ಶೇ.16ರಷ್ಟುವಯಸ್ಕರಿಗೆ 2 ಡೋಸ್‌ ಲಸಿಕೆ ಪೂರ್ಣ

By Kannadaprabha News  |  First Published Sep 3, 2021, 9:32 AM IST
  • ದೇಶದಲ್ಲಿ ಲಸಿಕಾ ಅಭಿಯಾನ ಕಾವು ಪಡೆದುಕೊಂಡಿದ್ದು, ಶೇ. 16ರಷ್ಟು ವಯಸ್ಕರು 2 ಡೋಸ್‌ ಅನ್ನು ಪೂರ್ಣಗೊಳಿಸಿದ್ದಾರೆ.
  • ಶೇ.54ರಷ್ಟು ಮಂದಿ ಮೊದಲ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ

ನವದೆಹಲಿ (ಸೆ.03): ದೇಶದಲ್ಲಿ ಲಸಿಕಾ ಅಭಿಯಾನ ಕಾವು ಪಡೆದುಕೊಂಡಿದ್ದು, ಶೇ. 16ರಷ್ಟು ವಯಸ್ಕರು 2 ಡೋಸ್‌ ಅನ್ನು ಪೂರ್ಣಗೊಳಿಸಿದ್ದಾರೆ. ಶೇ.54ರಷ್ಟು ಮಂದಿ ಮೊದಲ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ದೇಶದಲ್ಲಿ ಇದುವರೆಗೆ ಒಟ್ಟು 66.89 ಕೋಟಿ ಡೋಸ್‌ ಲಸಿಕೆಯನ್ನು ನೀಡಲಾಗಿದೆ. ಸಿಕ್ಕಿಂ, ದಾದ್ರಾ, ನಗರ್‌ ಹವೇಲಿ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಎಲ್ಲಾ ವಯಸ್ಕರಿಗೂ ಕನಿಷ್ಠ 1 ಡೋಸ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ. 

Latest Videos

undefined

ಒಂದೇ ದಿನದಲ್ಲಿ 47000 + ಕೋವಿಡ್ ಕೇಸ್‌ : 2 ತಿಂಗಳ ಗರಿಷ್ಠ

ಆಗಸ್ಟ್‌ವೊಂದರಲ್ಲಿಯೇ 18.38 ಕೊಟಿ ಡೋಸ್‌ ಲಸಿಕೆಯನ್ನು ವಿತರಿಸಲಾಗಿದೆ. ಅಂದರೆ ದಿನಕ್ಕೆ ಸರಾಸರಿ 59.29 ಲಕ್ಷ ಡೋಸ್‌ ಲಸಿಕೆಯನ್ನು ನೀಡಲಾಗಿದೆ. ಆಗಸ್ಟ್‌ ತಿಂಗಳ ಕೊನೆಯ ವಾರದಲ್ಲಿ ದಿನಕ್ಕೆ ಸರಾಸರಿ 80 ಲಕ್ಷಕ್ಕೂ ಅಧಿಕ ಡೋಸ್‌ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ

click me!