ಕಳ್ಳತನ ಮುಚ್ಚಿಡಲು ಐವಿ ಡ್ರಿಪ್‌ನಲ್ಲಿ ನಲ್ಲಿ ನೀರು ತುಂಬಿಸಿದ ನರ್ಸ್, 10 ರೋಗಿಗಳ ಸಾವು!

By Suvarna NewsFirst Published Jan 5, 2024, 7:17 PM IST
Highlights

ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹಿರಿಯ ನರ್ಸ್ ಒಬ್ಬರು ಐವಿ ಡ್ರಿಪ್ ಕದ್ದು ಬೇರೆಡೆಗೆ ಮಾರಾಟ ಮಾಡಿದ್ದಾರೆ. ಈ ತಪ್ಪನ್ನು ಮುಚ್ಚಿಡಲು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಐವಿ ಡ್ರಿಪ್‌ನಲ್ಲಿ ನಲ್ಲಿ ನೀರು ತುಂಬಿಸಿ ರೋಗಿಗಳಿಗೆ ನೀಡಲಾಗಿದೆ.ಇದರ ಪರಿಣಾಮ 10 ರೋಗಿಗಳು ಮೃತಪಟ್ಟಿದ್ದಾರೆ.

ಮೆಡ್‌ಫೋರ್ಡ್(ಜ.05) ತಪ್ಪು ಮುಚ್ಚಿಡಲು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ಅಮಾಯಕ ರೋಗಿಗಳು ಮೃತಪಟ್ಟಿದ್ದಾರೆ. ಹೌದು, ಆಸ್ಪತ್ರೆಯ ನರ್ಸ್‌ಗಳ ಪೈಕಿ ಓರ್ವ ಹಿರಿಯ ನರ್ಸ್ ಐವಿ ಡ್ರಿಪ್ ಕದ್ದು ಬೇರೆಡೆಗೆ ಮಾರಾಟ ಮಾಡಿದ್ದಾರೆ. ಈ ಹಿರಿಯ ನರ್ಸ್‌ ಮಾಡಿದ ತಪ್ಪನ್ನು ಮುಚ್ಚಿಡಲು ಹೋದ ಮತ್ತೊಬ್ಬ ನರ್ಸ್, ರೋಗಿಗಳಿಗೆ ಐವಿ ಡ್ರಾಪ್‌ನಲ್ಲಿ ಔಷಧ ಬದಲು ನಲ್ಲಿ ನೀರು ಹಾಕಿ ರೋಗಿಗಳಿಗೆ ಇಂಜೆಕ್ಟ್ ಮಾಡಿದ್ದಾರೆ. ಇದರ ಪರಿಣಾಮ 10 ರೋಗಿಗಳು ಮೃತಪಟ್ಟ ಘಟನೆ ಅಮೆರಿಕದ ಮೆಡ್‌ಫೋರ್ಡ್‌ನಲ್ಲಿ ನಡೆದಿದೆ.

