ಕೋಮು ಹಿಂಸಾಚಾರದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಜಡ್ಜ್ ಅಂಜಲಿ, 3 ವರ್ಷದ ಪುತ್ರಿ!

By Suvarna News  |  First Published Aug 3, 2023, 12:02 PM IST

ನುಹ್ ಪಟ್ಟಣದಲ್ಲಿ ನಡೆದ ಕೋಮುಗಲಭೆಯಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ. ಈ ಭೀಕರ ಹಿಂಸಾಚಾರದಲ್ಲಿ ಕೂದಲೆಳೆ ಅಂತರದಲ್ಲಿ ಮಹಿಳಾ ಜಡ್ಜ್ ಅಂಜಲಿ ಜೈನ್ ಹಾಗೂ ಅವರ ಮೂರು ವರ್ಷದ ಪುತ್ರಿ ಪಾರಾಗಿದ್ದಾರೆ. ಸಾವಿನ ಸನಿಹದಲ್ಲಿನ ಭಯಾನಕ ಘಟನೆಯನ್ನು ನ್ಯಾಯಾಲಯದ ಸಿಬ್ಬಂದಿ ವಿವರಿಸಿದ್ದಾರೆ.
 


ನುಹ್(ಆ.03) ವಿಶ್ವ ಹಿಂದೂ ಪರಿಷತ್ ಶೋಭಯಾತ್ರೆ ಮೇಲೆ ನಡೆದ ದಾಳಿಯಿಂದ ಆರಂಭಗೊಂಡ ಕೋಮುಗಲಭೆ ಹರ್ಯಾಣ, ಗುರುಗಾಂವ್ ಸೇರಿದಂತೆ ಹಲವು ಪ್ರದೇಶಕ್ಕೆ ವ್ಯಾಪಿಸಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹಿಂದೂಗಳ ಶೋಭಯಾತ್ರೆ ವೇಳೆ ಕಲ್ಲು ತೂರಾಟ, ಗುಂಡಿನ ದಾಳಿಗಳು ನಡೆದಿದೆ. ಈ ಘಟನೆಯಿಂದ ಹಿಂಸಾಚಾರ ಆರಂಭಗೊಂಡು 6 ಮಂದಿಯನ್ನು ಬಲಿಪಡೆದಿದೆ. ಉದ್ರಿಕ್ತರು ಸಿಕ್ಕ ಸಿಕ್ಕ ವಾಹನ, ಅಂಗಡಿ ಮುಂಗಟ್ಟುಗೆ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿದ್ದರು. ಗಲಭೆ ನಡುವೆ ಸಿಲುಕಿದ ನುಹ್ ಜಿಲ್ಲಾ ಕೋರ್ಟ್ ಜಡ್ಜ್ ಅಂಜಲಿ ಜೈನ್ ಹಾಗೂ ಅವರ ಮೂರು ವರ್ಷದ ಪುತ್ರಿ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. 

ಅಂಜಲಿ ಜೈನ್ 3 ವರ್ಷದ ಪುತ್ರಿಯೊಂದಿಗೆ ತಮ್ಮ ಕಾರಿನಲ್ಲಿ ತುರ್ತು ಅಗತ್ಯಕ್ಕಾಗಿ ಪ್ರಯಾಣಿಸುತ್ತಿದ್ದರು. ಸಿಬ್ಬಂದಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ನುಹ್‌ನ ರಸ್ತೆ ರಸ್ತೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದಿಂದ ಕೆಲ ದೂರದ ರಸ್ತೆಯಲ್ಲಿ ಸಾಗುತ್ತಿದ್ದ ರಸ್ತೆಯಲ್ಲೇ ದಿಢೀರ್ ಗಲಭೆ ಶುರುವಾಗಿದೆ. ನಾಲ್ಕು ಬದಿಯ ರಸ್ತೆ ಕೂಡು ಸ್ಥಳ ದಾಟುತ್ತಿದ್ದಂತೆ ಏಕಾಏಕಿ ಉದ್ರಿಕ್ತರ ಗುಂಪು ಪೆಟ್ರೋಲ್ ಬಾಂಬ್ ಎಸೆಯುತ್ತಿರುವ ದೃಶ್ಯ ಕೆಣ್ಣೆರೆದುರೇ ನಡೆದಿದೆ.

Tap to resize

Latest Videos

ಹರ್ಯಾಣದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಹೊತ್ತಿ ಉರಿದ ರೆಸ್ಟೋರೆಂಟ್, ಶಾಲಾ ಕಾಲೇಜು ಬಂದ್!

