'ಬಾಬಾರನ್ನು ಕೂಡಲೇ ಬಂಧಿಸಿ' ರಾಮ್ ದೇವ್ ವಿರುದ್ಧ  ದೂರು

By Suvarna NewsFirst Published Jun 1, 2021, 10:20 PM IST
Highlights

* ಬಾಬಾ ರಾಮದೇವ್ ವಿರುದ್ಧ  ದೆಹಲಿ ಪೊಲೀಸ್ ಕಮಿಷನರ್ ಗೆ ದೂರ
* ಅಲೋಪತಿ ಚಿಕಿತ್ಸೆ ಬಗ್ಗೆ ರಾಮದೇವ್ ಹಗುರವಾಗಿ ಮಾತನಾಡುತ್ತಿದ್ದಾರೆ
* ಸರ್ಕಾರ ಅಲೋಪತಿ ಚಿಕಿತ್ಸೆ ಮೇಲೆ ಕೋಟ್ಯಾಂತರ ಹಣ ಖರ್ಚು ಮಾಡಿದೆ
* ಮೈಸೂರು ಮೂಲದ ನಾಗೇಶ್ ಅವರಿಂದ ದೂರು

ಬೆಂಗಳೂರು (ಜೂ. 01)  ಯೋಗಗುರು ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲಾಗಿದೆ. ದೆಹಲಿ ಪೊಲೀಸ್ ಕಮಿಷನರ್ ಗೆ ದೂರು  ನೀಡಲಾಗಿದ್ದು  ಬಾಬಾ ರಾಮದೇವ್ ಬಂಧನಕ್ಕೆ ಆಗ್ರಹ ಮಾಡಲಾಗಿದೆ.

ಅಲೋಪಥಿ ಚಿಕಿತ್ಸೆ ಬಗ್ಗೆ ರಾಮದೇವ್ ಹಗುರವಾಗಿ ಮಾತನಾಡುತ್ತಿದ್ದಾರೆ. ಸರ್ಕಾರ ಅಲೋಪತಿ ಚಿಕಿತ್ಸೆ ಮೇಲೆ ಕೋಟ್ಯಾಂತರ ಹಣ ಖರ್ಚು ಮಾಡಿದೆ. ಕೊವ್ಯಾಕ್ಸಿನ್ ನೀಡುವ ಕಾರ್ಯ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಅಲೋಪತಿ ಚಿಕಿತ್ಸೆ ಮೇಲೆ ಅನುಮಾನ ಬರುವಂತೆ ರಾಮದೇವ್ ಮಾತನಾಡುತ್ತಿದ್ದಾರೆ.

ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಬಾಬಾ ರಾಮ್ ದೇವ್

ಈ ಕಾರಣದಿಂದ ಅವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್ಎಸ್‌ಯುಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ  ಒತ್ತಾಯಿಸಿದ್ದಾರೆ.

ನಾಗೇಶ್ ಕರಿಯಪ್ಪ ಮೈಸೂರು ಮೂಲದವರು.  ಅಲೋಪಥಿ ಚಿಕಿತ್ಸಾ ವಿಧಾನದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ರಾಮ್ ದೇವ್  ಕೇಂದ್ರ ಆರೋಗ್ಯ ಸಚಿವರ ಪತ್ರದ ನಂತರ ಮಾತನ್ನು ಹಿಂದಕ್ಕೆ ಪಡೆದುಕೊಂಡಿದ್ದರು .

click me!