ಒರೆಗಾನ್ ಆಸ್ಪತ್ರೆಯಿಂದ ರೋಗಿಗಳ ನೀಡುವ ಐವಿ ಡ್ರಾಪ್ ಔಷಧವನ್ನು ನರ್ಸ್ ಒಬ್ಬರು ಬೇರೊಂದು ಆಸ್ಪತ್ರೆಗೆ ಕದ್ದು ಮಾರಾಟ ಮಾಡಿದ್ದಾರೆ. ಇದರಿಂದ ಒರೆಗಾನ್ ಆಸ್ಪತ್ರೆಯಲ್ಲಿನ ಐವಿ ಡ್ರಾಪ್ ಲೆಕ್ಕದಲ್ಲಿ ಭಾರಿ ವ್ಯತ್ಯಾಸ ಕಾಣುವ ಸಾಧ್ಯತೆ ಅರಿತ ನರ್ಸ್, ತಪ್ಪು ಮುಚ್ಚಿಡಲು ಭರ್ಜರಿ ಐಡಿಯಾ ಮಾಡಿದ್ದಾರೆ. ರೋಗಿಗಳ ವರದಿಯಲ್ಲಿ ಒಂದೊಂದು ಐವಿ ಡ್ರಿಪ್ ಹಾಕಲಾಗಿದೆ ಎಂದು ನಮೂದಿಸಿದ ನರ್ಸ್, ತಪಾಸಣೆಗೆ ಬಂದಾಗ ಯಾರಿಗೂ ಗೊತ್ತಾಗಬಾರದು ಎಂದು ಐವಿ ಡ್ರಿಪ್‌ನಲ್ಲಿ ನಲ್ಲಿ ನೀರು ತುಂಬಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಶವಪರೀಕ್ಷೆಗೆ ವೈದ್ಯರಿಲ್ಲದೆ ಆಸ್ಪತ್ರೆ ಮುಂದೆ ಇಡೀ ದಿನ ಕಾದ ಆಂಬುಲೆನ್ಸ್!

ನೀರು ತುಂಬಿ ಐವಿ ಡ್ರಿಪ್‌ನ್ನು ರೋಗಿಗಲಿಗೆ ಇಂಜೆಕ್ಟ್ ಮಾಡಿದ್ದಾರೆ. ಇದರ ಪರಿಣಾಮ 10 ರೋಗಿಗಳು ಮೃತಪಟ್ಟಿದ್ದಾರೆ. ದುರಂತ ಸಂಭವಿಸುತ್ತಿದ್ದಂತೆ ಆಸ್ಪತ್ರೆ ಎಚ್ಚೆತ್ತುಕೊಂಡಿದೆ. ರೋಗಿಗಳ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ನರ್ಸ್‌ಗಳ ಕಳ್ಳಾಟ, ರೋಗಿಗಳ ಜೊತೆಗೆ ಚೆಲ್ಲಾಟ ಬಯಲಾಗಿದೆ.

ಕನಿಷ್ಠ 10 ರೋಗಿಗಳು ಮೃತಪಟ್ಟಿದ್ದಾರೆ. ಹಲವು ರೋಗಿಗಳು ಅಸ್ವಸ್ಥಗೊಂಡಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿದೆ. ಈ ಘಟನೆ ಆಘಾತ ತಂದಿದೆ. ಎಲ್ಲಾ ರೋಗಿಗಳಿಗೆ ಸೂಕ್ತ ಆರೈಕೆ ನೀಡುತ್ತೇವೆ. ಇದರ ನಡುವೆ ಕೆಲ ಸಿಬ್ಬಂದಿಗಳ ತಪ್ಪು ನಡೆಯಿಂದ ದುರಂತ ಸಂಭವಿಸಿದೆ. ಪೊಲೀಸರ ತನಿಖೆಗೆ ಎಲ್ಲಾ ನೆರವು ನೀಡುತ್ತೇವೆ ಎಂದು ಆಸ್ಪತ್ರೆ ಹೇಳಿದೆ.

ಶಸ್ತ್ರಚಿಕಿತ್ಸೆ ವೇಳೆ ಅಜ್ಜಿಗೆ ಪಂಚ್‌ ಮಾಡಿದ ಚೀನಾದ ವೈದ್ಯ ಅಮಾನತು; ಮಹಿಳೆಯ ಕಣ್ಣೂ ಢಮಾರ್: ವಿಡಿಯೋ ವೈರಲ್‌

ಈ ಘಟನೆ ಸಂಬಂಧ ಪೊಲೀಸ್ ತನಿಖೆ ನಡೆಯುತ್ತಿದೆ. ಆದರೆ ಇದುವರೆಗೆ ಬಂಧನ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಘಟನೆ ಮೆಡ್‌ಫೋರ್ಡ್‌ನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ರೋಗಿಗಳ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

click me!