ಕೆಲ ದೂರದಲ್ಲಿನ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಡುತ್ತಿದ್ದ ಉದ್ರಿಕ್ತರು, ಜಡ್ಜ್ ಕಾರಿನ ಮೇಲೂ ಕಲ್ಲು ಎಸೆದಿದ್ದಾರೆ. ಕಾರನ್ನು ಯಾವುದೇ ಭಾಗಕ್ಕೂ ತಿರುಗಿಸುವ ಸಾಧ್ಯತೆ ಇರಲಿಲ್ಲ. ಎಲ್ಲಾ ದಿಕ್ಕಿನಲ್ಲೂ ಉದ್ರಿಕ್ತರು ಸೇರಿದ್ದರು. ಈ ವೇಳೆ ಸಿಬ್ಬಂದಿ, ತಕ್ಷಣ ಮಗುವನ್ನು ಹಿಡಿದು ಕಾರಿನ ಎಡಭಾಗದಿಂದ ಇಳಿಯುವಂತೆ ಸೂಚಿಸಿದ್ದಾರೆ. ಬಳಿಕ ಸಿಬ್ಬಂದಿ ಕಾರನ್ನು ಅಲ್ಲೆ ಬಿಟ್ಟು ಜಡ್ಜ್ ಹಾಗೂ 3 ವರ್ಷದ ಮಗುವನ್ನು ಕರೆದುಕೊಂಡು ಹೋಗಿ ವಾಹನಗಳ ವರ್ಕ್ ಶಾಪ್ ಬದಿಯಲ್ಲಿ ಆಶ್ರಯ ಪಡೆದಿದ್ದಾರೆ. 

ಉದ್ರಿಕ್ತರು ಟಾರ್ಗೆಟ್ ಮಾಡುವ ಮೊದಲೇ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ವೇಳೆ ಕಲ್ಲು ತೂರಾಟಗಳು ನಡೆಯುತ್ತಿದ್ದ. ಆದರೆ ಕೆಲ ದೂರದಲ್ಲಿದ್ದ ಉದ್ರಿಕ್ತರ ಗುಂಪು ಆಗಮಿಸುವ ಮೊದಲೇ ಸ್ಥಳದಿಂದ ಎಸ್ಕೇಪ್ ಆದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನುಹ್ ರಸ್ತೆಯಿಂದ ಸಾಗಿ ಪಕ್ಕದ ಕಾಲೋನಿ ಸಮೀಪದಲ್ಲಿ ಓಡಿದ್ದಾರೆ. ಬಳಿಕ ಉದ್ರಿಕ್ತರ ದಾಳಿಯಿಂದ ಬಚಾವ್ ಆಗುಲ ವರ್ಕ್‌ಶಾಪ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಕೆಲ ಹೊತ್ತಲ್ಲೇ ವಕೀಲರು ಗುಂಪು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಡ್ಜ್ , ಮಗು ಹಾಗೂ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಆಗಮಿಸುವ ವೇಳೆ ತಮ್ಮ ಫೋಕ್ಸ್‌ವ್ಯಾಗನ್ ಪೋಲೋ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿತ್ತು. ಹಲವು ಕಾರುಗಳು ಇದೇ ರೀತಿ ಹೊತ್ತಿ ಉರಿದಿತ್ತು ಎಂದು ನ್ಯಾಯಾಲಯದ ಸಿಬ್ಬಂದಿ ಭಯಾನಕ ಘಟನೆಯನ್ನು ವಿವರಿಸಿದ್ದಾರೆ.

ಹರ್ಯಾಣ ಕೋಮು ಗಲಭೆ; ವಿಶ್ವ ಹಿಂದೂ ಪರಿಷತ್ ಪ್ರತಿಭಟನೆಗೆ ತಡೆಕೋರಿದ್ದ ಮುಸ್ಲಿಂ ಅರ್ಜಿ ವಜಾ!

ಹರಾರ‍ಯಣದ ನೂಹ್‌ ಪಟ್ಟಣದಲ್ಲಿ ಆರಂಭವಾಗಿದ್ದ ಕೋಮುಗಲಭೆಯ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಗಲಭೆಯಲ್ಲಿ ಭಾಗಿಯಾಗಿದ್ದ 116 ಜನರನ್ನು ಬಂಧಿಸಲಾಗಿದ್ದು ಇತರಿಗಾಗಿ ಶೋಧ ನಡೆಸಲಾಗುತ್ತಿದೆ. ಇನ್ನು ನೂಹ್‌ ಪಟ್ಟಣದ ಗಲಭೆ ಪ್ರೇರಿತವಾಗಿ ರಾಜ್ಯದ ಇತರೆಡೆ ಸೃಷ್ಟಿಯಾಗಿದ್ದ ಗಲಭೆಗಳು ನಿಯಂತ್ರಣಕ್ಕೆ ಬಂದಿದ್ದು ಇದೀಗ ಪರಿಸ್ಥಿತಿ ಸಾಮಾನ್ಯವಾಗಿದೆ. ಗಾಯಾಳುಗಳಿಗೆ ನೂಹ್‌ ಮತ್ತು ಗುರುಗ್ರಾಮದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಚುಕೋರರನ್ನು ಗುರುತಿಸಲಾಗುತ್ತಿದ್ದು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹರಾರ‍ಯಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಹೇಳಿದ್ದಾರೆ. ಅಲ್ಲದೆ ಹಿಂಸಾಕೃತ್ಯದಲ್ಲಿ ಭಾಗಿಯಾದವರಿಂದಲೇ ನಷ್ಟದ ಹಣ ವಸೂಲಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
 

click me!