ನುಹ್‌ ಹಿಂಸಾಚಾರ, ಬಿಟ್ಟು ಭಜರಂಗಿಯನ್ನು ಬಂಧಿಸಿದ ಹರಿಯಾಣ ಪೊಲೀಸ್‌

Published : Aug 15, 2023, 09:19 PM ISTUpdated : Aug 15, 2023, 09:24 PM IST
ನುಹ್‌ ಹಿಂಸಾಚಾರ, ಬಿಟ್ಟು ಭಜರಂಗಿಯನ್ನು ಬಂಧಿಸಿದ ಹರಿಯಾಣ ಪೊಲೀಸ್‌

ಸಾರಾಂಶ

ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದ ನಂತರ ನುಹ್‌ನಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ಅದರ ಬೆಂಕಿ ಗುರುಗ್ರಾಮ್ ಸೇರಿದಂತೆ ಸುತ್ತಮುತ್ತಲಿನ ಅನೇಕ ಪ್ರದೇಶಗಳಿಗೆ ತಲುಪಿತ್ತು.

ನವದೆಹಲಿ (ಆ.15): ನುಹ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಟ್ಟು ಬಜರಂಗಿಯನ್ನು ಫರಿದಾಬಾದ್‌ನಲ್ಲಿರುವ ಅವರ ಮನೆಯಿಂದ ಮಂಗಳವಾರ ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ, ಆಯುಧಗಳನ್ನು ಕಸಿದುಕೊಂಡು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ನುಹ್‌ನಲ್ಲಿ ನಡೆದ ಬ್ರಜಮಂಡಲ ಯಾತ್ರೆಗೂ ಮುನ್ನ, ಬಿಟ್ಟು ಬಜರಂಗಿ ಹಲವಾರು ಪ್ರಚೋದನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟು ಬಂಧನಕ್ಕೆ ಒತ್ತಾಯ ಕೇಳಿಬಂದಿತ್ತು. ಪೊಲೀಸ್ ಮೂಲಗಳ ಪ್ರಕಾರ, ನುಹ್ ಜಿಲ್ಲೆಯ ತೌಡು ಪೊಲೀಸ್ ಠಾಣೆಯ ಅಪರಾಧ ತನಿಖಾ ಸಂಸ್ಥೆ (ಸಿಐಎ) ಬಿಟ್ಟು ಅವರನ್ನು ಬಂಧಿಸಿದೆ.

ಜುಲೈ 31 ರಂದು ನುಹ್‌ನಲ್ಲಿ ನಡೆದ ಹಿಂಸಾಚಾರದ ನಂತರ, ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 148, 149, 332, 353, 186, 395, 397, 506 ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ನುಹ್ ಪೊಲೀಸ್ ವಕ್ತಾರ ಕೃಷ್ಣ ಕುಮಾರ್ ತಿಳಿಸಿದ್ದಾರೆ. ಎಸಿಪಿ ಉಷಾ ಕುಂದು ಅವರ ದೂರಿನ ಅಡಿಯಲ್ಲಿ ಬಂಧನ ಮಾಡಲಾಗಿದೆ. ಆ ಬಳಿಕ ಪೊಲೀಸ್ ತಂಡಗಳು ಹಿಂಸಾಚಾರಕ್ಕೆ ಸಂಬಂಧಿಸಿದ ವೀಡಿಯೊವನ್ನು ಸಹ ಪರಿಶೀಲಿಸಿದವು. ಈ ಎಫ್‌ಐಆರ್‌ ಆಧಾರದ ಮೇಲೆ ಬಿಟ್ಟು ಅವರನ್ನು ಬಂಧಿಸಲಾಗಿತ್ತು.

ನುಹ್ ಹಿಂಸಾಚಾರದ ಮೊದಲು ಬಿಟ್ಟು ಬಜರಂಗಿ ಅವರ ವೀಡಿಯೊ ವೈರಲ್ ಆಗಿತ್ತು: ಜುಲೈ 31 ರ ಮೊದಲು, ಬಿಟ್ಟು ಬಜರಂಗಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಬಿಟ್ಟು, "ನಾನು ಎಲ್ಲಿಗೆ ಮತ್ತು ಎಲ್ಲೆಲ್ಲಿಗೆ ಬರಬೇಕು ಎನ್ನುವುದರ ಬಗ್ಗೆ  ಸಂಪೂರ್ಣ ಸ್ಥಳದ ಮಾಹಿತಿಯನ್ನು ನೀಡಿ" ಎಂದು ಹೇಳಿದ್ದರು. ವಿಡಿಯೋದಲ್ಲಿ ಬಿಟ್ಟು ಬಜರಂಗಿ ಕೂಡ ತನ್ನ ಬೆಂಬಲಿಗರನ್ನೂ ತೋರಿಸಿದ್ದಾರೆ. ಸದ್ಯ ಫರಿದಾಬಾದ್ ನ ಪಾಲಿಯಲ್ಲಿದ್ದೇನೆ ಎಂದು ಬಿಟ್ಟು ಬಜರಂಗಿ ಹೇಳಿದ್ದಾರೆ. ಹಿಂಸಾಚಾರದ ದಿನವಾದ ಜುಲೈ 31 ರ ಬೆಳಿಗ್ಗೆ ಬಿಟ್ಟೂವಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

Haryana ಕೋಮುಗಲಭೆ ಎಫೆಕ್ಟ್‌: ಮುಸ್ಲಿಮರನ್ನು ಬಹಿಷ್ಕರಿಸಲು ನಿರ್ಧರಿಸಿದ 14 ಗ್ರಾಮಗಳು

ಬ್ರಜಮಂಡಲ ಯಾತ್ರೆಯನ್ನು ಜುಲೈ 31 ರಂದು ನುಹ್‌ನಲ್ಲಿ ಕೈಗೊಳ್ಳಲಾಯಿತು. ಇದೇ ವೇಳೆ ತಿರಂಗಾ ಚೌಕ್ ನಲ್ಲಿ ಹಿಂಸಾಚಾರ ಆರಂಭವಾಯಿತು. ಇಲ್ಲಿ ಯಾತ್ರೆ ಮೇಲೆ ಕಲ್ಲು ತೂರಾಟ ನಡೆದಿದೆ. ಉದ್ರಿಕ್ತರು ಯಾತ್ರಾರ್ಥಿಗಳ ವಾಹನಗಳನ್ನು ಧ್ವಂಸಗೊಳಿಸಿದರು ಮತ್ತು ಬೆಂಕಿ ಹಚ್ಚಿದರು. ಇದಲ್ಲದೇ ಅಂಗಡಿಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಿದ್ದಾರೆ. ನುಹ್ ಹಿಂಸಾಚಾರದ ಪರಿಣಾಮ ಗುರುಗ್ರಾಮ್, ಫರಿದಾಬಾದ್, ಪಲ್ವಾಲ್, ರೇವಾರಿ ಮತ್ತು ಪಾಣಿಪತ್‌ನಲ್ಲಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ನಡೆದಿದ್ದವು.

ಹರಿಯಾಣ ಕೋಮುಗಲಭೆಯಲ್ಲಿ ನಾಲ್ವರ ಸಾವು, ನುಹ್‌ ಜಿಲ್ಲೆಯಲ್ಲಿ ಎರಡು ದಿನ ಕರ್ಫ್ಯೂ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ
ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು