Singh who is warmly described as "wise, thoughtful, &scrupulously honest", "a man of uncommon wisdom& decency" with whom he enjoyed "a warm & productive relationship" though MMS was "cautious in foreign policy". His regard & respect shine through.
— Shashi Tharoor (@ShashiTharoor)ಟ್ವೀಟ್ ಮಾಡಿರುವ ತರೂರ್ 'ದೊಡ್ಡ ಸುದ್ದಿ: ಹೆಚ್ಚೇನೂ ಹೇಳುವುದಿಲ್ಲ. 902ಪುಟಗಳಲ್ಲಿ ನರೇಂದ್ರ ಮೋದಿಯವರ ಹೆಸರೆತ್ತಿ ಒಂದು ಬಾರಿಯೂ ಬರೆದಿಲ್ಲ' ಎಂದಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿ ಮನಮೋಹನ್ ಸಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಬುದ್ಧಿವಂತ, ಪ್ರಮಾಣಿಕ ಹಾಗೂ ವಿಚಾರಧಾರೆಯುಳ್ಳ ವ್ಯಕ್ತಿ ಎಂದು ಕರೆದಿದ್ದಾರೆ. ಅವರೊಬ್ಬ ಅಸಾಮಾನ್ಯ ಜ್ಞಾನಿ ಹಾಗೂ ಉತ್ಸಾಹಿಯಾಗಿದ್ದರು. ಅವರು ವಿದೇಶೀ ಸಂಬಂಧಗಳ ಬಗ್ಗೆ ಎಚ್ಚರದಿಂದಿರುತ್ತಿದ್ದರು. ಹೀಗಾಗೇ ಬೇರೆಯವರು ಅವರನ್ನು ಗೌರವಿಸುತ್ತಿದ್ದರು ಎಂದು ಬರೆದಿದ್ದಾರೆ.